Gym and fitness tips : ದೈಹಿಕ ಆರೋಗ್ಯದ ವಿಷಯಕ್ಕೆ ಬಂದಾಗ ಹೆಚ್ಚಾಗಿ ಜನರು ಜಿಮ್ನಲ್ಲಿ ವರ್ಕೌಟ್ ಮಾಡಲು ಬಯಸುತ್ತಾರೆ. ಏಕೆಂದರೆ, ಜಿಮ್ನಲ್ಲಿ ಅಂತಹ ವಾತಾವರಣ ಇರುತ್ತದೆ. ಅಲ್ಲದೆ, ನಿಮಗೆ ಬೇಕಾದ ಎಲ್ಲಾ ವಸ್ತುಗಳು ಲಭ್ಯವಿರುತ್ತದೆ. ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಜಿಮ್ ಬಹಳ ಮುಖ್ಯ. ಈ ಪ್ರಾಮುಖ್ಯತೆಯಿಂದಾಗಿ, ಜಿಮ್ ಅನ್ನು ಆಯ್ಕೆಮಾಡುವ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ, ಜಿಮ್ ಎಂದರೆ ಕೇವಲ ವಾತಾವರಣ ಮತ್ತು ಯಂತ್ರಗಳಿಗೆ ಸಂಬಂಧಿಸಿದ್ದಲ್ಲ.. ವ್ಯಾಯಾಮ ಶಾಲೆಯನ್ನು ಆಯ್ಕೆಮಾಡುವಾಗ ಈ ಕೇಳಗೆ ನೀಡಿರು ಅಂಶಗಳು ಇವೆಯೇ ಎಂದು ಗಮನಿಸಿ.
1- ಕಾರಣ : ಜಿಮ್ ಅನ್ನು ಆಯ್ಕೆಮಾಡುವ ಮೊದಲು, ನೀವು ಜಿಮ್ಗೆ ಏಕೆ ಹೋಗುತ್ತೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ. ಕೆಲವರು ಸ್ನಾಯುಗಳ ಬೆಳವಣಿಗೆಗಾಗಿ ಜಿಮ್ಗೆ ಹೋಗುತ್ತಾರೆ ಮತ್ತು ಕೆಲವರು ತೂಕ ಇಳಿಸಿಕೊಳ್ಳಲು ಜಿಮ್ಗೆ ಹೋಗುತ್ತಾರೆ. ಕೆಲವರು ವೃತ್ತಿಪರ ಬಾಡಿ ಬಿಲ್ಡಿಂಗ್ಗಾಗಿ ಜಿಮ್ಗೆ ಹೋಗುತ್ತಾರೆ. ಆದ್ರೆ, ಈ ಮೂರು ಗುರಿಗಳನ್ನು ತಲುಪುವ ಮಾರ್ಗ ವಿಭಿನ್ನವಾಗಿರುತ್ತದೆ, ವಿಭಿನ್ನ ಯಂತ್ರಗಳು ಬೇಕಾಗುತ್ತವೆ. ನೀವು ಆಯ್ಕೆಮಾಡುವ ಜಿಮ್ ನಿಮ್ಮ ಅಗತ್ಯಗಳಿಗೆ ಸೂಕ್ತವಾಗಿದೆಯೇ ಎಂದು ಮೊದಲು ಪರಿಶೀಲಿಸಿ.
ಇದನ್ನೂ ಓದಿ:High Cholesterol ಅನ್ನು ಒಂದೇ ವಾರದಲ್ಲಿ ನಿಯಂತ್ರಿಸುತ್ತೆ ಈ ಆಹಾರಗಳು
2- ದೂರ : ಇದು ಅರ್ಥಹೀನ ಎಂದು ನೀವು ಭಾವಿಸಬಹುದು, ಆದರೆ ಮನೆಯಿಂದ ಜಿಮ್ ತುಂಬಾ ದೂರದಲ್ಲಿದ್ದರೆ, ನೀವು ಸೋಮಾರಿಯಾಗಿರುತ್ತೀರಿ ಅಲ್ಲದೆ, ನಾಳೆ ಹೋದ್ರಾಯ್ತು ಬಿಡು, ಅಷ್ಟು ದೂರ ಹೋಗಿ ಬರಲು ಸಮಯವಿಲ್ಲ, ಇನ್ನೊಂದು ದಿನ ಹೋಗುವ ಎನ್ನುವ ನಕಾರಾತ್ಮಕ ಯೋಚನೆಗಳು ನಿಮ್ಮ ಮೈಂಡ್ಗೆ ಬರುತ್ತವೆ.
3- ವಾರ್ಮ್ ಅಪ್ಗೆ ಹೆಚ್ಚಿನ ಸ್ಥಳ : ವ್ಯಾಯಾಮದ ಮೊದಲು ವಾರ್ಮ್ಅಪ್ ಮಾಡುವುದು ಬಹಳ ಮುಖ್ಯ. ಅದು ವ್ಯಾಯಾಮಕ್ಕೆ ಸ್ನಾಯುಗಳನ್ನು ಸಿದ್ಧಪಡಿಸುತ್ತದೆ ಅಲ್ಲದೆ, ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ವಾರ್ಮ್ ಅಪ್ ಮಾಡಲು ಹೆಚ್ಚಿನ ಸ್ಥಳ ಇದೆಯೇ ಎಂದು ಪರಿಶೀಲಿಸಿ.
ಇದನ್ನೂ ಓದಿ: ಗ್ರೀನ್ ಟೀ ಸೇವನೆ ವೇಳೆ ಮಾಡುವ ಈ ತಪ್ಪು ಅಡ್ಡ ಪರಿಣಾಮಗಳನ್ನು ಬೀರಬಹುದು
4- ಕ್ರಮೇಣವಾಗಿ ವ್ಯಾಯಾಮವನ್ನು ಹೆಚ್ಚಿಸಿ : ವ್ಯಾಯಾಮದ ವೇಗ ಮತ್ತು ತೀವ್ರತೆಯನ್ನು ಕ್ರಮೇಣವಾಗಿ ಹೆಚ್ಚಿಸಿ. ಒಂದೇ ದಿನಕ್ಕೆ ಅತಿಯಾಗಿ ಏಕಾಏಕಿ ಶ್ರಮದಾಯಕ ವ್ಯಾಯಾಮ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ದೇಹದ ಒಂದು ಭಾಗದಲ್ಲಿ ಅತಿಯಾದ ನೋವು ಮತ್ತು ಸ್ನಾಯು ಸೆಳೆತ ಕಂಡುಬರುತ್ತದೆ.
5- ನೀರು ಕುಡಿಯಿರಿ : ವ್ಯಾಯಾಮದ ಸಮಯದಲ್ಲಿ ಬೆವರುವುದು ಒಳ್ಳೆಯದು. ಆದರೆ ದೇಹವು ನಿರ್ಜಲೀಕರಣವಾಗದಂತೆ ಎಚ್ಚರವಹಿಸಿ. ಆಗಾಗ ಸಾಕಷ್ಟು ನೀರು ಕುಡಿಯುವುದು ಮುಖ್ಯ. ನಿರ್ಜಲೀಕರಣ ತಲೆತಿರುಗುವಿಕೆಗೆ ಕಾರಣವಾಗಬಹುದು ಎಚ್ಚರಿಕೆ.
ಇದನ್ನೂ ಓದಿ: ಅಧಿಕ ತಾಪಮಾನದಿಂದ ನಿಮ್ಮನ್ನು ಹೀಗೆ ರಕ್ಷಿಸಿಕೊಳ್ಳಿರಿ...!
6- ಯಂತ್ರೋಪಕರಣಗಳ ಬಳಕೆ : ನೀವು ಜಿಮ್ನಲ್ಲಿ ಯಾವುದೇ ಯಂತ್ರವನ್ನು ಬಳಸುವ ಮೊದಲು ತರಬೇತುದಾರರಿಂದ ಮೊದಲು ಯಂತ್ರದ ಬಳಕೆಯ ಕುರಿತು ತಿಳಿಯಿರಿ. ಇಲ್ಲದಿದ್ದರೆ ನಿಮ್ಮ ದೇಹಕ್ಕೆ ಹಾನಿ ಉಂಟಾಗುತ್ತದೆ. ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯಂತ್ರಗಳನ್ನು ಹೆಚ್ಚಾಗಿ ಹೊಟ್ಟೆ, ಸೊಂಟ, ಬೆನ್ನು ಮತ್ತು ತೋಳುಗಳನ್ನು ಟೋನ್ ಮಾಡಲು ಬಳಸಲಾಗುತ್ತದೆ, ಆದ್ದರಿಂದ ಮೊದಲು ತಿಳಿದು ನಂತರ ಬಳಸಿ.
7- ಬಟ್ಟೆ ಮತ್ತು ಬೂಟುಗಳು : ವ್ಯಾಯಾಮದ ಸಮಯದಲ್ಲಿ ಕ್ರೀಡಾ ಉಡುಗೆ ಮತ್ತು ಬೂಟುಗಳನ್ನು ಧರಿಸುವುದು ಬಹಳ ಮುಖ್ಯ. ವ್ಯಾಯಾಮದ ಸಮಯದಲ್ಲಿ ಬೂಟುಗಳು ಸರಿಯಾಗಿ ಹೊಂದಿಕೊಳ್ಳದಿದ್ದರೆ, ಪಾದದ ಸ್ನಾಯುಗಳು ಗಾಯಗೊಳ್ಳಬಹುದು ಎಚ್ಚರಿಕೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ