Uric Acid ಸಮಸ್ಯೆಯಿದ್ದವರು ಈ ವಸ್ತುಗಳನ್ನು ತಪ್ಪಿಯೂ ತಿನ್ನಬಾರದು

ಯೂರಿಕ್ ಆಸಿಡ್ ಸಮಸ್ಯೆಯಿದ್ದವರು, ಕೆಲವು ಪದಾರ್ಥಗಳನ್ನು ತಿನ್ನುವ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು.  ಯಾಕೆಂದರೆ ಈ ವಸ್ತುಗಳನ್ನು ತಿನ್ನುವುದರಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಬಹುದು.  

Written by - Ranjitha R K | Last Updated : Feb 15, 2022, 12:21 PM IST
  • ಯೂರಿಕ್ ಆಸಿಡ್ ಸಮಸ್ಯೆಯಿದ್ದವರು, ಕೆಲವು ಪದಾರ್ಥಗಳನ್ನು ತಿನ್ನಬಾರದು
  • ಈ ವಸ್ತುಗಳನ್ನು ತಿನ್ನುವುದರಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಬಹುದು.
  • ಯೂರಿಕ್ ಆಮ್ಲದ ಸಮಸ್ಯೆ ನಿಯಂತ್ರಿಸುವಲ್ಲಿ ಆಹಾರಕ್ರಮ ಬಹಳ ಮುಖ್ಯ
 Uric Acid ಸಮಸ್ಯೆಯಿದ್ದವರು  ಈ ವಸ್ತುಗಳನ್ನು ತಪ್ಪಿಯೂ ತಿನ್ನಬಾರದು  title=
ಯೂರಿಕ್ ಆಸಿಡ್ ಸಮಸ್ಯೆಯಿದ್ದವರು, ಕೆಲವು ಪದಾರ್ಥಗಳನ್ನು ತಿನ್ನಬಾರದು (file photo)

ನವದೆಹಲಿ : ಯೂರಿಕ್ ಆಮ್ಲದ ಸಮಸ್ಯೆಯನ್ನು (Uric Acid problem) ನಿಯಂತ್ರಿಸುವಲ್ಲಿ ನಮ್ಮ ಆಹಾರಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು (Lifestyle) ಅನುಸರಿಸುವ ಮೂಲಕ, ನಾವು ದೇಹವನ್ನು ರೋಗಗಳಿಂದ ದೂರವಿಡಬಹುದು. ಯೂರಿಕ್ ಆಸಿಡ್ ಸಮಸ್ಯೆಯಿದ್ದವರು, ಕೆಲವು ಪದಾರ್ಥಗಳನ್ನು ತಿನ್ನುವ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು.  ಯಾಕೆಂದರೆ ಈ ವಸ್ತುಗಳನ್ನು ತಿನ್ನುವುದರಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಬಹುದು.  

ಮೊದಲನೆಯದಾಗಿ ಯೂರಿಕ್ ಆಸಿಡ್ (Uric Acid problem) ಎಂದರೇನು ಎಂದು ತಿಳಿಯುವುದು ಮುಖ್ಯ. ಯೂರಿಕ್ ಆಮ್ಲವು ದೇಹದ ಜೀವಕೋಶಗಳಿಂದ ಮತ್ತು ನಾವು ತಿನ್ನುವ ವಸ್ತುಗಳಿಂದ ತಯಾರಿಸಲ್ಪಡುತ್ತದೆ. ಹೆಚ್ಚಿನ ಯೂರಿಕ್ ಆಮ್ಲವು ಮೂತ್ರಪಿಂಡಗಳಿಂದ (Kidney) ಉತ್ಪತ್ತಿಯಾಗುತ್ತದೆ. ಇದು ಫಿಲ್ಟರ್ ಆಗಿ, ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ. ಆದರೆ ಯೂರಿಕ್ ಆಮ್ಲವು ದೇಹದಲ್ಲಿ ಹೆಚ್ಚು  ಉತ್ಪತ್ತಿಯಾಗಿ, ಮೂತ್ರಪಿಂಡವು ಇದನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದರೆ, ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುತ್ತದೆ. ಯೂರಿಕ್ ಆಮ್ಲದ ಹೆಚ್ಚಳವು ದೇಹದ ಸ್ನಾಯುಗಳಲ್ಲಿ ಊತವನ್ನು ಉಂಟುಮಾಡುತ್ತದೆ. ಮತ್ತು ನೋವು ಕಾಣಿಸಿಕೊಳ್ಳುತ್ತದೆ.  ಈ ನೋವು ದೇಹದ ಯಾವ ಭಾಗದಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಯೂರಿಕ್ ಆಸಿಡ್ ಸಮಸ್ಯೆಯಿದ್ದರೆ ತಪ್ಪಿ ಕೂಡಾ ಕೆಲವು ವಸ್ತುಗಳನ್ನು ತಿನ್ನಬಾರದು. 

ಇದನ್ನೂ ಓದಿ : Drinking Tea : ನೀವು ಚಹಾ ಪ್ರಿಯರೆ! ಹಾಗಿದ್ರೆ, ದಿನಕ್ಕೆ ಎಷ್ಟು ಕಪ್ ಟೀ ಕುಡಿಯಬೇಕು? ಇಲ್ಲಿದೆ ನೋಡಿ

ಒಣದ್ರಾಕ್ಷಿ:
ಒಣದ್ರಾಕ್ಷಿಗಳನ್ನು (Raisin) ಸಾಮಾನ್ಯವಾಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ನಿಮ್ಮ ಯೂರಿಕ್ ಆಸಿಡ್ (Uric acid) ಮಟ್ಟ ಹೆಚ್ಚಿದ್ದರೆ, ಒಣದ್ರಾಕ್ಷಿಗಳನ್ನು ತಿನ್ನಲೇಬಾರದು.  ಇದು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. 

ಕಡಲೆಕಾಯಿ :
 ಚಳಿಗಾಲದಲ್ಲಿ ಕಡಲೆಕಾಯಿಯನ್ನು ಹೆಚ್ಚಾಗಿ ತಿನ್ನಲಾಗುತ್ತದೆ. ಆದರೆ  ಗೌಟ್ ಸಮಸ್ಯೆ ಇದ್ದರೆ,  ಕಡಲೆಕಾಯಿಯನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ. ಕಡಲೇಕಾಯಿ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ : ತಡರಾತ್ರಿಯವರೆಗೆ ಫೋನ್ ನೋಡುವ ಅಭ್ಯಾಸವಿದ್ದರೆ ಎಚ್ಚರ! ಮೆದುಳಿನ ಈ ಅಪಾಯ ಸಂಭವಿಸಬಹುದು

3. ಮದ್ಯಪಾನ :
ಆಲ್ಕೋಹಾಲ್ (alcohol) ಸೇವಿಸುವ ಅಭ್ಯಾಸವಿದ್ದು, ನಿಮ್ಮ ಯೂರಿಕ್ ಆಮ್ಲವು ಅಧಿಕವಾಗಿದ್ದರೆ, ಮದ್ಯಪಾನ ಸೇವನೆಯನ್ನು ತಕ್ಷಣ ನಿಲ್ಲಿಸಿ. ಆಲ್ಕೋಹಾಲ್ ನಲ್ಲಿ ಪ್ಯೂರಿನ್‌ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಯೂರಿಕ್ ಆಮ್ಲವನ್ನು ಇನ್ನಷ್ಟು ಹೆಚ್ಚಿಸುತ್ತದೆ.

4. ಎಲೆಕೋಸು :
ಹಸಿರು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ನಿಮ್ಮ ಯೂರಿಕ್ ಆಮ್ಲಸಮಸ್ಯೆಯಿಂದ ಬಳಲುತ್ತಿದ್ದರೆ, ಎಲೆಕೋಸು (Cabbage) ನಿಮಗೆ ಮಾರಕವಾಗಿ ಪರಿಣಮಿಸಬಹುದು.   ಎಲೆಕೋಸು ಪ್ಯೂರಿನ್ ಗಳನ್ನು ಹೊಂದಿರುತ್ತದೆ. ಇದು ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News