Male Health Tips: ಈ 5 ಸಂಗತಿಗಳಿಂದ ಪುರುಷರು ಇಂದೇ ಅಂತರ ಕಾಯ್ದುಕೊಳ್ಳಬೇಕು, ಇಲ್ದಿದ್ರೆ?

Male Fertility Foods To Avoid: ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಬಂಜೆತನದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇದಕ್ಕೆ ಕಾರಣ ಎಂದರೆ ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಾಗಿದೆ. ಅವು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ. ಹೀಗಾಗಿ ಪುರುಷರು ಏನನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ?  

Written by - Nitin Tabib | Last Updated : Dec 6, 2022, 09:59 PM IST
  • ಆರೋಗ್ಯಕರ ಆಹಾರಗಳನ್ನು ಸೇವಿಸುವ ಮೂಲಕ,
  • ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಬಹುದು
  • ಮತ್ತು ದೀರ್ಘಕಾಲದವರೆಗೆ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು.
Male Health Tips: ಈ 5 ಸಂಗತಿಗಳಿಂದ ಪುರುಷರು ಇಂದೇ ಅಂತರ ಕಾಯ್ದುಕೊಳ್ಳಬೇಕು, ಇಲ್ದಿದ್ರೆ? title=
Male Health Tips

Male Fertility Foods To Avoid: ಇತ್ತೀಚಿನ ದಿನಗಳಲ್ಲಿ ಬಹುತೇಕ ಪುರುಷರು ಬಂಜೆತನದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ.ಕೆಲವೊಮ್ಮೆ ಹೆಚ್ಚು ಔಷಧಿಗಳ ಸೇವನೆಯಿಂದಲೂ ಕೂಡ ಆರೋಗ್ಯಕ್ಕೆ ಹಾನಿ ಉಂಟಾಗಬಹುದು, ಆದರೆ ಕೆಲವು ಆಹಾರಗಳು ಪುರುಷರ ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನು ತಲುಪಿಸುತ್ತಿವೆ. ಹೌದು, ತಪ್ಪು ಆಹಾರಗಳ ಸೇವನೆಯು ಬಂಜೆತನದ ಸಮಸ್ಯೆಯನ್ನು ಹೆಚ್ಚಾಗಬಹುದು. ಇದಕ್ಕೆ ಕಾರಣ ತಪ್ಪಾದ ಆಹಾರವು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಮತ್ತೊಂದೆಡೆ, ಆರೋಗ್ಯಕರ ಆಹಾರಗಳನ್ನು ಸೇವಿಸುವ ಮೂಲಕ, ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಬಹುದು ಮತ್ತು ದೀರ್ಘಕಾಲದವರೆಗೆ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ, ಪುರುಷರು ಯಾವ ಪದಾರ್ಥಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಪುರುಷರು ಈ 5 ಸಂಗತಿಗಳಿಂದ ದೂರವಿರಬೇಕು
ಸಂಸ್ಕರಿಸಿದ ಮಾಂಸ

ಹೊರಗೆ ಸಿಗುವ ಸಂಸ್ಕರಿಸಿದ ಮಾಂಸ ದೇಹಕ್ಕೆ ಹಾನಿಕಾರಕವಾಗಿದೆ. ಇದರ ಸೇವನೆಯಿಂದ ಪುರುಷರಲ್ಲಿ ಬಂಜೆತನ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲ, ಸಂಸ್ಕರಿಸಿದ ಮಾಂಸವನ್ನು ಸೇವಿಸುವುದರಿಂದ ವೀರ್ಯದ ಸಂಖ್ಯೆಯೂ ಕಡಿಮೆಯಾಗುತ್ತದೆ. ಹೀಗಾಗಿ ಇಂದೇ ನಿಮ್ಮ ಆಹಾರದಿಂದ ಸಂಸ್ಕರಿಸಿದ ಮಾಂಸದಿಂದ ತಯಾರಿಸಿದ ಪದಾರ್ತಗಳನ್ನು ಹೊರಹಾಕಿ. 

ಸಿಹಿ ಪದಾರ್ಥಗಳು
ಪ್ರತಿನಿತ್ಯ ಸಿಹಿ ಪದಾರ್ಥಗಳನ್ನು ಸೇವಿಸುವುದರಿಂದ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಬಹುದು. ಅಷ್ಟೇ ಅಲ್ಲ ಸಿಹಿ ಪದಾರ್ಥಗಳನ್ನು ತಿನ್ನುವುದು ತೂಕ ಮತ್ತು ಮಧುಮೇಹದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ವೇಳೆ, ಸಿಹಿ ಪದಾರ್ಥಗಳ ಸೇವನೆಯು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಜೊತೆಗೆ ಅನೇಕ ಇತರ ಕಾಯಿಲೆಗಳಿಗೂ ಕೂಡ ಕಾರಣವಾಗಬಹುದು. ಹೀಗಾಗಿ ಪುರುಷರು ಅತಿಯಾದ ಸಿಹಿ ಸೇವನೆಯಿಂದ ದೂರವಿರಬೇಕು.

ಉಪ್ಪಿನ ಪದಾರ್ಥಗಳು
ಹೆಚ್ಚು ಉಪ್ಪು ಇರುವ ಆಹಾರಗಳ ಸೇವನೆ ಎಂದರೆ ಅಧಿಕ ಸೋಡಿಯಂ ಸೇವನೆ ಎಂದರ್ಥ. ಇದು ಪುರುಷರಲ್ಲಿ ಬಂಜೆತನವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ತಂದೆಯಾಗಬೇಕೆಂದು ಯೋಚಿಸುತ್ತಿದ್ದರೆ, ಇಂದಿನಿಂದಲೇ ಪಿಜ್ಜಾ, ಬರ್ಗರ್ ಮತ್ತು ನೂಡಲ್ಸ್ ಇತ್ಯಾದಿಗಳ ಸೇವನೆಯನ್ನು ಕಡಿಮೆ ಮಾಡಿ, ಏಕೆಂದರೆ ಈ ಆಹಾರಗಳಲ್ಲಿ ಸೋಡಿಯಂ ತುಂಬಾ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ಧೂಮಪಾನ
ನೀವೂ ಸಿಗರೇಟ್ ಸೇದುತ್ತಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಇದು ಪುರುಷರಲ್ಲಿ ಬಂಜೆತನವನ್ನು ಹೆಚ್ಚಿಸಲು ದೊಡ್ಡ ಕಾರಣವಾಗಿದೆ. ಧೂಮಪಾನವು ದೇಹಕ್ಕೆ ಹಾನಿಕಾರಕವಾಗಿದೆ. ನೀವು ಪ್ರತಿದಿನ ಸಿಗರೇಟ್ ಸೇದುತ್ತಿದ್ದರೆ, ವೀರ್ಯಾಣು ಕಡಿಮೆಯಾಗುವುದರ ಜೊತೆಗೆ, ಅದರ ಗುಣಮಟ್ಟವೂ ಕಡಿಮೆಯಾಗುತ್ತದೆ. ಆದ್ದರಿಂದ ನೀವು ಆರೋಗ್ಯವಾಗಿರಲು ಬಯಸಿದರೆ ಇಂದೇ ಧೂಮಪಾನವನ್ನು ತ್ಯಜಿಸಿ.

ಇದನ್ನೂ ಓದಿ-Cholesterol: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಈ ಅನುಭವಗಳಾಗುತ್ತವೆ, ನಿರ್ಲಕ್ಷಿಸಬೇಡಿ

ಮದ್ಯ
ಪುರುಷರು ಮರೆತೂ ಕೂಡ ಮದ್ಯ ಸೇವಿಸಬಾರದು. ಏಕೆಂದರೆ ಆಲ್ಕೋಹಾಲ್ ಕುಡಿಯುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ.

ಇದನ್ನೂ ಓದಿ-Kidney ರೋಗಿಗಳಿಗೆ ಯಾವ ಉಪ್ಪು ಆರೋಗ್ಯಕರ? ಬಿಳಿ ಉಪ್ಪು ಪ್ರಾಣವನ್ನೇ ತೆಗೆಯುತ್ತದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News