ಕೆಮ್ಮು, ಗಂಟಲು ನೋವು, ಜ್ವರವೇ? ಎಲ್ಲದಕ್ಕೂ ಈಗ ಹೇಳಿ ಗುಡ್ ಬೈ!

ಸಣ್ಣಪುಟ್ಟ ಕೆಮ್ಮು, ನೆಗಡಿ, ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಗೆ ದೊಡ್ಡ ಪತ್ರೆಯಿಂದ ತಯಾರಿಸಿದ ಕಷಾಯ ಕುಡಿದರೆ ಬೇಗ ಗುಣವಾಗುತ್ತದೆ.  

Last Updated : Sep 27, 2019, 09:02 PM IST
ಕೆಮ್ಮು, ಗಂಟಲು ನೋವು, ಜ್ವರವೇ? ಎಲ್ಲದಕ್ಕೂ ಈಗ ಹೇಳಿ ಗುಡ್ ಬೈ! title=

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಕೆಮ್ಮು, ನೆಗಡಿ, ಜ್ವರದಿಂದ ಬಳಲುವವರ ಸಂಖ್ಯೆಯ ಹೆಚ್ಚು. ಈ ಸಮಸ್ಯೆಗಳಿಗೆ ಉತ್ತಮ ಮನೆಮದ್ದು ಅಂದ್ರೆ ದೊಡ್ಡಪತ್ರೆ!

ಹೌದು, ದೊಡ್ಡ ಪತ್ರೆ ಎಲೆಯನ್ನ ಬಳಸಿ ಸಾಮಾನ್ಯವಾಗಿ ಸಾಂಬಾರು, ಪಲ್ಯ, ಬೊಂಡ ಹೀಗೆ ವಿವಿಧ ಬಗೆಯ ಖಾದ್ಯಗಳನ್ನುತಯಾರಿಸುತ್ತಾರೆ. ಆದರೆ, ಇದು ಬಹುಪಯೋಗಿ ಔಷಧಿಯ ಸಸ್ಯ ಕೂಡ ಹೌದು. ಸಣ್ಣಪುಟ್ಟ ಕೆಮ್ಮು, ನೆಗಡಿ, ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಗೆ ದೊಡ್ಡ ಪತ್ರೆಯಿಂದ ತಯಾರಿಸಿದ ಕಷಾಯ ಕುಡಿದರೆ ಬೇಗ ಗುಣವಾಗುತ್ತದೆ.

ದೊಡ್ಡಪತ್ರೆಯ ಉಪಯೋಗಗಳೇನು?
* ದೊಡ್ದಪತ್ರೆಯ ಸೇವನೆಯಿಂದ ಕೆಮ್ಮು, ಗಂಟಲು ನೋವಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.
* ಎಲೆಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಜೊತೆಗೆ ಸ್ವಲ್ಪ ಜೀರಿಗೆ ಸೇರಿಸಿ ಶುದ್ಧೀಕರಿಸಿದ ಕಷಾಯವನ್ನು ಮಕ್ಕಳಿಗೆ ಕುಡಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.
* ಅಧಿಕ ಕೊಲೆಸ್ಟ್ರಾಲ್ ಶೇಖರಣೆ ತಡೆದು, ದೇಹದ ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ.
* ಇದರಲ್ಲಿರುವ ಕೋಲಿಕ್ ಆಮ್ಲ ಮತ್ತು ಬುಟಿ ಲಾಸಿಸೈ ಅಂಶ ತಲೆನೋವು ಮತ್ತು ಮೈಗ್ರೇನ್‍ನಂತಹ ಸಮಸ್ಯೆಗಳನ್ನೂ ನಿವಾರಿಸುತ್ತದೆ.
* ಮಹಿಳೆಯರ ಮುಟ್ಟಿನ ಸಮಸ್ಯೆಗಳಿಗೂ ದೊಡ್ಡಪತ್ರೆ ರಾಮಬಾಣ
* ಪ್ರತಿದಿನ ಎರಡು ಎಲೆ ಸೇವಿಸುವುದರಿಂದ ಮೂತ್ರ ವಿಸರ್ಜನೆ ಮೊದಲಾದ ಮೂತ್ರ ಕೋಶದ ಸಮಸ್ಯೆಗಳು ಕಡಿಮೆಯಾಗುತ್ತದೆ.
* ಗಾಯಗಳಿಗೆ ದೊಡ್ಡಪತ್ರೆ ಎಲೆಯನ್ನು ಚೆನ್ನಾಗಿ ಅರೆದು ಹಚ್ಚಿದರೆ ಬೇಗ ಗುಣವಾಗುತ್ತದೆ.
* ದೊಡ್ಡಪತ್ರೆ ಎಲೆಯನ್ನು ತುಳಸಿ ಎಲೆಯ ಜೊತೆಯಲ್ಲಿ ಸೇವಿಸುತ್ತಾ ಬಂದರೆ ಮಲಬದ್ಧತೆ ಶಮನಗೊಂಡು, ಹಸಿವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ಇಷ್ಟೆಲ್ಲಾ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುವ ದೊಡ್ದಪತ್ರೆಯಲ್ಲಿ ಇರುವ ಅಂಶಗಳ ಬಗ್ಗೆಯೂ ನಾವು ತಿಳಿಯಲೇಬೇಕು.

ದೊಡ್ಡ ಪತ್ರೆಯಲ್ಲಿ ಶೇ.0.6ರಷ್ಟು ಪ್ರೋಟೀನ್ಸ್, ಶೇ.0.03ರಷ್ಟು ಜೀವಸತ್ವ, ಶೇ.0.016 ಸುಣ್ಣ, ಮೆಗ್ನೀಶಿಯಂ, ಪೋಲೆಟ್‍ಗಳು, ಜೀವಸತ್ವ-ಎ, ಬಿ ಮತ್ತು ಡಿಗಳು ಹೇರಳವಾಗಿ ಇರುವುದರಿಂದಲೇ ಹಲವು ಆರೋಗ್ಯ ಸಮಸ್ಯೆಗಳು ಮಾಯವಾಗಲು ಸಹಾಯ ಮಾಡುತ್ತದೆ. ಅಲ್ಲದೆ, ಯುಜಿನಾಲ್, ಲಿಮೊನಿನ್, ಲುಟೆಲಿನ್ ಎಂಬ ರಾಸಾಯನಿಕ ಅಂಶಗಳಿದ್ದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಸಹ ನಿವಾರಿಸುತ್ತದೆ. 
 

Trending News