ಹೊಟ್ಟೆಯ ಕೊಬ್ಬು, ದೇಹ ತೂಕ ಎರಡನ್ನೂ ಕಳೆದುಕೊಳ್ಳಲು ಮ್ಯಾಜಿಕ್ ಡ್ರಿಂಕ್ : ಒಂದೇ ವಾರದಲ್ಲಿ ಪರಿಣಾಮ ಗ್ಯಾರಂಟಿ

ದೇಹದ ತೂಕವನ್ನು ಬಹಳ ಸುಲಭವಾಗಿ ಮತ್ತು ತ್ವರಿತವಾಗಿ ಹೆಚ್ಚಿಸಬಹುದು. ಆದರೆ, ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟ. ಇದಕ್ಕಾಗಿ ಕೆಲವರು ಜಿಮ್‌ಗೆ ಹೋಗಿ ವ್ಯಾಯಾಮ ಮಾಡುತ್ತಾರೆ. 

Written by - Ranjitha R K | Last Updated : Dec 19, 2023, 03:25 PM IST
  • ತೂಕ ಹೆಚ್ಚಾಗುವುದು ಗಂಭೀರ ಸಮಸ್ಯೆಯಾಗುತ್ತಿದೆ.
  • ತೂಕವನ್ನು ಕಳೆದುಕೊಳ್ಳುವ ಮಾರ್ಗಗಳು ಯಾವುವು?
  • ಆಹಾರ ಪದ್ಧತಿಯನ್ನು ಸುಧಾರಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.
ಹೊಟ್ಟೆಯ ಕೊಬ್ಬು, ದೇಹ ತೂಕ ಎರಡನ್ನೂ ಕಳೆದುಕೊಳ್ಳಲು  ಮ್ಯಾಜಿಕ್ ಡ್ರಿಂಕ್ : ಒಂದೇ ವಾರದಲ್ಲಿ ಪರಿಣಾಮ ಗ್ಯಾರಂಟಿ  title=

ಬೆಂಗಳೂರು : ತೂಕ ಹೆಚ್ಚಾಗುವುದು ಗಂಭೀರ ಸಮಸ್ಯೆಯಾಗುತ್ತಿದೆ. ಸ್ಥೂಲಕಾಯತೆಯು ಸೌಂದರ್ಯವನ್ನು ಕಡಿಮೆ ಮಾಡುವುದಲ್ಲದೆ ಮಧುಮೇಹ, ಕ್ಯಾನ್ಸರ್, ಕೊಲೆಸ್ಟ್ರಾಲ್, ಹೃದ್ರೋಗಗಳು ಮತ್ತು ಥೈರಾಯ್ಡ್‌ನಂತಹ ಹಲವಾರು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ತೂಕ ಹೆಚ್ಚಾಗಲು ಹಲವು ಮುಖ್ಯ ಕಾರಣಗಳಿವೆ. ಅವುಗಳಲ್ಲಿ ನಾವು ಅನುಸರಿಸುವ ಜೀವನಶೈಲಿ ಮತ್ತು ಕಳಪೆ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. 

ತೂಕವನ್ನು ಕಳೆದುಕೊಳ್ಳುವ ಮಾರ್ಗಗಳು ಯಾವುವು? :
ದೇಹದ ತೂಕವನ್ನು ಬಹಳ ಸುಲಭವಾಗಿ ಮತ್ತು ತ್ವರಿತವಾಗಿ ಹೆಚ್ಚಿಸಬಹುದು. ಆದರೆ, ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟ. ಇದಕ್ಕಾಗಿ ಕೆಲವರು ಜಿಮ್‌ಗೆ ಹೋಗಿ ವ್ಯಾಯಾಮ ಮಾಡುತ್ತಾರೆ. ಕೆಲವರು ಕಟ್ಟುನಿಟ್ಟಾದ ಆಹಾರ ಕ್ರಮದ ಮೊರೆ ಹೋಗುತ್ತಾರೆ. ಆದರೆ ಎಷ್ಟೇ ಕೆಲಸ ಮಾಡಿದರೂ ಕೆಲವೊಮ್ಮೆ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಹೀಗಾದಾಗ ಕೆಲವು ಸರಳ ನೈಸರ್ಗಿಕ ವಿಧಾನಗಳಲ್ಲಿ ತೂಕವನ್ನು ಕಳೆದುಕೊಳ್ಳಬಹುದು. 

ಇದನ್ನೂ ಓದಿ ಹಾಲಿಗೆ ಈ ವಸ್ತುವನ್ನು ಹಾಕಿ ಕುದಿಸಿ ಕುಡಿದರೆ ಮಂಡಿ ನೋವು ಮಾಯವಾಗಿ ಬಿಡುತ್ತದೆ !

ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ನಮ್ಮ ಹೊಟ್ಟೆಯಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವ ಮತ್ತು ತೂಕವನ್ನು ಕಡಿಮೆ ಮಾಡುವ ಕೆಲವು ಆಯುರ್ವೇದ ಪಾನೀಯಗಳನ್ನು ಮನೆಯಲ್ಲಿಯೇ ತಯಾರಿಸಬಹುದು. ಈ ಪಾನೀಯಗಳನ್ನು ತಯಾರಿಸಲು ಅರಿಶಿನ, ದಾಲ್ಚಿನ್ನಿ, ತುಳಸಿ ಎಲೆಗಳು ಮತ್ತು ಶುಂಠಿಯಂತಹ ಗಿಡಮೂಲಿಕೆಗಳು ಬೇಕಾಗುತ್ತವೆ.

ಕೊಬ್ಬು ಕರಗಿಸಲು ಸಹಾಯ ಮಾಡುವ ಪಾನೀಯ : 
ಶುಂಠಿ : ಶುಂಠಿಯ ಸೇವನೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ತೂಕ ಇಳಿಸಲು ಮತ್ತು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಚಕ್ಕೆ : ಚಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಅನಗತ್ಯ ಹಸಿವನ್ನು ನಿಗ್ರಹಿಸಲು, ಚಯಾಪಚಯವನ್ನು ಹೆಚ್ಚಿಸಲು ಮತ್ತು ಹೆಚ್ಚುವರಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಚಳಿಗಾಲದಲ್ಲಿ ಎಚ್ಚರಿಕೆಯಿಂದಿರಿ, ಇಲ್ಲವಾದರೇ ಈ ಸೋಂಕು ನಿಮ್ಮ ಬೆನ್ನತ್ತುವುದಂತು ಗ್ಯಾರಂಟಿ

ಅರಶಿನ : ಅರಿಶಿನವು ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅರಿಶಿನವು ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಹಸಿವನ್ನು ನಿಗ್ರಹಿಸುತ್ತದೆ. ಈ ಕಾರಣದಿಂದಾಗಿ, ಸಾಮಾನ್ಯವಾಗಿ ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದಿಲ್ಲ. 

ತುಳಸಿ ಎಲೆಗಳು : ತುಳಸಿ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕ್ಯಾಲೊರಿಗಳನ್ನು ಸುಲಭವಾಗಿ ಬರ್ನ್ ಮಾಡುತ್ತದೆ.   ನೈಸರ್ಗಿಕವಾಗಿ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸ್ಲಿಮ್ಮಿಂಗ್ ಪಾನೀಯವನ್ನು ಹೇಗೆ ತಯಾರಿಸುವುದು?  :
- ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ 1-2 ತುಳಸಿ ಎಲೆಗಳನ್ನು ಸೇರಿಸಿ
- ಇದರ ನಂತರ ಅದಕ್ಕೆ ಚಕ್ಕೆ ತುಂಡನ್ನು ಸೇರಿಸಿ
- ಇದರ ನಂತರ 1/4 ಟೀಚಮಚ ಅರಿಶಿನ ಪುಡಿ ಮಿಶ್ರಣ ಮಾಡಿ 
- ನಂತರ ಒಂದು ಇಂಚು ತುರಿದ ಶುಂಠಿ ಸೇರಿಸಿ 
- ಈ ಮಿಶ್ರಣವನ್ನು ಕನಿಷ್ಠ 10 ನಿಮಿಷಗಳ ಕಾಲ ಕುದಿಸಿ

ಇದನ್ನೂ ಓದಿ : ಚಳಿಗಾಲದಲ್ಲಿ ಎಚ್ಚರಿಕೆಯಿಂದಿರಿ, ಇಲ್ಲವಾದರೇ ಈ ಸೋಂಕು ನಿಮ್ಮ ಬೆನ್ನತ್ತುವುದಂತು ಗ್ಯಾರಂಟಿ

ತೂಕವನ್ನು ಕಳೆದುಕೊಳ್ಳಲು ಈ ಕೊಬ್ಬು ನಷ್ಟ ಪಾನೀಯವನ್ನು ಯಾವಾಗ ಕುಡಿಯಬೇಕು? :
ಪೌಷ್ಟಿಕತಜ್ಞರು ಈ ಸಂಯೋಜನೆಯು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದ್ದು, ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಎಂದಿದ್ದಾರೆ. ತೂಕ ನಷ್ಟಕ್ಕೆ ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಶೀತ-ಸಂಬಂಧಿತ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ, ಈ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಪಾನೀಯದೊಂದಿಗೆ ನಿಮ್ಮ ಸಂಪೂರ್ಣ ಜೀವನಶೈಲಿಯನ್ನು ನೀವು ನಿಯಂತ್ರಿಸಬೇಕಾಗುತ್ತದೆ. ಇದರೊಂದಿಗೆ, ದೈಹಿಕವಾಗಿ ಸಕ್ರಿಯವಾಗಿರುವುದು ಕೂಡಾ ಮುಖ್ಯವಾಗಿರುತ್ತದೆ. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News