Weight loss diet plan : ದೇಹದಲ್ಲಿ ಅಧಿಕ ಕೊಬ್ಬು ಸಂಗ್ರಹವಾಗುವುದರಿಂದ ಬೊಜ್ಜು ಉಂಟಾಗುತ್ತದೆ. ಈ ಹಿಂದೆ 35 ವರ್ಷ ಮೇಲ್ಪಟ್ಟವರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ, ಇಂದಿನ ಜೀವನಶೈಲಿಯಿಂದಾಗಿ ಅನೇಕ ಮಕ್ಕಳು ಕೂಡ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಳಪೆ ಆಹಾರ ಮತ್ತು ದೈಹಿಕ ಚಟುವಟಿಕೆಯ ಕೊರತೆ.
ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ಎಲ್ಲವನ್ನು ಮಾಡಿದರೂ, ಅವರು ಬೇಗನೆ ತೂಕವನ್ನು ಕಳೆದುಕೊಳ್ಳುವುದಿಲ್ಲ. ಆದರೆ ಸರಿಯಾದ ಆಹಾರವನ್ನು ಆರಿಸುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಬಹುದು. ನಿಮ್ಮ ಆಹಾರದಲ್ಲಿ ಏನನ್ನು ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳುವುದು ಖಂಡಿತವಾಗಿಯೂ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಎಳನೀರಿನಲ್ಲಿ ಈ ಒಂದು ಬೀಜ ಹಾಕಿ ಕುಡಿದರೆ ವಾರದಲ್ಲೇ ತೂಕ ಇಳಿಯುತ್ತೆ!
ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ನಿಮ್ಮ ತೂಕ ನಷ್ಟಕ್ಕೆ ಸುಲಭ ದಾರಿ. ಒಂದು ತಿಂಗಳಲ್ಲಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉನ್ನತ ಪೌಷ್ಟಿಕತಜ್ಞರು ಶಿಫಾರಸು ಮಾಡಿದ ಭಾರತೀಯ ಆಹಾರ ಪದ್ದತಿ ಇಲ್ಲಿದೆ ನೋಡಿ..
ಉಪಹಾರ
- ಹಣ್ಣುಗಳು ಮತ್ತು ಬೀಜಗಳೊಂದಿಗೆ ಓಟ್ಸ್ ತಿನ್ನಿ
- ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿ ಅಥವಾ ದೋಸೆ ಸೇವಿಸಿ
- ತರಕಾರಿಗಳು ಮತ್ತು ಮೊಸರಿನೊಂದಿಗೆ ಗೋಧಿ ರವೆ ಆಹಾರ ಪದಾರ್ಥ ತಿನ್ನಿರಿ
ಮಧ್ಯಾಹ್ನ ಊಟ
- ತರಕಾರಿಗಳೊಂದಿಗೆ ಬ್ರೌನ್ ರೈಸ್
- ಚಿಕನ್ ಅಥವಾ ಮೀನು ಕರಿ ಇಲ್ಲವೆ ತರಕಾರಿ ಪಲ್ಯದೊಂದಿಗೆ ಚಪಾತಿ ತಿನ್ನಿ
- ತರಕಾರಿಗಳು ಮತ್ತು ಫೆಟಾ ಚೀಸ್ನೊಂದಿಗೆ ಕ್ವಿನೋವಾ ಸಲಾಡ್
ರಾತ್ರಿ ಊಟ
- ತರಕಾರಿಗಳು ಮತ್ತು ಮೊಸರಿನೊಂದಿಗೆ ಖಿಚಡಿ
- ಕರಿದ ತರಕಾರಿಗಳೊಂದಿಗೆ ಬೇಯಿಸಿದ ಮೀನು
- ಕಂದು ಅನ್ನದೊಂದಿಗೆ ತೋಫು ಕರಿ
ತೂಕ ನಷ್ಟಕ್ಕೆ ಅನುಸರಿಸಬೇಕಾದ ಇತರ ಸಲಹೆಗಳು : ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಅನುಸರಿಸುವುದರ ಹೊರತಾಗಿ, ನೀವು ತೂಕವನ್ನು ಕಳೆದುಕೊಳ್ಳಲು ಉತ್ತಮ ವ್ಯಾಯಾಮ ಮಾಡಬೇಕು. ವಾರದಲ್ಲಿ ಕನಿಷ್ಠ 6 ದಿನ 30 ನಿಮಿಷಗಳ ಸರಳ ಮತ್ತು ಕಠಿಣ ವ್ಯಾಯಾಮ ಮಾಡಿ.
ಫೈಬರ್ ಭರಿತ ಆಹಾರ ಸೇವಿಸಿ : ನಿಮ್ಮ ಆಹಾರದಲ್ಲಿ ಸಾಕಷ್ಟು ಫೈಬರ್ ಇರುವಂತೆ ನೋಡಿಕೊಳ್ಳಿ. ಅದು ನಿಮಗೆ ಹಸಿವು ದೂರವಿರಲು ಸಹಾಯ ಮಾಡುತ್ತದೆ. ಫೈಬರ್ನ ಉತ್ತಮ ಮೂಲಗಳಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಸೇರಿವೆ.
ಸಂಸ್ಕರಿಸಿದ ಆಹಾರ ತಿನ್ನಬೇಡಿ : ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ, ಇದು ಅನಾರೋಗ್ಯಕರ. ಈ ಆಹಾರಗಳು ನಿಮ್ಮ ತೂಕ ನಷ್ಟ ಪ್ರಯತ್ನಗಳನ್ನು ಹಾಳುಮಾಡಬಹುದು. ಆಹಾರದಲ್ಲಿ ಮುಖ್ಯವಾಗಿ ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.