ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ ಪತ್ತೆ

Omicron BA.5: ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ  Omicron BA.5 ಪತ್ತೆಯಾಗಿದೆ. ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Written by - Yashaswini V | Last Updated : Sep 7, 2022, 09:02 AM IST
  • ಇತ್ತೀಚಿಗೆ ಕೋವಿಡ್-19 ರ ಹೊಸ ರೂಪಾಂತರವು ಪತ್ತೆಯಾಗಿದೆ. ಇದರ ಹೆಸರು ಓಮಿಕ್ರಾನ್ VA.5.
  • ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ
  • ಈ ಕುರಿತಂತೆ ಹಲವು ವಿಷಯಗಳನ್ನು ಬಹಿರಂಗಪಡಿಸಿರುವ ಅಮೆರಿಕದ ತಜ್ಞರು ಹೇಳಿದ್ದೇನು?
ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ ಪತ್ತೆ  title=
Corona Virus New Variant

ಕೊರೊನಾವೈರಸ್ ಹೊಸ ರೂಪಾಂತರ: ಕಳೆದ ಮೂರು ವರ್ಷಗಳಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ನ ಭೀತಿ ಇನ್ನೂ ಕಡಿಮೆ ಆಗಿಲ್ಲ. ಇಲ್ಲಿಯವರೆಗೆ ಅದರ ಹಲವು ರೂಪಾಂತರಗಳು ಬಂದಿವೆ. ಪ್ರತಿಯೊಂದು ರೂಪಾಂತರವು ಹಿಂದಿನದಕ್ಕಿಂತ ಭಿನ್ನವಾಗಿದೆ. ಇತ್ತೀಚಿಗೆ ಕೋವಿಡ್-19 ರ ಹೊಸ ರೂಪಾಂತರವು ಪತ್ತೆಯಾಗಿದೆ. ಇದರ ಹೆಸರು ಓಮಿಕ್ರಾನ್ VA.5. ಈ ರೂಪಾಂತರವು ಹಿಂದಿನ ಎಲ್ಲಾ ರೂಪಾಂತರಗಳಿಗಿಂತ ತುಂಬಾ ಅಪಾಯಕಾರಿ ಎಂದು ಬಣ್ಣಿಸಲಾಗುತ್ತಿದೆ. 

ಈ ಕುರಿತಂತೆ ಹಲವು ವಿಷಯಗಳನ್ನು ಬಹಿರಂಗಪಡಿಸಿರುವ  ಅಮೆರಿಕದ ತಜ್ಞರು, ಈ ರೂಪಾಂತರವೂ ಹಿಂದಿನ ಎಲ್ಲಾ ರೂಪಾಂತರಗಳಿಗಿಂತ ಅಪಾಯಕಾರಿ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 

ಇದನ್ನೂ ಓದಿ- ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! ಮತ್ತೆ ವಿದ್ಯಾರ್ಥಿ ವೀಸಾ ನೀಡಲಿದೆ ಚೀನಾ

ಹೊಸ ರೂಪಾಂತರ ಈ ರೀತಿ ದಾಳಿ ಮಾಡುತ್ತದೆ:
Omicron BA.5 ಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ವಿಜ್ಞಾನಿಗಳು, ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ. ಈ ಹಿಂದೆ ಜನರು ಒಮ್ಮೆ ಕರೋನಾ ಪಾಸಿಟಿವ್ ಆದ ನಂತರ ಈ ವೈರಸ್‌ನಿಂದ ವಿನಾಯಿತಿ ಪಡೆಯುತ್ತಿದ್ದರು. ಆದರೆ, ಈ ವೈರಸ್ ಅಷ್ಟು ಸುಲಭವಾಗಿ ಗುಣವಾಗುವುದಿಲ್ಲ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹೊಸ ರೂಪಾಂತರವು ಕೆಲವು ವಾರಗಳಲ್ಲಿ ಬಲಿಪಶುವನ್ನು ಮತ್ತೆ ಮತ್ತೆ ಕಾಡಬಹುದು ಎಂದೂ ಸಹ ಹೇಳಲಾಗಿದೆ. 

ಇದನ್ನೂ ಓದಿ- ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಕರೋನಾ ವೈರಸ್‌ನ ಅಪಾಯ

ಈ ಹೊಸ ರೂಪಾಂತರ ಮಾರಣಾಂತಿಕವಲ್ಲ:
ಈ ಹೊಸ ರೂಪಾಂತರವು ವೇಗವಾಗಿ ಹರಡುವ ಅಪಾಯದ ನಡುವೆ ಇದು ಮಾರಣಾಂತಿಕವಲ್ಲ ಎಂದು ಸಹ ಹೇಳಲಾಗುತ್ತಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಈ ಹಿಂದೆ ಕರೋನಾ ಲಸಿಕೆ ಪಡೆದವರ ಮೇಲೆ ಇದು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಇದು ಸಂಪೂರ್ಣ ತಪ್ಪು ಕಲ್ಪನೆ ಎಂದು ತಜ್ಞರು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News