ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಹಣ್ಣನ್ನು ಈ ರೀತಿ ಬಳಸಿ

ಕಿಡ್ನಿ ಆರೋಗ್ಯಕ್ಕಾಗಿ ನಿಂಬೆ ಪಾನೀಯಗಳು: ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಕಿಡ್ನಿ ಆರೋಗ್ಯವಾಗಿರಬೇಕಾದರೆ ಅದನ್ನು ಕ್ಲೀನ್ ಆಗಿ ಅಂದರೆ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ.

Written by - Yashaswini V | Last Updated : Apr 22, 2022, 12:19 PM IST
  • ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿರಬೇಕೆಂದರೆ ಎಲ್ಲಾ ಅಂಗಗಳು ಅತ್ಯಗತ್ಯ.
  • ಅದರಲ್ಲೂ ಮುಖ್ಯವಾಗಿ ಕಿಡ್ನಿ ಬೇಕೇ ಬೇಕು.
  • ಮೂತ್ರಪಿಂಡವು ಮಾನವ ದೇಹದಲ್ಲಿನ ಉಪ್ಪು, ಪೊಟ್ಯಾಸಿಯಮ್ ಮತ್ತು ಆಮ್ಲದ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಹಣ್ಣನ್ನು ಈ ರೀತಿ ಬಳಸಿ  title=
Lemon For Kidney Health

ಕಿಡ್ನಿ ಆರೋಗ್ಯಕ್ಕಾಗಿ ನಿಂಬೆ ಪಾನೀಯಗಳು:  ದೇಹದಲ್ಲಿ ರಕ್ತವನ್ನು ಸ್ವಚ್ಛಗೊಳಿಸಲು ಹಾಗೂ ದೇಹವನ್ನು ನಿರ್ವಿಷಗೊಳಿಸಲು ಮೂತ್ರಪಿಂಡಗಳು ಬಹಳ ಮುಖ್ಯ. ಹಾಗಾಗಿಯೇ ಇದನ್ನು ದೇಹತ ಅತ್ಯಂತ ಪ್ರಮುಖ ಅಂಗ ಎಂದು ಪರಿಗಣಿಸಲಾಗುತ್ತದೆ. ಈ ಕಾರ್ಯಕ್ಕಾಗಿ ಮೂತ್ರಪಿಂಡಗಳು ಆರೋಗ್ಯವಾಗಿರುವುದು ಮತ್ತು ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಅಗತ್ಯ. ಹಾಗಿದ್ದರೆ, ಕಿಡ್ನಿಯನ್ನು  ಆರೋಗ್ಯವಾಗಿಟ್ಟುಕೊಳ್ಳಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದರೆ ಅದಕ್ಕಾಗಿ ಸರಳವಾದ ಉಪಾಯ ನಿಮಗಾಗಿ. 

ಆರೋಗ್ಯವಂತರಾಗಿರಲು ಮೂತ್ರಪಿಂಡ ಏಕೆ ಅಗತ್ಯ?
ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿರಬೇಕೆಂದರೆ ಎಲ್ಲಾ ಅಂಗಗಳು ಅತ್ಯಗತ್ಯ. ಅದರಲ್ಲೂ ಮುಖ್ಯವಾಗಿ ಕಿಡ್ನಿ ಬೇಕೇ ಬೇಕು. ಮೂತ್ರಪಿಂಡವು ಮಾನವ ದೇಹದಲ್ಲಿನ ಉಪ್ಪು, ಪೊಟ್ಯಾಸಿಯಮ್ ಮತ್ತು ಆಮ್ಲದ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ, ನಮ್ಮ ದೇಹದ ಇತರ ಭಾಗಗಳು ಕಾರ್ಯನಿರ್ವಹಿಸಲು ಅಗತ್ಯವಾದ ಹಾರ್ಮೋನುಗಳು  ಸಹ ಮೂತ್ರಪಿಂಡಗಳಿಂದ ಹೊರಬರುತ್ತವೆ. ಕಿಡ್ನಿ ಅಥವಾ ಮೂತ್ರಪಿಂಡದ ಮುಖ್ಯ ಕಾರ್ಯವೆಂದರೆ ಮೂತ್ರದ ಮೂಲಕ ದೇಹದಿಂದ ವಿಷವನ್ನು ಮತ್ತು ದ್ರವವನ್ನು ಹೊರಹಾಕುವುದು. ಹಾಗಾಗಿ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದರೆ ತಪ್ಪಾಗಲಾರದು. 

ನಿತ್ಯ ಈ ಜ್ಯೂಸ್ ಸೇವನೆಯಿಂದ ಕಿಡ್ನಿ ಆರೋಗ್ಯವಾಗಿರುತ್ತೆ:
ವಾಸ್ತವವಾಗಿ,  ಕಿಡ್ನಿ ನಮ್ಮ ದೇಹದಿಂದ ವಿಷವನ್ನು ಹೊರಹಾಕುವ ಕಾರ್ಯ ನಿರ್ವಹಿಸುತ್ತದೆ. ಆದರೆ, ಹಲವು ಬಾರಿ ಈ ವಿಷವು ಕಿಡ್ನಿಗಳನ್ನು ಹಾನಿಗೊಳಿಸುವ ಸಾಧ್ಯತೆಯಿದೆ. ಇದರಿಂದಾಗಿ ಮೂತ್ರಪಿಂಡಗಳು ವಿಫಲಗೊಳ್ಳುವ ಸಾಧ್ಯತೆಯೂ ಉಂಟು. ಆದರೆ ಪ್ರತಿ ದಿನ ಒಂದು ಜ್ಯೂಸ್ ಕುಡಿಯುವುದರಿಂದ ನಿಮ್ಮ ಮೂತ್ರಪಿಂಡಗಳು ಹಾನಿಗೊಳಗಾಗುವುದನ್ನು ತಡೆಯಬಹುದು. ಈ ಒಂದು ಗ್ಲಾಸ್ ಜ್ಯೂಸ್ ಕಿಡ್ನಿಯನ್ನು ಸ್ವಚ್ಛಗೊಳಿಸಲು ಅದನ್ನು ಆರೋಗ್ಯವಾಗಿರಿಸಿಕೊಳ್ಳಲು ಸಹಕಾರಿಯಾಗಲಿದೆ. ಮೂತ್ರಪಿಂಡವನ್ನು ಶುಚಿಗೊಳಿಸುವ ಈ ಪಾನೀಯವನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ಎಂದು ತಿಳಿಯೋಣ.

ಇದನ್ನೂ ಓದಿ- ಕಿಡ್ನಿ ಹಾನಿಯಾಗುವುದನ್ನು ತಪ್ಪಿಸಲು ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ

ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಹಣ್ಣನ್ನು ಈ ರೀತಿ ಬಳಸಿ 
ವರದಿಯೊಂದರ ಪ್ರಕಾರ, ಪ್ರತಿದಿನ 2 ನಿಂಬೆಹಣ್ಣಿನ ರಸವನ್ನು ಕುಡಿಯುವುದರಿಂದ ಮೂತ್ರದ ಸಿಟ್ರೇಟ್ ಅನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡದಿಂದ ವಿಷವನ್ನು ತೆಗೆದುಹಾಕುತ್ತದೆ. ಅದೇ ಸಮಯದಲ್ಲಿ, ದಿನಕ್ಕೆ 2 ರಿಂದ 2.5 ಲೀಟರ್ ಮೂತ್ರ ವಿಸರ್ಜಿಸುವ ಜನರು ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳಿಗೆ ಕಡಿಮೆ ಬಲಿಯಾಗುತ್ತಾರೆ ಎಂದು ತಿಳಿದುಬಂದಿದೆ. ಈ ಮೂತ್ರಪಿಂಡದ ಆರೋಗ್ಯಕರ ಪಾನೀಯವನ್ನು ನೀವು ಬೆಳಿಗ್ಗೆ ಮತ್ತು ಮಧ್ಯಾಹ್ನ ಕುಡಿಯಬಹುದಾಗಿದೆ. 

ನಿಂಬೆ ಹಣ್ಣಿನಲ್ಲಿ ಈ ವಸ್ತುಗಳನ್ನು ಬೆರೆಸಿ ಜ್ಯೂಸ್ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ:
ಕಿಡ್ನಿ ಆರೋಗ್ಯಕ್ಕೆ ಕೇವಲ ನಿಂಬೆ ಜ್ಯೂಸ್ ಕುಡಿಯುವುದಕ್ಕಿಂತ ಅದರಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಿ ಕುಡಿಯುವುದು ಹೆಚ್ಚಿನ ಪ್ರಯೋಜನಕಾರಿ ಆಗಿದೆ. ಅವುಗಳ ಬಗ್ಗೆ ತಿಳಿಯೋಣ...
* ನಿಂಬೆ-ಪುದೀನ ಜ್ಯೂಸ್:
ನಿಂಬೆ ರಸದೊಂದಿಗೆ ಪುದೀನ ಎಲೆ ಬೆರೆಸಿ ತಯಾರಿಸಲಾದ ಪಾನೀಯವು ಮೂತ್ರಪಿಂಡಗಳ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.

* ನಿಂಬೆ ರಸದೊಂದಿಗೆ ಮಸಾಲಾ ಸೋಡಾ: 
ನಿಂಬೆಹಣ್ಣಿನ ರಸ, ಜೀರಿಗೆ-ಕೊತ್ತಂಬರಿ ಪುಡಿ, ಚಾಟ್ ಮಸಾಲ ಮತ್ತು ಸೋಡಾವನ್ನು ಚೆನ್ನಾಗಿ ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ ಸೇವಿಸುವುದರಿಂದಲೂ ಮೂತ್ರಪಿಂಡ ಆರೋಗ್ಯಕರವಾಗಿರುತ್ತದೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ- ನೀರು ಕುಡಿಯುವ ನಿಮ್ಮ ಈ ಅಭ್ಯಾಸವನ್ನು ಇಂದೇ ಸುಧಾರಿಸಿ, ಇಲ್ಲವೇ...

*ಎಳನೀರಿನ ಗಂಜಿ:
ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತೇ ಇದೆ. ಅದೇ ಎಳನೀರಿನ ಗಂಜಿಯನ್ನು ನಿಂಬೆ ಪಾನೀಯದಲ್ಲಿ ಬೆರೆಸಿ ಕುಡಿಯುವುದರಿಂದ ಕಿಡ್ನಿ ಸ್ವಚ್ಛವಾಗಿಡಲು ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News