ಬಿಸಿ ಹಾಲಿಗೆ ಈ ಕಪ್ಪು ಕಾಳುಗಳನ್ನು ಬೆರೆಸಿ ರಾತ್ರಿ ಸೇವಿಸಿದರೆ ನಿವಾರಣೆಯಾಗುವುದು ಮಲಬದ್ದತೆ !

Constipation Home Remedies:ಮಲಬದ್ಧತೆಗೆ ಅದರ ಮೂಲದಿಂದ ಚಿಕಿತ್ಸೆ ನೀಡಲು ಮನೆಮದ್ದುಗಳನ್ನು ಅನುಸರಿಸಬಹುದು. ಈ ಲೇಖನದಲ್ಲಿ, ಅಂತಹ ಒಂದು ವಿಶೇಷ ಪರಿಹಾರವನ್ನು ನಾವಿಲ್ಲಿ ಹೇಳುತ್ತೇವೆ.  ರಾತ್ರಿ ವೇಳೆಯಲ್ಲಿ ಈ ಮನೆಮದ್ದನ್ನು ಬಳಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.   

Written by - Ranjitha R K | Last Updated : Nov 10, 2023, 04:18 PM IST
  • ಇತ್ತೀಚಿನ ದಿನಗಳಲ್ಲಿ, ಈ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ.
  • ಸಬ್ಜಾ ಬೀಜಗಳು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ
  • ಮಲಬದ್ಧತೆ ನಿವಾರಣೆಗೆ ಸಬ್ಜಾ ಬೀಜಗಳನ್ನು ಹೇಗೆ ಸೇವಿಸಬೇಕು ?
ಬಿಸಿ ಹಾಲಿಗೆ ಈ ಕಪ್ಪು ಕಾಳುಗಳನ್ನು ಬೆರೆಸಿ ರಾತ್ರಿ ಸೇವಿಸಿದರೆ ನಿವಾರಣೆಯಾಗುವುದು ಮಲಬದ್ದತೆ ! title=

Constipation Home Remedies : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಪ್ಪಾದ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಮಲಬದ್ಧತೆಯ ಸಮಸ್ಯೆಯಿಂದ ಬಳಲುವಂತಾಗಿದೆ. ಇತ್ತೀಚಿನ ದಿನಗಳಲ್ಲಿ, ಈ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇನ್ನು ಜನರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.  ಮಲಬದ್ಧತೆ ಸಮಸ್ಯೆ ಎದುರಾದರೆ , ಮಲವು ಗಟ್ಟಿಯಾಗುತ್ತದೆ ಮತ್ತು ಹೊಟ್ಟೆ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಈ ಕಾರಣದಿಂದಾಗಿ,  ಹಸಿವು ಕಡಿಮೆಯಾಗುತ್ತದೆ. ಸದಾ ಹೊಟ್ಟೆ ಉಬ್ಬಿಕೊಂಡಂತೆ ಇರುತ್ತದೆ. ಇದಲ್ಲದೇ ಹೊಟ್ಟೆನೋವು, ಗ್ಯಾಸ್, ಹುಳಿ ತೇಗು, ವಾಕರಿಕೆ ಮುಂತಾದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇಷ್ಟು ಮಾತ್ರವಲ್ಲದೆ, ದೀರ್ಘಕಾಲದ ಮಲಬದ್ಧತೆ ಪೈಲ್ಸ್ ಮತ್ತು ಫಿಸ್ಟುಲಾದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮಸ್ಯೆಯಿಂದ ಪಾರಾಗಲು ಜನರು ನಾನಾ ತರಹದ ಪೌಡರ್, ಔಷಧಗಳನ್ನು ಸೇವಿಸಲು ಆರಂಭಿಸುತ್ತಾರೆ. ಆದರೆ, ಅವುಗಳನ್ನು ಸೇವಿಸುವವರೆಗೆ ಮಾತ್ರ ಅವುಗಳ ಪರಿಣಾಮವು ಇರುತ್ತದೆ. ಅವುಗಳ ಬಳಕೆಯನ್ನು ನಿಲ್ಲಿಸಿದಾಗ, ಮತ್ತೆ  ಮಲಬದ್ಧತೆಯ ಸಮಸ್ಯೆ  ಎದುರಾಗುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ತೊಡೆದುಹಾಕಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. 

ಸಬ್ಜಾ ಬೀಜಗಳು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ : 
ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸಲು, ತುಳಸಿ ಬೀಜಗಳು ಅಥವಾ ಸಬ್ಜಾ ಬೀಜಗಳನ್ನು ಬಳಸಬಹುದು. ಇದರಲ್ಲಿ ಫೈಬರ್ ಹೇರಳವಾಗಿರುತ್ತದೆ.  ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಇದು ಮಲವನ್ನು ಮೃದುಗೊಳಿಸುತ್ತದೆ. ಹೊಟ್ಟೆಯ ತ್ಯಾಜ್ಯವನ್ನು ಹೊರಹಾಕಲು ಸುಲಭವಾಗುತ್ತದೆ. ಇದರಲ್ಲಿರುವ ತೈಲಗಳು ಗ್ಯಾಸ್ ಮತ್ತು ಅತಿಸಾರದ ಸಮಸ್ಯೆಯಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ರೀತಿಯಲ್ಲಿ ದೇಹವನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ. ಸಬ್ಜಾ ಬೀಜಗಳನ್ನು ಸೇವಿಸುವುದರಿಂದ ಮಲಬದ್ಧತೆ ಮಾತ್ರವಲ್ಲದೆ ದೇಹದ ಅನೇಕ ಗಂಭೀರ ಸಮಸ್ಯೆಗಳನ್ನು ಸಹ ನಿವಾರಿಸಬಹುದು.

ಇದನ್ನೂ ಓದಿ : ಟ್ರೆಡ್‌ಮಿಲ್‌ನಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ನೀವು ತೊಂದರೆಗೆ ಸಿಲುಕಬಹುದು

ಸಬ್ಜಾ ಬೀಜಗಳನ್ನು ಹೇಗೆ ಸೇವಿಸಬೇಕು ? : 
ನೀವು ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಒಂದು ಲೋಟ ಹಾಲಿಗೆ ಒಂದು ಚಮಚ ಸಬ್ಜಾ ಬೀಜಗಳನ್ನು ಬೆರೆಸಿ. ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಯಿಂದ ಶೀಘ್ರ ಪರಿಹಾರ ಪಡೆಯಬಹುದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ರಾತ್ರಿ ವೇಳೆ ಇದನ್ನು ಸೇವಿಸಲು ಸಾಧ್ಯವಾಗದಿದ್ದರೆ, ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಇದರಿಂದ ಕೂಡಾ ಸಾಕಷ್ಟು ಪ್ರಮಾಣದ ಲಾಭವನ್ನು ಪಡೆಯಬಹುದು. 

ಇದನ್ನೂ ಓದಿ : Blood Sugar ನಿಯಂತ್ರಣಕ್ಕಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಈ 5 ಆಹಾರಗಳನ್ನು ತಪ್ಪದೇ ಸೇವಿಸಿ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News