ICMR Guidelines:ಇನ್ನು ಡ್ರೋನ್ ಮೂಲಕ ಮನೆ ಮನೆಗೂ ತಲುಪಲಿದೆ ಔಷಧಿ, ICMR ತಂದಿದೆ ಹೊಸ ಯೋಜನೆ

ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಪೂರೈಕೆಗಾಗಿ ಡ್ರೋನ್‌ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದಾಖಲೆಯನ್ನು ಸಿದ್ಧಪಡಿಸಿದೆ. 

Written by - Ranjitha R K | Last Updated : Jun 3, 2022, 09:25 AM IST
  • ದೇಶದಲ್ಲಿ ತಂತ್ರಜ್ಞಾನದ ಬಳಕೆ ವೇಗವಾಗಿ ಹೆಚ್ಚುತ್ತಿದೆ.
  • ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಪೂರೈಕೆಗಾಗಿ ಡ್ರೋನ್‌
  • ಯೋಜನೆ ಸಿದ್ಧಪಡಿಸಿದ ಐಸಿಎಂಆರ್
ICMR Guidelines:ಇನ್ನು ಡ್ರೋನ್ ಮೂಲಕ ಮನೆ ಮನೆಗೂ ತಲುಪಲಿದೆ ಔಷಧಿ, ICMR ತಂದಿದೆ ಹೊಸ ಯೋಜನೆ  title=
ICMR Guidelines for Drone (file photo)

ನವದೆಹಲಿ  : ICMR Guidelines for Drone: ದೇಶದಲ್ಲಿ ತಂತ್ರಜ್ಞಾನದ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಇದೇ ತಂತ್ರಜ್ಞಾನದ ಸಹಾಯದಿಂದ ದೂರದ ಪ್ರದೇಶಗಳಿಗೆ  ಔಷಧಗಳನ್ನು ಸುಲಭವಾಗಿ ತಲುಪಿಸುವುದು ಸಾಧ್ಯವಾಗಿದೆ.  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇದಕ್ಕಾಗಿ  ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಿದೆ. 

ಯೋಜನೆ ಸಿದ್ಧಪಡಿಸಿದ ಐಸಿಎಂಆರ್  : 
ಮಾಹಿತಿಯ ಪ್ರಕಾರ, ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಪೂರೈಕೆಗಾಗಿ ಡ್ರೋನ್‌ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದಾಖಲೆಯನ್ನು ಸಿದ್ಧಪಡಿಸಿದೆ. ಕೋವಿಡ್-19 ಲಸಿಕೆಯನ್ನು ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ನಾಗಾಲ್ಯಾಂಡ್‌ಗೆ ತಲುಪಿಸಲು ಡ್ರೋನ್‌ಗಳನ್ನು ಬಳಸಿದ ನಂತರ ಐಸಿಎಂಆರ್ ಈ ಮಾದರಿಯನ್ನು ಸಿದ್ಧಪಡಿಸಿದೆ.

ಇದನ್ನೂ ಓದಿ : ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಲು ಇದುವೇ ಪ್ರಮುಖ ಕಾರಣ ..! ಅಪಾಯಕ್ಕಿಂತ ಮುನ್ನ ಎಚ್ಚೆತ್ತುಕೊಳ್ಳಿ

ಯಾವ ಸರಕುಗಳ  ವಿತರಣೆಗೆ ಡ್ರೋನ್ : 
ಸಿದ್ಧಪಡಿಸಿದ ದಾಖಲೆಯ ಪ್ರಕಾರ, ಕೋವಿಡ್-19 ಲಸಿಕೆ ಮತ್ತು ಸೀರಮ್, ಮಾತ್ರೆಗಳು ಮತ್ತು ಕ್ಯಾಪ್ಸುಲ್‌ಗಳು, ಬಾಟಲಿಗಳಲ್ಲಿನ ಸಿರಪ್, ಸಿರಿಂಜ್‌ಗಳು, ಬ್ಲಡ್ ಬ್ಯಾಗ್ , 2AOC ಮತ್ತು 8AOC ನಡುವಿನ ಶೇಖರಣಾ ತಾಪಮಾನ ಹೊಂದಿರುವ ಇತರ ಮಾದರಿಗಳನ್ನು ಡ್ರೋನ್ ಮೂಲಕ ಮಾತ್ರ ಸಾಗಿಸಬಹುದು.

 ಭಾರತದ ದುರ್ಗಮ ಪ್ರದೇಶಗಳಿಗೆ ನಡೆಯಲಿದೆ 'ಲಸಿಕೆ ವಿತರಣೆ : 
ಈ ಬಗ್ಗೆ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಪ್ರೊ. ಡಾ.ಬಲರಾಮ್ ಭಾರ್ಗವ ಅವರು,  1.3 ಬಿಲಿಯನ್ ರಾಷ್ಟ್ರವಾಗಿ, ನಮ್ಮ ಆರೋಗ್ಯ ವ್ಯವಸ್ಥೆಯನ್ನು ನವೀಕರಿಸುವಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ ಎಂದು ಹೇಳಿದ್ದಾರೆ.  'ಕೋವಿಡ್ ಸಾಂಕ್ರಾಮಿಕವು ಈ ಸವಾಲನ್ನು ಹೆಚ್ಚಿಸಿದೆ. ಆದರೆ ಕೆಲವು ಸಮಸ್ಯೆಗಳನ್ನು ಪುನರ್ವಿಮರ್ಶಿಸಲು ಮತ್ತು ಸರಿಪಡಿಸಲು ನಮಗೆ ಅವಕಾಶವನ್ನು ನೀಡಲಾಗಿದೆ ಎಂದಿದ್ದಾರೆ. ಕೋವಿಡ್ -19 ರ ಆಗಮನದೊಂದಿಗೆ, ಭಾರತದ ದುರ್ಗಮ ಪ್ರದೇಶಗಳಿಗೂ ಲಸಿಕೆ ವಿತರಣೆಯನ್ನು ಕಲ್ಪಿಸಲಾಯಿತು. ಈ ಡಾಕ್ಯುಮೆಂಟ್ ಡ್ರೋನ್ ಆಧಾರಿತ ಆರೋಗ್ಯ ಸರಬರಾಜುಗಳ ವಿತರಣೆಯನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಒಳಗೊಂಡಿರುವ ವಿವಿಧ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುವುದು ಅವರ ಅಭಿಪ್ರಾಯ. 

ಇದನ್ನೂ ಓದಿ :  ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿಟ್ಟು ತಿನ್ನುವ ಅಭ್ಯಾಸ ನಿಮಗೂ ಇದೆಯೇ? ಎದುರಾಗುತ್ತದೆ ಈ ಸಮಸ್ಯೆಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News