Cholesterol Symptoms: ದೇಹದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳದ ಕುರಿತು ಮಾಹಿತಿ ನೀಡುತ್ತವೆ ಈ ಅಂಗಗಳು

High Cholesterol Symptoms - ನಮ್ಮ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದ ಮೂರು ಅಂಗಗಳಲ್ಲಿ ಅತಿ ಹೆಚ್ಚು ಬದಲಾವಣೆಗಳು ಕಂಡುಬರುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಇವುಗಳಲ್ಲಿ ಕಣ್ಣು, ಕಿವಿ ಮತ್ತು ಚರ್ಮ ಶಾಮೀಲಾಗಿವೆ.

Written by - Nitin Tabib | Last Updated : Mar 28, 2022, 09:09 PM IST
  • ಕೊಲೆಸ್ಟ್ರಾಲ್ ಹೆಚ್ಚಾಗುವ ಲಕ್ಷಣಗಳು
  • ಶರೀರದಲ್ಲಿ ಈ ಬದಲಾವಣೆಗಳಾಗುತ್ತವೆ
  • ನಿಮಗೂ ತಿಳಿದಿರಲಿ, ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ
Cholesterol Symptoms: ದೇಹದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳದ ಕುರಿತು ಮಾಹಿತಿ ನೀಡುತ್ತವೆ ಈ ಅಂಗಗಳು title=
cholesterol Increase

ನವದೆಹಲಿ: High Cholesterol - ಕೆಟ್ಟ ಜೀವನಶೈಲಿಯಿಂದಾಗಿ ಅಧಿಕ ಕೊಲೆಸ್ಟ್ರಾಲ್ (Cholesterol) ಸಮಸ್ಯೆ ಎದುರಾಗುವುದು ಸಾಮಾನ್ಯ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅದನ್ನು ನಿಯಂತ್ರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ, ಆದರೆ ಕೊಲೆಸ್ಟ್ರಾಲ್ ಹೆಚ್ಚಳದಿಂದ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸುತ್ತವೆ ಎಂದು ಕೆಲವೇ ಜನರಿಗೆ ತಿಳಿದಿರುತ್ತದೆ. ಕೊಲೆಸ್ಟ್ರಾಲ್ ಹೆಚ್ಚಳದಿಂದ ದೇಹದ 3 ಅಂಗಗಲ್ಲಿ ಬದಲಾವಣೆಗಳು (Health Tips) ಕಂಡುಬರುತ್ತವೆ.

ಇದನ್ನೂ ಓದಿ-Health Tips: ನೀವೂ ಬೆಳಗ್ಗೆ ಎದ್ದಾಕ್ಷಣ ಚಹಾ ಸೇವಿಸುತ್ತೀರಾ? ಈ ಲೇಖನ ಮೊದಲು ಓದಿ

ಎರಡು ರೀತಿಯ ಕೊಲೆಸ್ಟ್ರಾಲ್ ಗಳಾಗಿರುತ್ತವೆ
ದೇಹದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ಕುರಿತು ಸಂಕೇತ ನೀಡುವ ಅಂಗಗಳಲ್ಲಿ ಚರ್ಮ ಕೂಡ ಒಂದು. ದೇಹದ ಪ್ರತಿ ಭಾಗಕ್ಕೂ ರಕ್ತ ತಲುಪುವಲ್ಲಿ ಕೊಲೆಸ್ಟ್ರಾಲ್ ಅಡ್ಡಿಪಡಿಸುತ್ತದೆ. ಇದರಲ್ಲಿ ಒಟ್ಟು ಎರಡು ವಿಧದ ಕೊಲೆಸ್ಟ್ರಾಲ್ ಗಳಿವೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ಉತ್ತಮ ಕೊಲೆಸ್ಟ್ರಾಲ್. ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಪ್ಲೇಕ್ ಸಂಗ್ರಹಿಕೆಗೆ ಕಾರಣವಾಗುತ್ತದೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ-Tulsi ಹಾಗೂ ಎಲೋವೆರಾ ಈ ರೀತಿ ಬಳಸಿದರೆ, Thyroid ನಿಮಗೆ ಸಮಸ್ಯೆಯಾಗಿ ಉಳಿಯದು

ಈ ಮೂರು ಅಂಗಗಳಿಂದ ಕೊಲೆಸ್ಟ್ರಾಲ್ ಮಾಹಿತಿ ಪಡೆದುಕೊಳ್ಳಿ
>> High Cholesterol Symptoms On Eyes - ಕೊಲೆಸ್ಟ್ರಾಲ್ ಹೆಚ್ಚಳದಿಂದ, ಕಣ್ಣುಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಕೊಲೆಸ್ಟ್ರಾಲ್ ಹೆಚ್ಚಾದಾಗ, ರೋಗಿಗಳು ಕಣ್ಣಿನ ಕಾರ್ನಿಯಾದ ಹೊರ ಭಾಗದ ಮೇಲೆ ಅಥವಾ ಕೆಳಗೆ ನೀಲಿ ಅಥವಾ ಬಿಳಿ ಗುಮ್ಮಟವನ್ನು ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಖಂಡಿತವಾಗಿಯೂ ನಿಮ್ಮ ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸಬೇಕು.

>> High Cholesterol Symptoms On Skin - ಇದಲ್ಲದೆ, ನಿಮ್ಮ ಚರ್ಮದ ಬಣ್ಣವು ಬದಲಾಗಲು ಪ್ರಾರಂಭಿಸಿದರೆ, ಸ್ವಲ್ಪ ಜಾಗರೂಕರಾಗಿರಿ ಏಕೆಂದರೆ ಇದು ಕೊಲೆಸ್ಟ್ರಾಲ್ ಹೆಚ್ಚಾಗಿರುವುದರ ಸಂಕೇತವಾಗಿದೆ.

>> High Cholesterol Symptoms On Hand - ನಿಮ್ಮ ಕೈಯಲ್ಲಿ ನೋವು ಇದ್ದರೆ, ನೀವು ಜಾಗರೂಕರಾಗಬೇಕು. ಆಗಾಗ್ಗೆ ಕೈ ನೋವು ಸರಿಯಾದ ಲಕ್ಷಣವಲ್ಲ ಎನ್ನಲಾಗಿದೆ.

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ನುರಿತ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News