ಹೃದಯದ ಆರೋಗ್ಯಕ್ಕೆ ಮೊರಿಂಗಾ ಎಲೆಗಳು: ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ, ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳಿಂದಾಗಿ ಅಪಾಯಕಾರಿ ಕಾಯಿಲೆಯ ಬಗ್ಗೆ ನಾವು ಆಗಾಗ್ಗೆ ಅಸಡ್ಡೆ ತೋರುತ್ತೇವೆ. ನಾವು ಯಾವುದೇ ಎಣ್ಣೆಯುಕ್ತ ಅಥವಾ ಜಂಕ್ ಆಹಾರಗಳನ್ನು ಸೇವಿಸಿದಾಗ, ಅದು ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂದರೆ LDL ಪ್ರಮಾಣವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ, ನಾವು ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದಂತೆ ಆರೋಗ್ಯಕರ ಆಯ್ಕೆಗಳನ್ನು ಮಾತ್ರ ಆರಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೈನಂದಿನ ಆಹಾರಕ್ರಮವನ್ನು ಬದಲಾಯಿಸುವ ಮೂಲಕ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಅಂತಹ ಆಹಾರ ಪದಾರ್ಥಗಳಲ್ಲಿ ಮೊರಿಂಗಾ ಎಲೆಗಳು ಎಂದರೆ ನುಗ್ಗೆ ಸೊಪ್ಪು ಕೂಡ ಒಂದು. ನಿಮ್ಮ ಡಯಟ್ನಲ್ಲಿ ನುಗ್ಗೆ ಸೊಪ್ಪನ್ನು ಸೇರಿಸುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರ ಉಳಿಯುವುದು ಮಾತ್ರವಲ್ಲ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಸೇರಿದಂತೆ ಹಲವು ಸಮಸ್ಯೆಗಳಿಂದಲೂ ದೂರ ಉಳಿಯಬಹುದು. ಹಾಗಿದ್ದರೆ, ನುಗ್ಗೆ ಸೊಪ್ಪು ಆರೋಗ್ಯಕ್ಕೆ ಹೇಗೆ ಸಹಕಾರಿ ಆಗಿದೆ ಎಂಬುದನ್ನು ತಿಳಿಯೋಣ...
ಮೊರಿಂಗಾ ಎಲೆ ಹೃದಯಾಘಾತದಿಂದ ರಕ್ಷಿಸುತ್ತದೆ:
ಮೊರಿಂಗಾ ಎಂದೂ ಕರೆಯಲ್ಪಡುವ ಡ್ರಮ್ ಸ್ಟಿಕ್ ಅನ್ನು ದಕ್ಷಿಣ ಭಾರತದ ಖಾದ್ಯವಾದ ಸಾಂಬಾರ್‌ನಲ್ಲಿ ಬಳಸಲಾಗುತ್ತದೆ. ಆದಾಗ್ಯೂ ಇದನ್ನು ಉತ್ತರ ಭಾರತದ ಖಾದ್ಯಗಳಲ್ಲೂ ಬಳಸಲಾಗುತ್ತದೆ. ಆದರೆ ನಿಮಗೆ ಗೊತ್ತಾ ನುಗ್ಗೆ ಸೊಪ್ಪನ್ನು ತಿನ್ನುವುದರಿಂದ ಹೃದಯಾಘಾತದ ಅಪಾಯ ಸಾಕಷ್ಟು ಕಡಿಮೆಯಾಗುತ್ತದೆ ಎನ್ನಲಾಗುವುದು.
ಇದನ್ನೂ ಓದಿ- ಹೃದಯಾಘಾತದ ಅಪಾಯದಿಂದ ಪಾರಾಗಲು ತಪ್ಪದೇ ಸೇವಿಸಿ ಈ ಡ್ರೈ ಫ್ರೂಟ್
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಹೃದಯಾಘಾತಕ್ಕೆ ಪ್ರಮುಖ ಕಾರಣವೆಂದರೆ ಅಧಿಕ ರಕ್ತದೊತ್ತಡ, ನೀವು ಹೈ ಬಿಪಿ ಸಮಸ್ಯೆಯನ್ನು ನಿವಾರಿಸಿದರೆ, ನಂತರ ನೀವು ಗಂಭೀರ ಹೃದಯ ಕಾಯಿಲೆಗಳಿಂದಲೂ ರಕ್ಷಿಸಲ್ಪಡುತ್ತೀರಿ. ಹಾಗಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನುಗ್ಗೆ ಸೊಪ್ಪನ್ನು ತಪ್ಪದೇ ಸೇವಿಸಿ.
ಬೊಜ್ಜಿನ ಸಮಸ್ಯೆಗೆ ಪರಿಹಾರ:
ಹೆಚ್ಚುತ್ತಿರುವ ತೂಕವು ಹೃದಯ ಸಂಬಂಧಿ ಕಾಯಿಲೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನುಗ್ಗೆ ಸೊಪ್ಪನ್ನು ನಿಯಮಿತವಾಗಿ ಸೇವಿಸಿದರೆ, ನೀವು ಹೃದ್ರೋಗದಿಂದ ದೂರವಿರುವುದು ಮಾತ್ರವಲ್ಲ, ಹೊಟ್ಟೆಯ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕಾಗಿ ಈ ನುಗ್ಗೆ ಸೊಪ್ಪಿನ ರಸವನ್ನು ತೆಗೆದು ಕುಡಿಯಬಹುದು.
ಇದನ್ನೂ ಓದಿ- Weight Loss Food: ಈ ಆಹಾರ ಸೇವನೆಯಿಂದ ತೂಕ ಇಳಿಕೆ ಜೊತೆಗೆ ಮಲಬದ್ಧತೆಯಿಂದಲೂ ಪರಿಹಾರ
ಮೋರಿಂಗ ಎಲೆ ಕೊಲೆಸ್ಟ್ರಾಲ್‌ನ ಶತ್ರು:
ಆರೋಗ್ಯ ತಜ್ಞರ ಪ್ರಕಾರ, ಮೊರಿಂಗಾ ಎಲೆಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ರಚನೆಗೆ ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ, ನಮ್ಮ ಹೃದಯವನ್ನು ಆರೋಗ್ಯಕರವಾಗಿಡಲು, ನಿಯಮಿತವಾಗಿ ಮೊರಿಂಗಾ ಎಲೆಗಳನ್ನು ತಿನ್ನಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.