ಕಿಡ್ನಿ ಹಾನಿಯಾಗುವುದನ್ನು ತಪ್ಪಿಸಲು ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ

ಕಿಡ್ನಿಗೆ ಹಾನಿಕಾರಕ ಈ ಆಹಾರಗಳು:  ನಮ್ಮ ದೇಹದ ಬಹುಮುಖ್ಯ ಅಂಗ ಕಿಡ್ನಿ, ಹಾಗಾಗಿಯೇ ಕಿಡ್ನಿ ಆರೋಗ್ಯದ ಬಗ್ಗೆ ವಿಶೇಷ ಗಮನ ವಹಿಸುವುದು ತುಂಬಾ ಅಗತ್ಯ. ಕಿಡ್ನಿ ಸಮಸ್ಯೆಗೆ ನಮ್ಮ ಜೀವನಶೈಲಿ ಸೇರಿದಂತೆ ಹಲವಾರು ಕಾರಣಗಳಿರಬಹುದು. ಆದರೆ, ಇದರೊಂದಿಗೆ ನಾವು ಸೇವಿಸುವ ಆಹಾರವೂ ಬಹುಮುಖ್ಯ ಪಾತ್ರ ವಹಿಸುತ್ತದೆ.

Written by - Yashaswini V | Last Updated : Apr 20, 2022, 09:37 AM IST
  • ಮಧುಮೇಹ ಕಾಯಿಲೆಯು ಕಿಡ್ನಿಯನ್ನು ಹಾನಿಗೊಳಿಸುತ್ತದೆ.
  • ಮೊದಲಿಗೆ ಸಕ್ಕರೆ ಕಾಯಿಲೆಯು ಮೂತ್ರಪಿಂಡಗಳಿಗೆ ಹೇಗೆ ಹಾನಿ ಮಾಡುತ್ತದೆ ಎಂದು ತಿಳಿಯುವುದು ಅವಶ್ಯಕ.
  • ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣವನ್ನು ಮೀರಿದರೆ ಕ್ರಮೇಣ ಅದು ಮೂತ್ರಪಿಂಡದಲ್ಲಿರುವ ರಕ್ತನಾಳವನ್ನು ಹಾನಿ ಮಾಡುತ್ತದೆ.
ಕಿಡ್ನಿ ಹಾನಿಯಾಗುವುದನ್ನು ತಪ್ಪಿಸಲು ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ  title=
Bad Foods For Kidney

ಕಿಡ್ನಿ ಡ್ಯಾಮೇಜ್ ಆಗುವುದನ್ನು ತಡೆಯಲು ಈ ಆಹಾರಗಳಿಂದ ದೂರವಿರಿ: ಕಿಡ್ನಿ ಅಥವಾ ಮೂತ್ರಪಿಂಡವು ನಮ್ಮ ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದು. ಮೂತ್ರಪಿಂಡಗಳು ನಮ್ಮ ದೇಹದ ರಕ್ತವನ್ನು ಸ್ವಚ್ಛಗೊಳಿಸಲು ಹಾಗೂ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಧುಮೇಹ ಕಾಯಿಲೆಯು ಕಿಡ್ನಿಯನ್ನು ಹಾನಿಗೊಳಿಸುತ್ತದೆ. ಆದರೆ, ಈ ಬಗ್ಗೆ ಗಾಬರಿಗೊಳ್ಳುವ ಅಗತ್ಯವಿಲ್ಲ. ಮಧುಮೇಹ  ಅಥವಾ ಮೂತ್ರಪಿಂಡದ ಸಮಸ್ಯೆ ಇರುವವರು ತಮ್ಮ ಆಹಾರ-ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುವ ಮೂಲಕ ಇದರಿಂದ ಬಚಾವ್ ಆಗಬಹುದು.

ಮಧುಮೇಹವು ಕಿಡ್ನಿಗೆ ಹೇಗೆ ಹಾನಿ ಉಂಟುಮಾಡುತ್ತದೆ?
ಮೊದಲಿಗೆ ಸಕ್ಕರೆ ಕಾಯಿಲೆಯು ಮೂತ್ರಪಿಂಡಗಳಿಗೆ ಹೇಗೆ ಹಾನಿ ಮಾಡುತ್ತದೆ ಎಂದು ತಿಳಿಯುವುದು ಅವಶ್ಯಕ. ವಾಸ್ತವವಾಗಿ, ಮಧುಮೇಹಿಗಳಿಗೆ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದಾಗ ಅದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣವನ್ನು ಮೀರಿದರೆ ಕ್ರಮೇಣ ಅದು ಮೂತ್ರಪಿಂಡದಲ್ಲಿರುವ ರಕ್ತನಾಳವನ್ನು ಹಾನಿ ಮಾಡುತ್ತದೆ. ಈ ರಕ್ತನಾಳಗಳು ದುರ್ಬಲಗೊಂಡಾದ ಅದು ಸರಿಯಾಗಿ ರಕ್ತವನ್ನು ಶುದ್ಧೀಕರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಅಧಿಕ ರಕ್ತದೊತ್ತಡವೂ ಉಂಟಾಗಬಹುದು. ಇದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ- Kidney Food: ಆರೋಗ್ಯಕರ ಕಿಡ್ನಿಗಾಗಿ ಈ 5 ಆಹಾರಗಳನ್ನು ಮಿಸ್ ಮಾಡದೇ ನಿಮ್ಮ ಡಯಟ್ನಲ್ಲಿ ಸೇರಿಸಿ

ಕಿಡ್ನಿ ಆರೋಗ್ಯಕ್ಕಾಗಿ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣ ಬಹಳ ಮುಖ್ಯ:
ವೈದ್ಯರ ಪ್ರಕಾರ, ಮಧುಮೇಹಿಗಳಾಗಲಿ ಅಥವಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಾಗಲಿ ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳಲು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಹೇಳುತ್ತಾರೆ.  ಇದಕ್ಕಾಗಿ ಅವರು ತಮ್ಮ ಜೀವನಶೈಲಿಯನ್ನು ಸುಧಾರಿಸಿಕೊಲ್ಲುವುದು ಕೂಡ ಅತ್ಯಗತ್ಯವಾಗಿ.

ಕಿಡ್ನಿಯ ಆರೋಗ್ಯಕ್ಕಾಗಿ ಜೀವನ ಶೈಲಿಯಲ್ಲಿ ಈ ರೀತಿಯ ಬದಲಾವಣೆ ಬಹಳ ಮುಖ್ಯ:
* ಆಹಾರ-ಪಾನೀಯಗಳ ಬಗ್ಗೆ ವಿಶೇಷ ಕಾಳಜಿ
* ದಿನನಿತ್ಯ ವಾಕಿಂಗ್, ಯೋಗ ಅಥವಾ ವ್ಯಾಯಾಮ ರೂಢಿಸಿಕೊಳ್ಳುವುದು
* ಕೋಪ ನಿಯಂತ್ರಣ
* ಒತ್ತಡ ತೆಗೆದುಕೊಳ್ಳದಿರುವುದು ಅಥವಾ ಸಾಧ್ಯವಾದಷ್ಟು ಶಾಂತಿಯಿಂದ ಇರುವುದು.
* ಬಿಪಿ, ಶುಗರ್ ನಿಯಂತ್ರಣದಲ್ಲಿಟ್ಟುಕೊಳ್ಳುವುದು.
* ಉದರ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸದೆ ಇರುವುದು.
* ಇವೆಲ್ಲದರ ಜೊತೆಗೆ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳುವುದು ಕೂಡ ತುಂಬಾ ಅಗತ್ಯ.

ಇದನ್ನೂ ಓದಿ- Kidney Failure: ಮೂತ್ರಪಿಂಡದ ವೈಫಲ್ಯದ ಸಂಕೇತ ನೀಡುತ್ತೆ ಮೂತ್ರದ ಬಣ್ಣ

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ:
* ಕಿಡ್ನಿ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಉಪ್ಪನ್ನು ಹೆಚ್ಚಾಗಿ ಸೇವಿಸಬೇಡಿ.
* ಉಪ್ಪಿನಕಾಯಿ, ಡ್ರೈ ಫಿಶ್, ಕೂಲ್ ಡ್ರಿಂಕ್ಸ್ ಗಳಿಂದ ಅಂತರ ಕಾಪಾಡಿಕೊಳ್ಳಿ.
* ಪ್ರಿಸರ್ವೆಟಿವ್ ಆಹಾರ ಸೇವಿಸಬೇಡಿ.
* ರಂಜಕ ಅಧಿಕವಾಗಿರುವ ಹಾಲು, ಮೊಸರು ಮತ್ತು ಚೀಸ್‌ನಂತಹ ಆಹಾರಗಳಿಂದ ದೂರವಿಡಿ.
* ಆಲೂಗಡ್ಡೆ, ಟೊಮೆಟೊ, ಕಿವಿ, ಕಿತ್ತಳೆ, ಆವಕಾಡೊ ಸೇರಿದಂತೆ ಅಧಿಕ ಪೊಟ್ಯಾಸಿಯಮ್ ಹೊಂದಿರುವ ತರಕಾರಿಗಳನ್ನು ಸೇವಿಸಬೇಡಿ.
 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News