ಆರೋಗ್ಯದ ಗಣಿಯಾಗಿರುವ ಬೆಳ್ಳುಳ್ಳಿಯನ್ನು ಈ ಸಮಸ್ಯೆ ಇರುವವರು ಮಾತ್ರ ಸೇವಿಸಬಾರದು !

Garlic Side Effects : ಬೆಳ್ಳುಳ್ಳಿಗೆ ಅಡುಗೆಯಲ್ಲಿ ಬಹಳ ಮುಖ್ಯ ಸ್ಥಾನವಿದೆ, ಬಹುತೇಕ ಅಡುಗೆಗಳಲ್ಲಿ ಬೆಳ್ಳುಳ್ಳಿ ಬಳಕೆಯಾಗುತ್ತದೆ.   ಬೆಳ್ಳುಳ್ಳಿ ಯಲ್ಲಿ ಔಷಧೀಯ ಗುಣವೂ ಅಡಗಿದೆ. 

Written by - Ranjitha R K | Last Updated : Apr 18, 2023, 03:38 PM IST
  • ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
  • ಬೆಳ್ಳುಳ್ಳಿಯನ್ನು ಆಂಟಿ ಆಕ್ಸಿಡೆಂಟ್ ಎಂದು ಕರೆಯಲಾಗುತ್ತದೆ.
  • ಬೆಳ್ಳುಳ್ಳಿ ಸೇವನೆ ಕೆಲವರಿಗೆ ಮಾರಕವಾಗಿ ಪರಿಣಮಿಸಬಹುದು.
ಆರೋಗ್ಯದ ಗಣಿಯಾಗಿರುವ ಬೆಳ್ಳುಳ್ಳಿಯನ್ನು ಈ ಸಮಸ್ಯೆ ಇರುವವರು ಮಾತ್ರ ಸೇವಿಸಬಾರದು ! title=

Garlic Side Effects : ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿಯು ಪ್ರಪಂಚದಾದ್ಯಂತ ಶಕ್ತಿಯುತವಾದ  ಆಂಟಿ ಆಕ್ಸಿಡೆಂಟ್ ಎಂದು ಕರೆಯಲಾಗುತ್ತದೆ.  ದೊಡ್ಡ ರೋಗವನ್ನು ಗುಣಪಡಿಸುವ ಸಾಮರ್ಥ್ಯವನ್ನು ಬೆಳ್ಳುಳ್ಳಿ ಹೊಂದಿದೆ. ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದರೂ ಬೆಳ್ಳುಳ್ಳಿ  ಸೇವನೆ ಕೆಲವರಿಗೆ ಮಾರಕವಾಗಿ ಪರಿಣಮಿಸಬಹುದು. ಕೆಲವು ಕಾಯಿಲೆಗಳಿದ್ದಾಗ ಬೆಳ್ಳುಳ್ಳಿಯನ್ನು ಸೇವಿಸಲೇ ಬಾರದು. 

ಯಾರು ಬೆಳ್ಳುಳ್ಳಿಯಿಂದ ಅಂತರ ಕಾಯ್ದುಕೊಳ್ಳಬೇಕು ? : 
ಲೋ ಬಿಪಿ ಇದ್ದವರು :  
ಬೆಳ್ಳುಳ್ಳಿ ಅಧಿಕ ರಕ್ತದೊತ್ತಡ ರೋಗಿಗಳಿಗೆ ಪರಿಹಾರವಾಗಬಲ್ಲದು. ಆದರೆ ಕಡಿಮೆ ರಕ್ತದೊತ್ತಡ ಸಮಸ್ಯೆಯಲ್ಲಿ ಇದನ್ನು ಸೇವಿಸಬಾರದು. ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಲೋ ಬಿಪಿ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸಬಾರದು. ಈ ಸಮಸ್ಯೆ ಇರುವವರು ಬೆಳ್ಳುಳ್ಳಿಯಿಂದ ಅಂತರ ಕಾಯ್ದುಕೊಳ್ಳಬೇಕು. 

ಇದನ್ನೂ ಓದಿ : ಹೀಟ್ ಸ್ಟ್ರೋಕ್ ನಿಂದ ಉಂಟಾಗುವ ತಲೆನೋವಿಗೆ ಇಲ್ಲಿದೆ ಮನೆಮದ್ದು !

ಯಕೃತ್ತಿನ ಸಮಸ್ಯೆ ಇದ್ದಾಗ :
ಯಕೃತ್ತು, ಕರುಳು ಅಥವಾ ಹೊಟ್ಟೆಯ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸಬಾರದು. ಒಂದು ವೇಳೆ ಈ ಎಲ್ಲಾ ಸಮಸ್ಯೆ ಇದ್ದು ಬೆಳ್ಳುಳ್ಳಿ ಸೇವಿಸುತ್ತಿದ್ದರೆ ಇಂದೇ ಬೆಳ್ಳುಳ್ಳಿ ತಿನ್ನುವುದನ್ನು ಬಿಟ್ಟು ಬಿಡಿ. ಏಕೆಂದರೆ ನೀವು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರೆ, ಬೆಳ್ಳುಳ್ಳಿಯಲ್ಲಿರುವ ಕೆಲವು ಅಂಶಗಳು ಯಕೃತ್ತನ್ನು ಗುಣಪಡಿಸಲು ನೀಡುವ ಔಷಧಿಗಳೊಂದಿಗೆ  ರಿಯಾಕ್ಟ್ ಮಾಡುತ್ತವೆ. ಇದರಿಂದಾಗಿ ಸಮಸ್ಯೆ ಹೆಚ್ಚಾಗುತ್ತದೆ. 

ಇತ್ತೀಚಿಗೆ ಶಸ್ತ್ರಚಿಕಿತ್ಸೆಯಾಗಿದ್ದರೆ :  
ಶಸ್ತ್ರಚಿಕಿತ್ಸೆಗೆ ಒಳಗಾದವರು ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಬೇಕು. ಯಾಕೆಂದರೆ ಬೆಳ್ಳುಳ್ಳಿಯನ್ನು ನ್ಯಾಚುರಲ್ ಬ್ಲಡ್ ಥಿನ್ನರ್ ಎಂದು ಕರೆಯಲಾಗುತ್ತದೆ. ಅಂದರೆ ರಕ್ತವನ್ನು ತೆಳುವಾಗಿಸುವ ಕೆಲಸವನ್ನು ಬೆಳ್ಳುಳ್ಳಿ ಮಾಡುವುದರಿಂದ ಇತ್ತೀಚಿಗೆ ಆಪರೇಷನ್ ಆದವರು ಇದನ್ನು ಸೇವಿಸಬಾರದು.

ಇದನ್ನೂ ಓದಿ : Gooseberry Health Benefits: ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬಂತೆ.. ಸಿಹಿ,ಕಹಿ,ಹುಳಿ ಹೊಂದಿರುವ ಈ ಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ!

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News