Hemoglobin: ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ

ರಕ್ತದಲ್ಲಿ ಹಿಮೋಗ್ಲೋಬಿನ್‌ ಮಟ್ಟ ಕಡಿಮೆಯಾದ್ರೆ ಬಹುತೇಕರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದು ಕಡಿಮೆಯಾದರೆ ಯಾವ ಸಮಸ್ಯೆ ಬರುತ್ತದೆ ಅನ್ನೋದು ಗೊತ್ತಿರುವುದಿಲ್ಲ. ಹಿಮೋಗ್ಲೋಬಿನ್‌ ಎಂದರೆ ಕೆಂಪುರಕ್ತ ಕಣಗಳಲ್ಲಿರುವ ಒಂದು ಬಗೆಯ ಪ್ರೋಟೀನ್. ಇದು ದೇಹದಲ್ಲಿ ಆಮ್ಲಜನಕದ ಮೇಲುಸ್ತುವಾರಿ ನೋಡಿಕೊಳ್ಳುವ ವಿಭಾಗ. ಈ ವಿಭಾಗದಲ್ಲಿ ಎಡವಟ್ಟಾದರೆ ಉಳಿದೆಲ್ಲ ವಿಭಾಗದಲ್ಲೂ ಏರುಪೇರು ಉಂಟಾಗುತ್ತದೆ. ಹೀಗಾಗಿ ಇದರ ಮಟ್ಟದಲ್ಲಿ ತೀರಾ ಏರುಪೇರು ಆಗುವಂತಿಲ್ಲ. ಹಿಮೋಗ್ಲೋಬಿನ್‌ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಇದನ್ನು ಸರಿತೂಗಿಸುವಂಥ ಆಹಾರಗಳು ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ....

Written by - Puttaraj K Alur | Last Updated : Jun 10, 2024, 11:19 PM IST
  • ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ ರಕ್ತಹೀನತೆ ನಿವಾರಿಸಲು ನೆರವಾಗುತ್ತದೆ
  • ವಿಟಮಿನ್‌ B9 ಅಥವಾ ಫೋಲೇಟ್‌ ಹಿಮೋಗ್ಲೋಬಿನ್‌ ಉತ್ಪಾದನೆಯಲ್ಲಿ ಸಹಕಾರಿ
  • ದಿನಕ್ಕೆ 8 ತಾಸು ನಿದ್ದೆ ಮತ್ತು 8 ಗ್ಲಾಸ್‌ ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು
Hemoglobin: ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ title=
ಹಿಮೋಗ್ಲೋಬಿನ್‌

Hemoglobin: ರಕ್ತದಲ್ಲಿ ಹಿಮೋಗ್ಲೋಬಿನ್‌ ಮಟ್ಟ ಕಡಿಮೆಯಾದ್ರೆ ಬಹುತೇಕರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದು ಕಡಿಮೆಯಾದರೆ ಯಾವ ಸಮಸ್ಯೆ ಬರುತ್ತದೆ ಅನ್ನೋದು ಗೊತ್ತಿರುವುದಿಲ್ಲ. ಹಿಮೋಗ್ಲೋಬಿನ್‌ ಎಂದರೆ ಕೆಂಪುರಕ್ತ ಕಣಗಳಲ್ಲಿರುವ ಒಂದು ಬಗೆಯ ಪ್ರೋಟೀನ್. ಇದು ದೇಹದಲ್ಲಿ ಆಮ್ಲಜನಕದ ಮೇಲುಸ್ತುವಾರಿ ನೋಡಿಕೊಳ್ಳುವ ವಿಭಾಗ. ಈ ವಿಭಾಗದಲ್ಲಿ ಎಡವಟ್ಟಾದರೆ ಉಳಿದೆಲ್ಲ ವಿಭಾಗದಲ್ಲೂ ಏರುಪೇರು ಉಂಟಾಗುತ್ತದೆ. ಹೀಗಾಗಿ ಇದರ ಮಟ್ಟದಲ್ಲಿ ತೀರಾ ಏರುಪೇರು ಆಗುವಂತಿಲ್ಲ. ಹಿಮೋಗ್ಲೋಬಿನ್‌ ಕಡಿಮೆಯಾದರೆ ಅದನ್ನು ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲಾಗುತ್ತದೆ. ಇದನ್ನು ಸರಿತೂಗಿಸುವಂಥ ಆಹಾರಗಳು ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ....

ಕಬ್ಬಿಣಯುಕ್ತ ಆಹಾರಗಳು: ಆಹಾರದಲ್ಲಿ ಕಬ್ಬಿಣದಂಶ ಹೆಚ್ಚಿದ್ದರೆ ರಕ್ತಹೀನತೆ ನಿವಾರಿಸಲು ನೆರವಾಗುತ್ತದೆ. ಮೀನು, ಕೆಂಪು ಮಾಂಸ, ಚಿಕನ್‌, ಕಾಳುಗಳು, ಬೇಳೆ ಕಾಳುಗಳು, ತೋಫು, ಹಸಿರು ಸೊಪ್ಪು ಮತ್ತು ತರಕಾರಿಗಳು, ಬ್ರೊಕೊಲಿ, ಒಣದ್ರಾಕ್ಷಿ, ಎಪ್ರಿಕಾಟ್‌.

ಇದನ್ನೂ ಓದಿ: ಈ ಮರದ ಒಂದು ಎಲೆಯನ್ನು ಬೆಳಗೆದ್ದು ಜಗಿಯಿರಿ.. ಇಡೀ ದಿನ ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುವುದು!

ವಿಟಮಿನ್‌ ಸಿ: ಕಬ್ಬಿಣಯುಕ್ತ ಆಹಾರವನ್ನು ಸರಿಯಾಗಿ ಹೀರಲ್ಪಡುವುದಕ್ಕೆ ವಿಟಮಿನ್‌ ʼCʼ ಅಂಶ ಅಗತ್ಯ. ಹೀಗಾಗಿ ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ನಿಂಬೆ, ಬೆರ್ರಿಗಳು, ಕಿವಿ ಹಣ್ಣು, ಕ್ಯಾಪ್ಸಿಕಂ, ಟೊಮೇಟೊ ಇತ್ಯಾದಿಗಳು ದೈನಂದಿನ ಆಹಾರದಲ್ಲಿಬೇಕು.

ಫೋಲೇಟ್‌: ಹಿಮೋಗ್ಲೋಬಿನ್‌ ಉತ್ಪಾದನೆಯಲ್ಲಿ ವಿಟಮಿನ್‌ ಬಿ೯ ಅಥವಾ ಫೋಲೇಟ್‌ ಪ್ರಧಾನವಾಗಿ ಕೆಲಸ ಮಾಡುತ್ತದೆ. ಪಾಲಕ್‌ ಸೊಪ್ಪು, ಬ್ರೊಕೊಲಿ, ಅವಕಾಡೊ ಅಥವಾ ಬೆಣ್ಣೆ ಹಣ್ಣು, ಕಿತ್ತಳೆ ಹಣ್ಣು ಅಗತ್ಯವಾಗಿ ಬೇಕು.

ಬೀಟ್‌ರೂಟ್‌: ಈ ತರಕಾರಿಯಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ. ಇದರಲ್ಲಿ ಕಬ್ಬಿಣದಂಶ, ಫಾಲಿಕ್‌ ಆಮ್ಲ ಮತ್ತು ಪೊಟಾಶಿಯಂ ಒಟ್ಟಿಗೆ ದೊರೆಯುತ್ತದೆ. ಇವೆಲ್ಲವೂ ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಹೀಗಾಗಿ ನಿಯಮಿತವಾಗಿ ಬೀಟ್‌ರೂಟ್‌ ಸೇವಿಸಬೇಕು.

ದಾಳಿಂಬೆ: ಈ ಹಣ್ಣಿನಲ್ಲಿ ಕಬ್ಬಿಣ ಮತ್ತು ವಿಟಮಿನ್‌ ʼCʼ ಇವೆ. ಈ ಮೂಲಕ ಹಿಮೋಗ್ಲೋಬಿನ್ ಹೆಚ್ಚು ಉತ್ಪಾದನೆ ಆಗುವುದಕ್ಕೆ ನೆರವಾಗುತ್ತದೆ. ದಾಳಿಂಬೆ ರಸ ಕುಡಿಯುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

ನೀರು & ನಿದ್ದೆ: ದಿನಕ್ಕೆ 8 ತಾಸು ನಿದ್ದೆ ಮತ್ತು 8 ಗ್ಲಾಸ್‌ ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದಿದ್ದರೆ ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಕಾಗುತ್ತದೆ. ಇದು ಹಿಮೋಗ್ಲೋಬಿನ್‌ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಕೊರತೆಯಾದರೆ ರಕ್ತದ ಸಾಂದ್ರತೆ ಮತ್ತು ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.  .

ಕೆಫೇನ್‌ಯುಕ್ತ ಪೇಯಗಳು: ಕೆಲವು ಆಹಾರಗಳು ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಕಾಫಿ, ಚಹಾದಂತಹ ಕೆಫೇನ್‌ಯುಕ್ತ ಪೇಯಗಳು, ಕ್ಯಾಲ್ಶಿಯಂ ಸಾಂದ್ರವಾಗಿರುವ ಆಹಾರಗಳು, ನಾರುಭರಿತ ತಿನಿಸುಗಳನ್ನು ಊಟದ ಸಮಯದಲ್ಲಿ ದೂರ ಮಾಡಿ. ಇದರಿಂದ ಕಬ್ಬಿಣದಂಶ ಚೆನ್ನಾಗಿ ಹೀರಲ್ಪಡುತ್ತದೆ.

ಇದನ್ನೂ ಓದಿ: Diabetes Symptoms In Men: ಪುರುಷರ ಕಾಲು, ಪಾದಗಳಲ್ಲಿ ಕಂಡುಬರುವ ಈ ಲಕ್ಷಣಗಳು ಡಯಾಬಿಟಿಸ್ ಸಂಕೇತವೂ ಆಗಿರಬಹುದು!

ಆದಷ್ಟು ದೂರವಿರಿ: ಆಲ್ಕೋಹಾಲ್‌ ಮತ್ತು ಜಡ ಜೀವನ ಹಿಮೋಗ್ಲೋಬಿನ್‌ ಶತ್ರುಗಳು. ಆಲ್ಕೋಹಾಲ್‌ ಸೇವನೆಯಿಂದ ಕಬ್ಬಿಣದಂಶ ದೇಹ ಹೀರಿಕೊಳ್ಳುವುದಕ್ಕೆ ಅಡೆತಡೆ ಉಂಟಾಗುತ್ತದೆ. ಜಡ ಜೀವನವು ರಕ್ತ ಪರಿಚಲನೆಯ ಶತ್ರು. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಕೆಂಪು ರಕ್ತಕಣಗಳ ಉತ್ಪಾದನೆ ಚೆನ್ನಾಗಿ ಆಗಿ, ರಕ್ತದ ಪರಿಚಲನೆಯೂ ಸರಾಗವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News