Kiwi Benefits: ದಿನದಲ್ಲಿ ಕೇವಲ ಒಂದು ಕಿವಿ ಹಣ್ಣು ಸೇವನೆಯಿಂದ ಸಿಗುತ್ತೆ ಈ 4 ಅದ್ಭುತ ಪ್ರಯೋಜನ

Kiwi Benefits: ಕಿವಿ ಹಣ್ಣಿನ ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಿವಿಯಲ್ಲಿ ಫೈಬರ್, ವಿಟಮಿನ್ ಇ, ಪಾಲಿಫಿನಾಲ್ಗಳು ಮತ್ತು ಕ್ಯಾರೊಟಿನಾಯ್ಡ್ಗಳು ಸಮೃದ್ಧವಾಗಿವೆ, ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

Written by - Yashaswini V | Last Updated : Dec 21, 2021, 11:58 AM IST
  • ಕಿವಿ ಹಣ್ಣಿನ ಸೇವನೆಯು ಹೃದಯವನ್ನು ಆರೋಗ್ಯವಾಗಿರಿಸುತ್ತದೆ
  • ಇದರಲ್ಲಿರುವ ಪೊಟ್ಯಾಸಿಯಮ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ
  • ಫೈಬರ್ ಮತ್ತು ವಿಟಮಿನ್ಗಳ ಪ್ರಮಾಣವು ಅಪಧಮನಿಗಳನ್ನು ಬಲಪಡಿಸುತ್ತದೆ
Kiwi Benefits: ದಿನದಲ್ಲಿ ಕೇವಲ ಒಂದು ಕಿವಿ ಹಣ್ಣು ಸೇವನೆಯಿಂದ ಸಿಗುತ್ತೆ ಈ 4 ಅದ್ಭುತ ಪ್ರಯೋಜನ  title=
Kiwi Benefits: ಈ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಕಿವಿ ಹಣ್ಣು

Kiwi Benefits: ಕಿವಿ ಹಣ್ಣಿನ ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಿವಿಯಲ್ಲಿ ಫೈಬರ್, ವಿಟಮಿನ್ ಇ, ಪಾಲಿಫಿನಾಲ್ಗಳು ಮತ್ತು ಕ್ಯಾರೊಟಿನಾಯ್ಡ್ಗಳು ಸಮೃದ್ಧವಾಗಿವೆ. ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹೃದಯದ ಆರೋಗ್ಯದಿಂದ ಉತ್ತಮ ನಿದ್ರೆಯವರೆಗೆ ಪ್ರತಿದಿನ ಒಂದು ಕಿವಿ ಹಣ್ಣನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ದೈನಂದಿನ ಆಹಾರದಲ್ಲಿ ಒಂದು ಕಿವಿ ಹಣ್ಣನ್ನು  ಸೇವಿಸುವುದರಿಂದ ಸಿಗುವ 4 ಪ್ರಯೋಜನಗಳನ್ನು ತಿಳಿಯಿರಿ. 

ಹೃದಯದ ಆರೋಗ್ಯಕ್ಕಾಗಿ ಕಿವಿ ಹಣ್ಣಿನ ಸೇವನೆ:
ಕಿವಿ ಹಣ್ಣಿನ (Kiwi Fruit) ಸೇವನೆಯಿಂದ ಹೃದಯವೂ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಫೈಬರ್ ಮತ್ತು ವಿಟಮಿನ್ಗಳ ಪ್ರಮಾಣವು ಅಪಧಮನಿಗಳನ್ನು ಬಲವಾಗಿ ಇಡುತ್ತದೆ.

ಇದನ್ನೂ ಓದಿ- Black Tea Benefits For Skin: ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಬ್ಲಾಕ್ ಟೀ; ಈ ಸಮಸ್ಯೆಗೆ ಸಿಗುತ್ತೆ ಶಾಶ್ವತ ಪರಿಹಾರ

ಡೆಂಗ್ಯೂ ಜ್ವರದಲ್ಲಿ ಪರಿಹಾರ:
ಕಿವಿ ಹಣ್ಣಿನಲ್ಲಿರುವ ವಿಟಮಿನ್ ಸಿ (Vitamin C), ಆಂಟಿಆಕ್ಸಿಡೆಂಟ್‌ಗಳು, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಅಂಶಗಳು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರದಿಂದಾಗಿ, ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಬಹಳ ವೇಗವಾಗಿ ಕುಸಿಯಲು ಪ್ರಾರಂಭಿಸುತ್ತದೆ. ಕಿವಿ ಹಣ್ಣಿನ ಸೇವನೆಯು ಪ್ಲೇಟ್‌ಲೆಟ್‌ಗಳು ಕಡಿಮೆಯಾಗದಂತೆ ತಡೆಯಲು ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಕಿವಿಯ ಸೇವನೆ ಪ್ರಾಯೋಜನೆ: 
ಗರ್ಭಾವಸ್ಥೆಯಲ್ಲಿ ಸಹ ಕಿವಿ ಹಣ್ಣಿನ ಸೇವನೆ ಪ್ರಯೋಜನವನ್ನು (Kiwi Benefits) ನೀಡುತ್ತದೆ. ಕಿವಿಯಲ್ಲಿರುವ ಫೋಲೇಟ್ ಮಗುವಿನ ಮೆದುಳಿನ ಬೆಳವಣಿಗೆಗೆ ಅವಶ್ಯಕವಾಗಿದೆ. ಗರ್ಭಾವಸ್ಥೆಯ ಮೊದಲು ಮತ್ತು ಸಮಯದಲ್ಲಿ ಕಿವಿ ಹಣ್ಣನ್ನು ಸೇವಿಸುವುದರಿಂದ ನರ ಕೊಳವೆಯ ದೋಷಗಳನ್ನು ತಡೆಯುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. 

ಇದನ್ನೂ ಓದಿ- Banana Side Effects : ಬಾಳೆಹಣ್ಣು ಯಾರು? ಯಾಕೆ? ಸೇವಿಸಬೇಕು, ಇದರ ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಚೆನ್ನಾಗಿ ನಿದ್ದೆ ಮಾಡಲು: 
ನಿಮಗೆ ನಿದ್ರಾಹೀನತೆ ಸಮಸ್ಯೆ ಇದ್ದರೆ, ಕಿವಿ ಹಣ್ಣನ್ನು ತಿನ್ನುವುದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಕಿವಿಯಲ್ಲಿ ಸಿರೊಟೋನಿನ್ ಇದ್ದು ಇದು ಸಂತೋಷದ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಉತ್ತಮ ನಿದ್ರೆಗಾಗಿ, ರಾತ್ರಿ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ನೀವು ಕಿವಿ ಹಣ್ಣನ್ನು ಸೇವಿಸುವುದರಿಂದ ಪರಿಹಾರ ಪಡೆಯಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News