ಈ ಕಾರಣಗಳಿಗಾಗಿ ಬೇಸಿಗೆಯಲ್ಲಿ ತಿನ್ನಲೇ ಬೇಕು ದಿನಕ್ಕೊಂದು ಕಿತ್ತಳೆ ಹಣ್ಣು

ಕಿತ್ತಳೆ  ಹಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಇರುತ್ತದೆ.  ಹಾಗಾಗಿ ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಕಿತ್ತಳೆಯನ್ನು  ಸೇವಿಸುವುದರಿಂದ ದೇಹದಲ್ಲಿ ನೀರಿನ ಕೊರತೆ ಕಂಡು ಬರುವುದಿಲ್ಲ. 

Written by - Ranjitha R K | Last Updated : Mar 27, 2021, 09:33 AM IST
  • ಕಿತ್ತಳೆ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ ಇದೆ
  • ಕಿತ್ತಳೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಈ ಕಾರಣಗಳಿಗಾಗಿ ಬೇಸಿಗೆಯಲ್ಲಿ ತಿನ್ನಲೇ ಬೇಕು ದಿನಕ್ಕೊಂದು ಕಿತ್ತಳೆ ಹಣ್ಣು   title=
ಕಿತ್ತಳೆ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ ಇದೆ (file photo)

ನವದೆಹಲಿ :  ಬೇಸಿಗೆ (Summer) ಆರಂಭವಾಗಿದೆ.  ಬೇಸಿಗೆಯಲ್ಲಿ ಆರೋಗ್ಯದ (Health) ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ. ಬೇಸಿಗೆಯಲ್ಲಿ, ದೇಹದಲ್ಲಿ  ನೀರಿನ ಅಂಶ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ದೇಹದಲ್ಲಿ ಎನರ್ಜಿ ಉಳಿಯಬೇಕಾದರೆ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು (Fruits) ಸೇವಿಸಬೇಕು. ಅದರಲ್ಲೂ ಬೇಸಿಗೆಯಲ್ಲಿ ಕಿತ್ತಳೆ ಹಣ್ಣು (Orange) ತಿಂದರೆ ಬಹಳಷ್ಟು ಪ್ರಯೋಜನಗಳಿವೆ.  ಕಿತ್ತಳೆಯಲ್ಲಿ ಅನೇಕ ವಿಟಮಿನ್  ಗಳಿವೆ. ಇದು ದೇಹದಲ್ಲಿ ಎನರ್ಜಿಯನ್ನು (energy) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

ದೇಹವನ್ನು ಹೈಡ್ರೇಟ್ ಮಾಡುತ್ತದೆ : 
ಕಿತ್ತಳೆ  ಹಣ್ಣಿನಲ್ಲಿ (Orange) ಹೇರಳ ಪ್ರಮಾಣದಲ್ಲಿ ವಿಟಮಿನ್ ಇರುತ್ತದೆ.  ಹಾಗಾಗಿ ಇದು ದೇಹವನ್ನು ಹೈಡ್ರೇಟ್ (hydrate) ಮಾಡುತ್ತದೆ. ಕಿತ್ತಳೆಯನ್ನು  ಸೇವಿಸುವುದರಿಂದ ದೇಹದಲ್ಲಿ ನೀರಿನ ಕೊರತೆ ಕಂಡು ಬರುವುದಿಲ್ಲ. ಕಿತ್ತಳೆಯಲ್ಲಿ ಇರುವ ವಿಟಮಿನ್  ಮೂಳೆಗಳನ್ನು ಸದೃಢಗೊಳಿಸುತ್ತದೆ.  ಕಿತ್ತಳೆ ಹಣ್ಣು ದೇಹದಲ್ಲಿ ಡಿಹೈಡ್ರೆಶೇನ್ (dehydration) ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತದೆ.  ಹಾಗಾಗಿ ಬೇಸಿಗೆಯಲ್ಲಿ ದಿನಕ್ಕೆ ಕನಿಷ್ಠ ಒಂದು ಕಿತ್ತಳೆ ತಿನ್ನಲೇ ಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. 

ಇದನ್ನೂ ಓದಿ : Tips For Better Sleep During Night: ದಿನವಿಡೀ ಲವಲವಿಕೆಯಿಂದ ಇರಲು ಪುರುಷರಿಗೆ ಇಲ್ಲಿದೆ ಮನೆಮದ್ದು

 ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ಕಿತ್ತಳೆ ಸೇವನೆಯಿಂದ ದೇಹದಲ್ಲಿ ನೀರಿನ (water)  ಕೊರತೆ ಉಂಟಾಗುವುದಿಲ್ಲ. ಕಿತ್ತಳೆ ಹಣ್ಣಿನಲ್ಲಿ ಕಂಡುಬರುವ ವಿಟಮಿನ್ ಗಳಿಂದ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ  ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ. ಕಿತ್ತಳೆ ಸೇವಿಸುವುದರಿಂದ ಬೇಸಿಗೆಯಲ್ಲಿ ಎದುರಾಗುವ ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.  

ಕಣ್ಣಿನ ಆರೋಗ್ಯಕ್ಕೂ ಕಿತ್ತಳೆ ತಿನ್ನಿ : 
ಕಿತ್ತಳೆ ಕಣ್ಣಿನ (Eye) ಆರೋಗ್ಯಕ್ಕೂ ಬಹಳ ಮುಖ್ಯ. ಕಿತ್ತಳೆಯಲ್ಲಿ ಕಂಡು ಬರುವ ಹೇರಳ ಪ್ರಮಾಣದ ವಿಟಮಿನ್ ಗಳು ಕಣ್ಣ ದೃಷ್ಟಿಯನ್ನು ಚುರುಕಾಗಿಸಲು ಸಹಾಯ ಮಾಡುತ್ತದೆ. ನಿರಂತರವಾಗಿ ಲ್ಯಾಪ್‌ಟಾಪ್ (Laptop) ಮತ್ತು ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುವವವರು ದಿನಕ್ಕೆ ಒಂದು ಕಿತ್ತಳೆ ತಿನ್ನಲೇಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. 

ಇದನ್ನೂ ಓದಿ : Health Tips- ಖಾಲಿ ಹೊಟ್ಟೆ ಚಹಾ ಸೇವನೆಯಿಂದಾಗುವ ಹಾನಿಗಳು ನಿಮಗೆ ತಿಳಿದಿವೆಯೇ?

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ : 
ಪ್ರತಿದಿನ ಕಿತ್ತಳೆ ತಿಂದರೆ ದೇಹದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ. ಕಿತ್ತಳೆಯಲ್ಲಿರುವ ಕೆಲ ಅಂಶಗಳು ದೇಹದಲ್ಲಿನ ಕೊಲೆಸ್ಟ್ರಾಲ್ (cholesterol) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯ ಸಂಬಂಧಿ ರೋಗಗಳನ್ನೂ ಕೂಡಾ ದೂರವಿಡುತ್ತದೆ. 

ರಕ್ತದೊತ್ತಡ ಕಡಿಮೆ ಮಾಡುತ್ತದೆ: 
ಕಿತ್ತಳೆ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ ಇದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.  ಕಿತ್ತಳೆ ಸೇವಿಸುವುದರಿಂದ ರಕ್ತದೊತ್ತಡದ ಕಾಯಿಲೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡದ (Blood pressure) ಸಮಸ್ಯೆಯಿಂದ ಬಳಲುವವರು ದಿನಕ್ಕೊಂದು ಕಿತ್ತಳೆ ತಿಂದರೆ ಸಮಸ್ಯೆ ನಿವಾರಣೆಯಾಗುತ್ತದೆ. 

ಇದನ್ನೂ ಓದಿ : ಬೇಸಿಗೆಯಲ್ಲಿ ಕಬ್ಬಿನ ರಸ..! ಆರೋಗ್ಯಕ್ಕಾಗುವ 5 ಮಹಾಪ್ರಯೋಜನ ಏನು .?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News