Sugar Control: ಮಧುಮೇಹ.. ಕೊಲೆಸ್ಟ್ರಾಲ್‌ ರೋಗಕ್ಕೆ ರಾಮಬಾಣ ʼಈʼ ಬೀಜ! ಎಸೆಯುವ ಮುನ್ನ ಯೋಚಿಸಿ!!

Home remedies for Diabetes: ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಹೆಚ್ಚುತ್ತಿದೆ ಎಂದು ಹೇಳಬೇಕಾಗಿಲ್ಲ. ವಯಸ್ಸಿನ ಭೇದವಿಲ್ಲದೆ ಎಲ್ಲರೂ ಇದರ ಪ್ರಭಾವಕ್ಕೆ ಒಳಗಾಗುತ್ತಾರೆ. ಮೊದಲು ಇದು 50 ಅಥವಾ 60 ವರ್ಷಗಳ ನಂತರ ಮಾತ್ರ ಬರುತ್ತಿತ್ತು. ಆದರೆ ಈಗ 20ರ ಆಸುಪಾಸಿನ ಜನರಿಗೂ ಈ ಕಾಯಿಲೆ ಬರುತ್ತಿದೆ..

Written by - Savita M B | Last Updated : Oct 13, 2024, 05:58 PM IST
  • ಪ್ರಸ್ತುತ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಗಳು ಸಮಸ್ಯೆಗಳನ್ನು ಉಂಟುಮಾಡುತ್ತಿವೆ.
  • ಒಮ್ಮೆ ಮಧುಮೇಹ ಬಂದರೆ ಜೀವನ ಪರ್ಯಂತ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
 Sugar Control: ಮಧುಮೇಹ.. ಕೊಲೆಸ್ಟ್ರಾಲ್‌ ರೋಗಕ್ಕೆ ರಾಮಬಾಣ ʼಈʼ ಬೀಜ! ಎಸೆಯುವ ಮುನ್ನ ಯೋಚಿಸಿ!!  title=

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ, ಪ್ರಸ್ತುತ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಗಳು ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಒಮ್ಮೆ ಮಧುಮೇಹ ಬಂದರೆ ಜೀವನ ಪರ್ಯಂತ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. 

ಹಾಗಾಗಿ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಈ ವಿಧಾನದಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಅನೇಕ ಅಧ್ಯಯನಗಳಲ್ಲಿ ತೋರಿಸಲಾಗಿದೆ. ಅದೇ ರೀತಿ ಅನೇಕ ಜನರು ಹುಣಸೆ ಹಣ್ಣಿನಿಂದ ಬರುವ ಬೀಜಗಳನ್ನು ಎಸೆಯುತ್ತಾರೆ. ಆದರೆ ಇದರಿಂದ ಮಧುಮೇಹವನ್ನೂ ನಿಯಂತ್ರಿಸಬಹುದು. 

ಇದನ್ನೂ ಓದಿ-11ನೇ ಸೀಸನ್‌ ನಡೀತಿದೆ... ಆದ್ರೆ ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಮೊದಲ ಜಗಳ ಯಾವುದು ಗೊತ್ತಾ? ಯಾರ ಮಧ್ಯೆ ನಡೆದಿತ್ತು ನೆನಪಿದ್ಯಾ?

ಸಕ್ಕರೆ ನಿಯಂತ್ರಣ:
ಹುಣಸೆ ಬೀಜಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಬಳಿಕ ಅದನ್ನು ಹುರಿದು ಕುಟ್ಟಿ ಪುಡಿಮಾಡಿ.. ಅದನ್ನು ಲೋಟ ಬೆಚ್ಚಗಿನ ನೀರಿನಲ್ಲಿ ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಆದರೆ ನೀವು ತಿನ್ನುವ ಆಹಾರಕ್ಕೆ ಅರ್ಧ ಘಂಟೆಯ ಮೊದಲು ನೀವು ಅದನ್ನು ತೆಗೆದುಕೊಳ್ಳಬೇಕು. 

ದೇಹದ ನೋವು ಕಡಿಮೆಯಾಗುತ್ತದೆ: 
ಹುಣಸೆ ಬೀಜದ ಪುಡಿಯನ್ನು ಸೇವಿಸುವುದರಿಂದ ದೇಹದ ನೋವು ಕಡಿಮೆಯಾಗುತ್ತದೆ. ದೇಹ ನೋವಿನಿಂದ ಬಳಲುತ್ತಿರುವವರು ಎರಡು ದಿನ ಈ ನೀರನ್ನು ಕುಡಿದರೆ ನೋವು ನಿಯಂತ್ರಣಕ್ಕೆ ಬರುತ್ತದೆ.

ತೂಕ ನಷ್ಟ:
ಬೆಳಿಗ್ಗೆ ಹಲ್ಲುಜ್ಜಿದ ನಂತರ ಹುಣಸೆ ಬೀಜದ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದು ತುಂಬಾ ಒಳ್ಳೆಯದು. ಇದರಿಂದ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ.

ಇದನ್ನೂ ಓದಿ-'ನೀನಿಲ್ಲದೆ ನಾನೇನು ಮಾಡಲಿ' ಅಮಿತಾಬ್ ಬಚ್ಚನ್, ಮುಖೇಶ್ ಅಗರ್ವಾಲ್ ಅಲ್ಲ ರೇಖಾ 'ಈ' ವ್ಯಕ್ತಿಯನ್ನು ಹುಚ್ಚಳಂತೆ ಪ್ರೀತಿಸುತ್ತಿದ್ದರು! ಯಾರು ಗೊತ್ತೇ?

ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ:
ಇತ್ತೀಚಿನ ದಿನಗಳಲ್ಲಿ ಅನೇಕರು ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ಈ ನೀರನ್ನು ಕುಡಿದರೆ ಕೆಲವೇ ದಿನಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ.. 

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ:
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಈ ಪುಡಿಯನ್ನು ಬೆರೆಸಿ ಕುಡಿದರೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಎಲ್ಲಾ ಕರಗುತ್ತದೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News