Purple Cabbage: ಕ್ಯಾನ್ಸರ್ ಹಾಗೂ ಡಯಾಬಿಟಿಸ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ ಈ ತರಕಾರಿ

Benefits Of Purple Cabbage: ಚಳಿಗಾಲದಲ್ಲಿ, ಜನರು ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸುತ್ತಾರೆ, ಆದರೆ ನೇರಳೆ ಬಣ್ಣದ ಈ ತರಕಾರಿಯನ್ನು ಆಹಾರದಲ್ಲಿ ಸೇರಿಸುವುದರಿಂದ, ಆರೋಗ್ಯವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ.  

Written by - Nitin Tabib | Last Updated : Oct 25, 2022, 10:35 PM IST
  • ಕಳಪೆ ಜೀವನಶೈಲಿಯಿಂದ ಉಂಟಾಗುವ ಕಾಯಿಲೆಗಳ ಅತ್ಯುತ್ತಮ ಉದಾಹರಣೆ ಎಂದರೆ ಅದು ಸ್ಥೂಲಕಾಯತೆ.
  • ದೇಹದಲ್ಲಿ ಹೆಚ್ಚುತ್ತಿರುವ ಕೊಬ್ಬಿನಿಂದಾಗಿ ಜನರು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ.
  • ಏನೆಲ್ಲಾ ಪ್ರಯತ್ನ ಮಾಡಿದರೂ ದೇಹದ ಕೊಬ್ಬು ಕಡಿಮೆಯಾಗುತ್ತಿಲ್ಲ.
Purple Cabbage: ಕ್ಯಾನ್ಸರ್ ಹಾಗೂ ಡಯಾಬಿಟಿಸ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ ಈ ತರಕಾರಿ title=
Purple Cabbage Health Benefits

Benefits Of Purple Vegetables: ಪ್ರಸ್ತುತ ಯುಗದಲ್ಲಿ ಕಳಪೆ ಜೀವನಶೈಲಿಯಿಂದ ಜನರು ಹಲವಾರು ರೀತಿಯ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಕಳಪೆ ಜೀವನಶೈಲಿಯಿಂದ ಉಂಟಾಗುವ ಕಾಯಿಲೆಗಳ  ಅತ್ಯುತ್ತಮ ಉದಾಹರಣೆ ಎಂದರೆ ಅದು ಸ್ಥೂಲಕಾಯತೆ. ದೇಹದಲ್ಲಿ ಹೆಚ್ಚುತ್ತಿರುವ ಕೊಬ್ಬಿನಿಂದಾಗಿ ಜನರು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಏನೆಲ್ಲಾ ಪ್ರಯತ್ನ ಮಾಡಿದರೂ ದೇಹದ ಕೊಬ್ಬು ಕಡಿಮೆಯಾಗುತ್ತಿಲ್ಲ. ಹೀಗಿರುವಾಗ ನೀವೂ ಕೂಡ ನಿಮ್ಮ ಆಹಾರದಲ್ಲಿ ನೇರಳೆ ಎಲೆಕೋಸು ಸೇರಿಸಿಕೊಳ್ಳಬೇಕು. ಹೆಚ್ಚಿನವರು ಇದನ್ನು ಸಲಾಡ್ ರೂಪದಲ್ಲಿ ಸೇವಿಸುತ್ತಾರೆ. ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಕೆಗಳು  ನೇರಳೆ ಎಲೆಕೋಸಿನಲ್ಲಿ ಹೇರಳವಾಗಿ ಕಂಡುಬರುತ್ತವೆ, ಇದು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.

ಮಧುಮೇಹ ಮತ್ತು ಕ್ಯಾನ್ಸರ್ನಲ್ಲಿ ಪ್ರಯೋಜನಕಾರಿ
ಆರೋಗ್ಯ ತಜ್ಞರ ಪ್ರಕಾರ, ನೇರಳೆ ಎಲೆಕೋಸು ತೂಕ ಇಳಿಕೆಗೆ ಬಹಳ ಸಹಕಾರಿ ಸಾಬೀತಾಗುತ್ತದೆ ಎನ್ನಲಾಗಿದೆ. ಇದರೊಂದಿಗೆ, ಇದು ದೇಹದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಎಲೆಕೋಸು ಪೌಷ್ಟಿಕಾಂಶದ ನಿಧಿ ಎಂದರೆ ತಪ್ಪಾಗಲಾರದು. ಆಹಾರದಲ್ಲಿ ಇದನ್ನು ಸೇರಿಸಿದರೆ ಸ್ಥೂಲಕಾಯತೆಯ ಸಮಸ್ಯೆ ಅಷ್ಟೇ ಅಲ್ಲ, ಇದು ನಿಮ್ಮನ್ನು ಕ್ಯಾನ್ಸರ್ ಮತ್ತು ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳಿಂದ ದೂರವಿರಿಸುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನಿಮ್ಮ ತೂಕವು ಇಳಿಕೆಯಾಗಲು ಪ್ರಾರಂಭಿಸುತ್ತದೆ. ಇದರಲ್ಲಿರುವ ಆಂಥೋಸಯಾನಿನ್ ಪಾಲಿಫಿನಾಲ್ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದಂತಹ ಅನೇಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.

ಇದನ್ನೂ ಓದಿ-Health Tips: ಈ ವಿಶೇಷ ರೀತಿಯ ಹುಲ್ಲಿನ ಬಳಕೆಯಿಂದ ಬೆಣ್ಣೆಯಂತೆ ಕರಗುತ್ತದೆ ಬೊಜ್ಜು

ಪೋಷಕಾಂಶಗಳಿಂದ ಸಮೃದ್ಧವಾಗಿದೆ
ನೇರಳೆ ಎಲೆಕೋಸಿನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ, ಇದು ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ ಮತ್ತು ಅಜೀರ್ಣದ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಇದು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಆಂಟಿಏಜಿಂಗ್ ಗುಣಲಕ್ಷಣಗಳು ನಿಮ್ಮ ಚರ್ಮವನ್ನು ಸರಿಪಡಿಸಿ, ನೀವು ಸಾಮಾನ್ಯಕ್ಕಿಂತ ಕಿರಿಯರಾಗಿ ಕಾಣುವಂತೆ ಮಾಡುತ್ತದೆ. ಇದರ ಸೇವನೆಯಿಂದ ಕಣ್ಣಿನ ಕಪ್ಪು ವರ್ತುಲಗಳೂ ಮಾಯವಾಗುತ್ತವೆ ಮತ್ತು ಚರ್ಮದ ಸಡಿಲಿಕೆ ದೂರಾಗುತ್ತದೆ.

ಇದನ್ನೂ ಓದಿ-Colon Cancer Causes : ಈ ಆಹಾರ ಸೇವನೆಯಿಂದಲೇ ಹೆಚ್ಚುತ್ತದೆ ಕರುಳಿನ ಕ್ಯಾನ್ಸರ್. !

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News