ಶುಗರ್ ನಿಯಂತ್ರಿಸಲು ಸಹಾಯ ಮಾಡುತ್ತದೆ ಈ ಮೂರು ಆಹಾರ

 ಇಂದಿನ ಕಾಲಘಟ್ಟದಲ್ಲಿ ಸಕ್ಕರೆ ಕಾಯಿಲೆ ಸಾಮಾನ್ಯವಾಗುತ್ತಿದೆ. ಮತ್ತು ನಾವು ನಿಮಗೆ ಇಲ್ಲಿ ಹೇಳುತ್ತೇವೆ, ಯಾವ ಪದಾರ್ಥಗಳನ್ನು ಸೇವಿಸುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು?

Written by - Ranjitha R K | Last Updated : Aug 3, 2022, 12:11 PM IST
  • ಇಂದಿನ ಕಾಲದಲ್ಲಿ ಮಧುಮೇಹದ ಕಾಯಿಲೆ ಸಾಮಾನ್ಯವಾಗಿದೆ.
  • ಕಾಯಿಲೆ ಇದ್ದಾಗ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ
  • ಬ್ಲಡ್ ಶುಗರ್ ಹೆಚ್ಚಾಗುವ ಲಕ್ಷಣಗಳು ಯಾವುವು
  ಶುಗರ್ ನಿಯಂತ್ರಿಸಲು ಸಹಾಯ ಮಾಡುತ್ತದೆ ಈ ಮೂರು  ಆಹಾರ  title=
diabetes control tips (file photo)

ಬೆಂಗಳೂರು : ಇಂದಿನ ಕಾಲದಲ್ಲಿ ಮಧುಮೇಹದ ಕಾಯಿಲೆ ಸಾಮಾನ್ಯವಾಗಿದೆ. ಈ ಕಾಯಿಲೆ ಇದ್ದಾಗ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹ ರೋಗವನ್ನು ತೊಡೆದುಹಾಕಲು, ಎರಡು ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಮೊದಲನೆಯದ್ದು ವ್ಯಾಯಾಮ. ಎರಡನೆಯದ್ದು ಆಹಾರ.  ಕೆಲವು ಪದಾರ್ಥಗಳನ್ನು ಸೇವಿಸಿದರೆ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.  

ಬ್ಲಡ್ ಶುಗರ್ ಹೆಚ್ಚಾಗುವ ಲಕ್ಷಣಗಳು : 
ಅತಿಯಾದ ಬಾಯಾರಿಕೆ
ಮೂತ್ರದಲ್ಲಿ ವಾಸನೆ,
ಮೂತ್ರ  ತಡೆದುಕೊಳ್ಳಲು ಸಾಧ್ಯವಾಗದಿರುವುದು  
ಆಯಾಸ
ತಲೆನೋವು

ಇದನ್ನೂ ಓದಿ : ಬೆಳಗ್ಗೆ ಖಾಲಿ ಹೊಟ್ಟೆಗೆ ಈ ನಾಲ್ಕು ಪಾನೀಯ ಕುಡಿದರೆ ವಾರಗಳಲ್ಲಿ ಕಡಿಮೆಯಾಗುವುದು belly fat

ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಈ ವಸ್ತುಗಳನ್ನು ಸೇವಿಸಿ :
ಓಟ್ಸ್ :
ಓಟ್ಸ್ ಫೈಬರ್ ನ ಉತ್ತಮ ಮೂಲವೆಂದು  ಹೇಳಲಾಗುತ್ತದೆ. ಓಟ್ಸ್ ಕರಗುವ ಫೈಬರ್ ಅನ್ನು ಹೊಂದಿರುತ್ತದೆ. ಬೆಳಗ್ಗಿನ ಉಪಹಾರದಲ್ಲಿ ಓಟ್ಸ್ ಸೇವಿಸುವುದರಿಂದ ದಿನವಿಡೀ ಹೊಟ್ಟೆ ತುಂಬಿರುತ್ತದೆ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಡಲೆ ಕಾಳು : 
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು  ಕಡಲೆ ಕಾಳು ಸೇವಿಸಬೇಕು. ಇದರಲ್ಲಿ  ಉತ್ತಮ ಪ್ರಮಾಣದ ಫೈಬರ್ ಇರುತ್ತದೆ. ಇದು ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಬೇಕಾದರೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಡಲೆ ಕಾಳು ತಿನ್ನಬೇಕು. 

ಇದನ್ನೂ ಓದಿ : ಮಾನ್ಸೂನ್‌ನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ

ಸೇಬು :  
 ದಿನಕ್ಕೆ ಒಂದು ಸೇಬನ್ನು ಸೇವಿಸುವುದರಿಂದ , ಯಾವಾಗಲೂ ಫಿಟ್ ಆಗಿರುವುದು ಸಾಧ್ಯವಾಗುತ್ತದೆ. ಇದು ರೋಗಗಳನ್ನು ತಡೆಯುತ್ತದೆ.  ಮಧುಮೇಹ ರೋಗಿಗಳಾಗಿದ್ದು,  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಬಯಸಿದರೆ, ನಿತ್ಯ ಒಂದು ಸೇಬು ತಿನ್ನಬೇಕು. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕರಗುವ ಫೈಬರ್ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News