Papaya Side Effects: ನಿಮಗೆ ಈ ಆರೋಗ್ಯ ಸಮಸ್ಯೆಗಳಿದ್ದರೆ ಅಪ್ಪಿತಪ್ಪಿಯೂ ಪರಂಗಿ ತಿನ್ನಬೇಡಿ

Papaya Side Effects: ಪರಂಗಿ ಹಣ್ಣಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ, ಕೆಲವು ಆರೋಗ್ಯ ಸಮಸ್ಯೆಗಳಿದ್ದರೆ ಪರಂಗಿ ಸೇವನೆಯು ನಿಮಗೆ ಹಾನಿಕಾರಕ ಎಂದು ಸಾಬೀತು ಪಡಿಸಬಹುದು.

Written by - Yashaswini V | Last Updated : Dec 8, 2021, 12:29 PM IST
  • ನೀವು ಬಿಪಿ ರೋಗಿಗಳಾಗಿದ್ದರೆ, ಪಪ್ಪಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ
  • ಅಲರ್ಜಿ ಸಮಸ್ಯೆ ಇದ್ದರೆ, ಪರಂಗಿ ಹಣ್ಣನ್ನು ತಿನ್ನುವುದು ನಿಮಗೆ ಹಾನಿ ಮಾಡುತ್ತದೆ
  • ಪಪ್ಪಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಕಲ್ಲಿನ ಸಮಸ್ಯೆ ಹೆಚ್ಚಾಗಬಹುದು
Papaya Side Effects: ನಿಮಗೆ ಈ ಆರೋಗ್ಯ ಸಮಸ್ಯೆಗಳಿದ್ದರೆ ಅಪ್ಪಿತಪ್ಪಿಯೂ ಪರಂಗಿ ತಿನ್ನಬೇಡಿ title=
Papaya Side Effects

Papaya Side Effects: ಪರಂಗಿ ಕಡಿಮೆ ಕ್ಯಾಲೋರಿ ಹಣ್ಣು. ಇದನ್ನು ಪಪ್ಪಾಯಿ ಎಂದೂ ಸಹ ಕರೆಯಲಾಗುತ್ತದೆ. ಪಪ್ಪಾಯಿಯಲ್ಲಿರುವ ಗುಣಗಳಿಂದಾಗಿ ಹೆಚ್ಚಿನ ಜನರು ಪಪ್ಪಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಲ್ಲಿ ಪಪ್ಪಾಯಿಯನ್ನು ಸೇವಿಸುವುದು ಹಾನಿಕಾರಕವಾಗಿದೆ. 

ನೀವು ಈ ಕಾಯಿಲೆಗಳಿಂದ ಬಳಲುತ್ತಿದ್ದರೆ ಮರೆತೂ ಸೇವಿಸಬೇಡಿ ಪರಂಗಿ ಹಣ್ಣು:
ಮೂತ್ರಪಿಂಡದ ಸಮಸ್ಯೆ:

Kidney disease: Here's why too much phosphorous is bad for you | Health  News | Zee News
ನಿಮಗೆ ಮೂತ್ರಪಿಂಡದ ಸಮಸ್ಯೆಗಳಿದ್ದರೆ, ಪಪ್ಪಾಯಿಯನ್ನು (Papaya) ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಿ. ವಿಟಮಿನ್ ಸಿ ಹೇರಳವಾಗಿರುವ ಪಪ್ಪಾಯಿಯನ್ನು ಅಧಿಕವಾಗಿ ಸೇವಿಸುವುದರಿಂದ ಕಲ್ಲಿನ ಸಮಸ್ಯೆ ಹೆಚ್ಚಾಗಬಹುದು. ಪಪ್ಪಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕಿಡ್ನಿ ರೋಗಿಗಳಿಗೂ (Kidney problem) ಹಾನಿ ಮಾಡುತ್ತದೆ.

ಕಾಮಾಲೆ ಮತ್ತು ಆಸ್ತಮಾ:
ಕಾಮಾಲೆ ಮತ್ತು ಅಸ್ತಮಾ (Jaundice and Asthma) ರೋಗಿಗಳಿಗೆ ಪಪ್ಪಾಯಿಯ ಸೇವನೆಯು ಹಾನಿಕಾರಕವಾಗಿದೆ. ತಜ್ಞರ ಪ್ರಕಾರ, ಇದರಲ್ಲಿರುವ ಪಾಪೈನ್ ಮತ್ತು ಬೀಟಾ ಕ್ಯಾರೋಟಿನ್ ಈ ಎರಡೂ ಕಾಯಿಲೆಗಳಿಗೆ ಹಾನಿ ಮಾಡುತ್ತದೆ.

ಇದನ್ನೂ ಓದಿ- Skin Problems: ಸ್ನಾನದ ನೀರಿಗೆ ಈ ಒಂದು ಎಲೆ ಹಾಕಿ, ಅದ್ಭುತ ಪ್ರಯೋಜನ ಪಡೆಯಿರಿ

ಜೀರ್ಣಕ್ರಿಯೆಗೆ ತೊಂದರೆಯಾಗಬಹುದು:
ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ (Digestion) ಹಾಳಾಗುತ್ತದೆ. ಇದರಲ್ಲಿ ಫೈಬರ್ ಅಂಶವಿದ್ದು, ಪಪ್ಪಾಯಿಯನ್ನು ಅತಿಯಾಗಿ ಸೇವಿಸಿದಾಗ ಗ್ಯಾಸ್, ನೋವು, ಹೊಟ್ಟೆಯಲ್ಲಿ ಉರಿ ಉಂಟಾಗಬಹುದು. ಪಪ್ಪಾಯಿಯ ಸೇವನೆಯಿಂದ ಮಲಬದ್ಧತೆ ದೂರವಾಗುತ್ತದೆ, ಆದರೆ ಇದನ್ನು ಅತಿಯಾಗಿ ತಿನ್ನುವುದರಿಂದ ಭೇದಿ ಉಂಟಾಗುತ್ತದೆ. 

ಬಿಪಿ ರೋಗಿಗಳು ಹೆಚ್ಚು ಪರಂಗಿ ಹಣ್ಣನ್ನು ತಿನ್ನಬಾರದು:

Heart disease in India | Zee News
ಪಪ್ಪಾಯಿಯ ಸೇವನೆಯು ಹೃದ್ರೋಗಗಳ (Heart disease) ರೋಗಿಗಳಿಗೂ ಹಾನಿಕಾರಕವಾಗಿದೆ. ಇದು ಹೃದಯ ಬಡಿತವನ್ನು ನಿಧಾನಗೊಳಿಸಬಹುದು. ನೀವು ಬಿಪಿ ರೋಗಿಗಳಾಗಿದ್ದರೂ ಸಹ, ಪಪ್ಪಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.

ಇದನ್ನೂ ಓದಿ- Curd And Raisins: ಮೊಸರಿನ ಜೊತೆಗೆ ಒಣದ್ರಾಕ್ಷಿ ಸೇವನೆ ಆರೋಗ್ಯಕ್ಕೆ ವರದಾನ

ಚರ್ಮದ ಅಲರ್ಜಿಗಳು:
ನಿಮಗೆ ಅಲರ್ಜಿ (Allergic) ಸಮಸ್ಯೆ ಇದ್ದರೆ ಪರಂಗಿ ಹಣ್ಣನ್ನು ತಿನ್ನುವುದು ನಿಮಗೆ ಹಾನಿ ಮಾಡುತ್ತದೆ. ಇದು ಚರ್ಮದ ಮೇಲೆ ದದ್ದುಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. 

ಗರ್ಭಾವಸ್ಥೆಯಲ್ಲಿ ನಷ್ಟ:

Stress hormone higher in pregnant women with PTSD
ಪಪ್ಪಾಯಿ ಬೀಜಗಳು, ಬೇರುಗಳು ಮತ್ತು ಎಲೆಗಳಲ್ಲಿರುವ ಸಾರವು ಭ್ರೂಣಕ್ಕೆ ಹಾನಿ ಮಾಡುತ್ತದೆ. ಪಪ್ಪಾಯಿಯಲ್ಲಿ ಕೆಲವು ಕಿಣ್ವಗಳಿವೆ, ಇದು ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿ (Pregnancy) ಪರಂಗಿಹಣ್ಣನ್ನು ಸೇವಿಸದಂತೆ ಸೂಚಿಸಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News