ಈ ಒಂದು ವಸ್ತುವನ್ನು ಸೇವಿಸಿದರೆ ಶುಗರ್ ಲೆವೆಲ್ ಕ್ಷಣ ಮಾತ್ರದಲ್ಲಿ ಕಡಿಮೆಯಾಗುತ್ತದೆ ..!

ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕಾರಣ, ಕರಿ ಜೀರಿಗೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಹೊರ ಬರಲು ಇದನನ್ನು ಬಳಸಲಾಗುತ್ತದೆ.    ಇದರ ಸೇವನೆಯು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿಯಾಗಿದೆ. 

Written by - Ranjitha R K | Last Updated : Jul 6, 2022, 10:16 AM IST
  • ಕಪ್ಪು ಜೀರಿಗೆಯ ವಿಶೇಷ ಪರಿಮಳವು ಇತರ ಮಸಾಲೆಗಳಿಂದ ಭಿನ್ನವಾಗಿರುತ್ತದೆ.
  • ಈ ಮಸಾಲೆಯ ದೊಡ್ಡ ವೈಶಿಷ್ಟ್ಯವೆಂದರೆ ಅದರ ಔಷಧೀಯ ಗುಣಗಳು.
  • ಸಕ್ಕರೆ ನಿಯಂತ್ರಣಕ್ಕಾಗಿ ಕರಿಜೀರಿಗೆಯನ್ನು ಸೇವಿಸುವುದು ಹೇಗೆ ?
ಈ ಒಂದು ವಸ್ತುವನ್ನು ಸೇವಿಸಿದರೆ ಶುಗರ್ ಲೆವೆಲ್ ಕ್ಷಣ ಮಾತ್ರದಲ್ಲಿ ಕಡಿಮೆಯಾಗುತ್ತದೆ ..!    title=
Diabets control tips (file photo)

ಬೆಂಗಳೂರು : ಕಪ್ಪು ಜೀರಿಗೆ, ಈರುಳ್ಳಿ ಬೀಜಗಳು ಅಥವಾ ಸೋಂಪು ನೋಡುವುದಕ್ಕೆ  ಆಕರ್ಷಕವಾಗಿ ಕಾಣುವುದಿಲ್ಲ. ಆದರೆ ಅವುಗಳ ವಿಶೇಷ ಪರಿಮಳವು ಇತರ ಮಸಾಲೆಗಳಿಂದ ಭಿನ್ನವಾಗಿರುತ್ತದೆ. ಈ ಮಸಾಲೆಯ ದೊಡ್ಡ ವೈಶಿಷ್ಟ್ಯವೆಂದರೆ ಅದರ ಔಷಧೀಯ ಗುಣಗಳು. ಕಪ್ಪು ಜೀರಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಹೊರತುಪಡಿಸಿ, ಫೈಬರ್, ವಿಟಮಿನ್ ಗಳು ಮತ್ತು ಅನೇಕ ರೀತಿಯ ಖನಿಜಗಳು ಇದರಲ್ಲಿ ಕಂಡುಬರುತ್ತವೆ. ಮತ್ತೊಂದೆಡೆ, ಆರೋಗ್ಯಕರ ಕೊಬ್ಬುಗಳು, ಅಮೈನೋ ಆಮ್ಲಗಳು ಮತ್ತು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳು  ಸೋಪಿನಲ್ಲಿರುತ್ತದೆ.  

ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕಾರಣ, ಕರಿ ಜೀರಿಗೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಹೊರ ಬರಲು ಇದನನ್ನು ಬಳಸಲಾಗುತ್ತದೆ. ಇದರ ಸೇವನೆಯು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿಯಾಗಿದೆ. ಪ್ರತಿದಿನ ಅರ್ಧ ಚಮಚದಷ್ಟು   ಕರಿಜೀರಿಗೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ. ಇದರಿಂದ ಇನ್ಸುಲಿನ್ ಉತ್ಪತ್ತಿಯಾಗುತ್ತದೆ.   ಮಾತ್ರವಲ್ಲ ಮಧುಮೇಹದಿಂದ  ಉಂಟಾಗುವ ಇತರ ಆರೋಗ್ಯ ಸಮಸ್ಯೆಗಳಾದ ದೃಷ್ಟಿ ಕಳೆದುಕೊಳ್ಳುವುದು, ಕಣ್ಣಿನ ಪೊರೆ ಮತ್ತು ದೇಹದ ಆಂತರಿಕ ಅಂಗಗಳಿಗೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. 

ಇದನ್ನೂ ಓದಿ : Cholesterol Control Tips: ಈ ಬೀಜಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತೆ

ಸಕ್ಕರೆ ನಿಯಂತ್ರಣಕ್ಕಾಗಿ  ಕರಿಜೀರಿಗೆಯನ್ನು ಸೇವಿಸುವುದು ಹೇಗೆ ? 
ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯಿರಿ :
ಮಧುಮೇಹದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ  ಕರಿಜೀರಿಗೆಯನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ.  
ಇದಕ್ಕಾಗಿ ಒಂದು ಲೋಟ ನೀರಿಗೆ ಕರಿಜೀರಿಗೆ ಪುಡಿಯನ್ನು ಬೆರೆಸಿ ಕುಡಿಯಿರಿ.

ಕರಿ ಜೀರಿಗೆಯ ಚಹಾ ಮಾಡುವ ವಿಧಾನ : 
1. 100 ಮಿಲಿ ನೀರಿನೊಂದಿಗೆ 2 ಟೀ ಚಮಚ  ಕರಿಜೀರಿಗೆ ಹಾಕಿ ಕುದಿಸಿ. 
2. 10 ನಿಮಿಷ ಕುದಿಸಿದ ನಂತರ ನೀರು ಅರ್ಧಕ್ಕೆ ಬಂದಾಗ ಉರಿಯಿಂದ ಇಳಿಸಿ. ನಂತರ,  ಹರ್ಬಲ್ ಚಹಾವನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.

ಇದನ್ನೂ ಓದಿ : Mens Health: ಅತಿ ಹೆಚ್ಚು ಉಪ್ಪಿನ ಕಾಯಿಯ ಸೇವನೆ ಪುರುಷರ ಪಾಲಿಗೆ ಹಾನಿಕಾರಕ, ಏಕೆ ತಿಳಿಯಲು ಸುದ್ದಿ ಓದಿ

 

( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲಿ ಹಕ್ಕು ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News