Pomegranate For Diabetes: ಮಧು ಮೇಹ ಇರುವ ರೋಗಿಗಳು ನಿತ್ಯ ಸೇವಿಸಿ ಈ ಹಣ್ಣು, ನಿಯಂತ್ರಣದಲ್ಲಿರುತ್ತದೆ ಶುಗರ್ ಲೆವೆಲ್

Pomegranate Benefits For Diabetes: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಆದರೆ ಅವುಗಳಲ್ಲಿ ರುಚಿ ಮತ್ತು ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಹಣ್ಣುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತದೆ. ಅಂಥಹ ಹಣ್ಣುಗಳಲ್ಲಿ   ದಾಳಿಂಬೆ  ಕೂಡಾ ಒಂದು. 

Written by - Ranjitha R K | Last Updated : Sep 12, 2021, 01:16 PM IST
  • ದಾಳಿಂಬೆಯು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಒಂದು ಹಣ್ಣು.
  • ಮಧುಮೇಹ ನಿರೋಧಕ ಗುಣಲಕ್ಷಣಗಳು ದಾಳಿಂಬೆಯಲ್ಲಿ ಕಂಡುಬರುತ್ತವೆ.
  • ದಾಳಿಂಬೆಯನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.
Pomegranate For Diabetes:  ಮಧು ಮೇಹ ಇರುವ ರೋಗಿಗಳು ನಿತ್ಯ ಸೇವಿಸಿ ಈ ಹಣ್ಣು, ನಿಯಂತ್ರಣದಲ್ಲಿರುತ್ತದೆ ಶುಗರ್ ಲೆವೆಲ್ title=
Pomegranate For Diabetes (file photo)

ನವದೆಹಲಿ : Pomegranate Benefits For Diabetes: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಆದರೆ ಅವುಗಳಲ್ಲಿ ರುಚಿ ಮತ್ತು ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಹಣ್ಣುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತದೆ. ಅಂಥಹ ಹಣ್ಣುಗಳಲ್ಲಿ   ದಾಳಿಂಬೆ (Pomegranate) ಕೂಡಾ ಒಂದು. ದಾಳಿಂಬೆಯು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವಂತಹ ಹಣ್ಣು. ದಾಳಿಂಬೆಯು ಫ್ಲಾವನೊಯಿನ್, ಫಿನಾಲಿಕ್ಸ್, ವಿಟಮಿನ್ ಸಿ, ಫೈಬರ್, ವಿಟಮಿನ್ ಕೆ, ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳಂತಹ ಗುಣಗಳನ್ನು ಹೊಂದಿದೆ.  ದಾಳಿಂಬೆಯ ಸೇವನೆಯಿಂದ ಮಧುಮೇಹದ (Pomegranate for   Diabetes) ಸಮಸ್ಯೆಯನ್ನು ನಿಯಂತ್ರಿಸಬಹುದು. ಮಧುಮೇಹ ಇಂದಿನ ಕಾಲದ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವ ಮೂಲಕವೇ ಇದನ್ನು ನಿಯಂತ್ರಿಸಬಹುದು. ಇಷ್ಟು ಮಾತ್ರವಲ್ಲ, ದಾಳಿಂಬೆಯನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು (Immunity) ಕೂಡಾ ಬಲಪಡಿಸಬಹುದು.

ದಾಳಿಂಬೆ ತಿನ್ನುವುದರ ಪ್ರಯೋಜನಗಳು: (Health Benefits Of Eating Pomegranates) 
1. ಮಧುಮೇಹಕ್ಕೆ ಸಹಾಯಕ: ದಾಳಿಂಬೆ ಮಧುಮೇಹವನ್ನು ನಿಯಂತ್ರಿಸಲು  (Pomegranate for Diabetes) ಸಹಾಯ ಮಾಡುವ ಹಣ್ಣುಗಳಲ್ಲಿ ಒಂದು. ಇದರಲ್ಲಿ ಮಧುಮೇಹ ನಿರೋಧಕ ಗುಣಗಳು ಕಂಡು ಬರುತ್ತವೆ. ಪ್ರತಿದಿನ ದಾಳಿಂಬೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು (Sugar level) ನಿಯಂತ್ರಿಸಬಹುದು. 

ಇದನ್ನೂ ಓದಿ : ನೀವು ಎಂದಾದರೂ ತಿಂದಿದ್ದೀರಾ ಒಣಗಿದ ಪಪ್ಪಾಯ ? ಅದರ ಪ್ರಯೋಜನಗಳನ್ನು ತಿಳಿಯಿರಿ

2.ರೋಗ ನಿರೋಧಕ ಶಕ್ತಿಗೆ :ರೋಗನಿರೋಧಕ ಶಕ್ತಿಯನ್ನು (Immunity) ಬಲಪಡಿಸಲು ನಿತ್ಯ ದಾಳಿಂಬೆಯನ್ನು ಸೇವಿಸಬೇಕು. ದಾಳಿಂಬೆ (Pomegranate)  ಬೀಜಗಳಲ್ಲಿ ಕಂಡುಬರುವ, ಆ್ಯಂಟಿ ಆಕ್ಸಿಡೆಂಟ್ ಗುಣಗಳು,  ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

3. ಜೀರ್ಣಕ್ರಿಯೆಯಲ್ಲಿ ಸಹಾಯಕ : ಆ್ಯಂಟಿ -ಹೆಲಿಕೋಬ್ಯಾಕ್ಟರ್ ಪೈಲೋರಿ ಪ್ರಭಾವ ದಾಳಿಂಬೆಯಲ್ಲಿ ಕಂಡುಬರುತ್ತದೆ. ಹೆಲಿಕೋಬ್ಯಾಕ್ಟರ್ ಪೈಲೋರಿ ಹೊಟ್ಟೆಯಲ್ಲಿ ಕಂಡುಬರುವ ಒಂದು ವಿಧದ ಬ್ಯಾಕ್ಟೀರಿಯಾ. ದಾಳಿಂಬೆಯನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ :ಬೇಯಿಸಿದ ಮೊಟ್ಟೆಯನ್ನು ಎಷ್ಟು ಸಮಯದೊಳಗೆ ಸೇವಿಸಬೇಕು, ಹೆಚ್ಚು ಹೊತ್ತು ಬಿಟ್ಟು ತಿಂದರೆ ಏನಾಗುತ್ತದೆ ?

4. ಚರ್ಮದ ಆರೋಗ್ಯಕ್ಕೆ ಸಹಾಯಕ : ದಾಳಿಂಬೆಯಲ್ಲಿರುವ ವಿಟಮಿನ್ ಸಿ, ವಿಟಮಿನ್ ಕೆ, ಬಿ, ಆ್ಯಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮವನ್ನು ಆರೋಗ್ಯವಾಗಿಡಲು (skin care)ಸಹಾಯ ಮಾಡುತ್ತದೆ. ಇದು ಮಾತ್ರವಲ್ಲ, ಮುಖದ ಸುಕ್ಕುಗಳು ಕೂಡಾ ಕಡಿಮೆಯಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News