ನವದೆಹಲಿ: ಬೇಸಿಗೆಯಲ್ಲಿ ಸಲಾಡ್ ಸೇವನೆಯಿಂದ ದೇಹಕ್ಕೆ ಅನೇಕ ರೀತಿಯ ಪ್ರಯೋಜನ ದೊರೆಯುತ್ತದೆ. ಸಲಾಡ್‍ನಲ್ಲಿ ಸೌತೆಕಾಯಿ ಇಲ್ಲದಿದ್ದರೆ ಆಹಾರ ಅಪೂರ್ಣವಾಗುತ್ತದೆ. ಈ ಹಿನ್ನೆಲೆ ಜನರು ತಮಗಿಷ್ಟಬಂದಂತೆ ಸೌತೆಕಾಯಿ ಸೇವಿಸುತ್ತಾರೆ. ಸೌತೆಕಾಯಿ ಸೇವಿಸುವುದು ಚರ್ಮಕ್ಕೆ ಮಾತ್ರವಲ್ಲ ಹೊಟ್ಟೆಗೂ ತುಂಬಾ ಪ್ರಯೋಜನಕಾರಿ.
ಕಫದ ಸಮಸ್ಯೆ ಇರುವವರು ಸರಿಯಾದ ಸಮಯಕ್ಕೆ ಸೌತೆಕಾಯಿ ಸೇವಿಸಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಸೌತೆಕಾಯಿಯನ್ನು ಸಮಯಕ್ಕೆ ಸರಿಯಾಗಿ ತಿನ್ನದಿದ್ದರೆ ನೆಗಡಿ, ಕೆಮ್ಮು ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಬರುವ ಅಪಾಯವಿದೆ. ಸೌತೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಆದರೆ ನೀವು ಸೌತೆಕಾಯಿಯನ್ನು ಸರಿಯಾದ ಸಮಯಕ್ಕೆ ತಿನ್ನದಿದ್ದರೆ ಅಡ್ಡಪರಿಣಾಮ ಉಂಟಾಗಬಹುದು. ಸೌತೆಕಾಯಿ ತಿನ್ನಲು ಯಾವುದು ಸರಿಯಾದ ಸಮಯ ಎಂದು ತಿಳಿಯಿರಿ.
ಇದನ್ನೂ ಓದಿ: ಹೀಟ್ ಸ್ಟ್ರೋಕ್ ನಿಂದ ಉಂಟಾಗುವ ತಲೆನೋವಿಗೆ ಇಲ್ಲಿದೆ ಮನೆಮದ್ದು !
ಯಾವ ಸಮಯದಲ್ಲಿ ಸೌತೆಕಾಯಿ ತಿನ್ನಬಾರದು!
1. ನೀವು ರಾತ್ರಿ ವೇಳೆ ಸೌತೆಕಾಯಿ ತಿಂದರೆ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ರಾತ್ರಿಯಲ್ಲಿ ಸೌತೆಕಾಯಿ ತಿನ್ನುವುದನ್ನು ನಿಷೇಧಿಸಲಾಗಿದೆ, ಏಕೆಂದರೆ ಇದು ನಿಮ್ಮ ಕರುಳಿನ ಚಲನೆಯ ಮೇಲೆ ಒತ್ತಡವನ್ನುಂಟುಮಾಡುವ ಸಾಧ್ಯತೆಯಿದೆ. ಇದರಿಂದ ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು ಮತ್ತು ಆಗಾಗ ಮೂತ್ರ ವಿಸರ್ಜನೆಯೂ ಆಗಬಹುದು. ಸೌತೆಕಾಯಿ ರಾತ್ರಿಯಲ್ಲಿ ದೇಹಕ್ಕೆ ತಂಪು ನೀಡುತ್ತದೆ ಮತ್ತು ಕಫ ದೋಷದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ನೀವು ರಾತ್ರಿಯಲ್ಲಿ ಸೌತೆಕಾಯಿ ಸೇವಿಸುವುದನ್ನು ತಪ್ಪಿಸಲು ಪ್ರಯತ್ನಿಸಬೇಕು.
2. ರಾತ್ರಿಯಲ್ಲಿ ಸೌತೆಕಾಯಿ ತಿನ್ನುವುದರಿಂದ ಕೆಮ್ಮಿನ ದೋಷದ ಸಮಸ್ಯೆ ಹೆಚ್ಚುತ್ತದೆ. ಸೌತೆಕಾಯಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದೇ ಇದಕ್ಕೆ ಕಾರಣ. ಅಷ್ಟೇ ಅಲ್ಲ ಇದರ ಪರಿಣಾಮ ಕೂಡ ತಂಪಾಗಿದೆ. ರಾತ್ರಿಯಲ್ಲಿ ಸೌತೆಕಾಯಿ ತಿನ್ನುವುದರಿಂದ ಶ್ವಾಸಕೋಶದಲ್ಲಿ ಲೋಳೆಯ ಶೇಖರಣೆಯ ಸಮಸ್ಯೆ ಉಂಟಾಗುತ್ತದೆ ಮತ್ತು ನಿಮಗೆ ಕೆಮ್ಮು ಬರಬಹುದು.
ಇದನ್ನೂ ಓದಿ: ಆರೋಗ್ಯದ ಗಣಿಯಾಗಿರುವ ಬೆಳ್ಳುಳ್ಳಿಯನ್ನು ಈ ಸಮಸ್ಯೆ ಇರುವವರು ಮಾತ್ರ ಸೇವಿಸಬಾರದು !
ಸೌತೆಕಾಯಿ ತಿನ್ನಲು ಸರಿಯಾದ ಸಮಯ
ಸೌತೆಕಾಯಿ ತಿನ್ನಲು ಸರಿಯಾದ ಸಮಯವೆಂದರೆ ಅದು ಹಗಲು. ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ತಿನ್ನುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ನೀವು ಇಡೀದಿನ ಸಕ್ರಿಯ ಮತ್ತು ತಾಜಾತನ ಹೊಂದಿರಬೇಕು. ಹಗಲಿನಲ್ಲಿ ಸೌತೆಕಾಯಿ ತಿನ್ನುವುದರಿಂದ ಚಯಾಪಚಯ ಹೆಚ್ಚಾಗುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳು ಸಹ ಗುಣವಾಗುತ್ತವೆ. ನೀವು ಆಗಾಗ ನೆಗಡಿ, ಕೆಮ್ಮು ಮತ್ತು ಶೀತದ ಸಮಸ್ಯೆ ಹೊಂದಿದ್ದರೆ ರಾತ್ರಿ ಈ ತರಕಾರಿ ತಿನ್ನುವುದನ್ನು ತಪ್ಪಿಸಿ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.