Costliest Spice Saffron: ಸ್ವಾದ ಇಲ್ಲದೆ ಆಹಾರ ಸೇವಿಸುವುದರಲ್ಲಿ ಯಾವುದೇ ಮಜವಿಲ್ಲ. ಹೀಗಾಗಿ ಉತ್ತಮ ಸ್ವಾದಕ್ಕಾಗಿ ನಾವು ಆಹಾರದಲ್ಲಿ ಬಳಸುವ ಸಾಂಬಾರ ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಉತ್ತಮ ಗುಣಮಟ್ಟದ ಮಸಾಲೆಗಳು ಆಹಾರಕ್ಕೆ ಉತ್ತಮ ರುಚಿಯನ್ನು ನೀಡುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಂಬಾರ ಪದಾರ್ಥಗಳ ಬೇಡಿಕೆ ಹೆಚ್ಚಾಗಿರುವುದರಿಂದ ಅವುಗಳ ಬೆಲೆಯಲ್ಲಿಯೂ ಕೂಡ ಭಾರೀ ಏರಿಕೆ ಕಂಡು ಬರುತ್ತಿದೆ, ಚಿನ್ನ ಬೆಳ್ಳಿಗಿಂತಲೂ ದುಬಾರಿಯಾಗಿರುವ ಅಂತಹದೊಂದು ಸಾಂಬಾರ ಪದಾರ್ಥದ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇದನ್ನು 'ಕೆಂಪು ಚಿನ್ನ' ಎಂದೂ ಕೂಡ ಕರೆಯುತ್ತಾರೆ ಎಂಬ ಅಂಶದ ಮೇಲೆ ನೀವು ಅದರ ಮೌಲ್ಯವನ್ನು ಊಹಿಸಬಹುದು. ಈ ಸಸ್ಯದ ಸುಮಾರು 1.5 ಲಕ್ಷ ಹೂವುಗಳು 1 ಕಿ.ಗ್ರಾಂ ಸಾಂಬಾರ ಪದಾರ್ಥ ತಯಾರಿಸಲು ಬೇಕಾಗುತ್ತವೆ. ಏಕೆಂದರೆ ಇದರ ಒಂದು ಹೂವಿನಲ್ಲಿ ಈ ಸಾಂಬಾರ ಪದಾರ್ಥದ ಮೂರು ದಳಗಳು ಮಾತ್ರ ಇರುತ್ತವೆ.
ಇದನ್ನೂ ಓದಿ-Hybrid Surya Grahan 2023: ಈ ದಿನ ಗೋಚರಿಸಲಿದೆ ಸೂರ್ಯ ಗ್ರಹಣ, 100 ವರ್ಷಗಳಲ್ಲಿ ಇಂತಹ ಗ್ರಹಣ ಇದೆ ಮೊದಲು
'ಕೆಂಪು ಚಿನ್ನ' ಎಂದರೇನು?
ಕೆಂಪು ಚಿನ್ನವನ್ನು ಸಾಮಾನ್ಯವಾಗಿ ಕೇಸರಿ ಎಂದೂ ಕೂಡ ಕರೆಯುತ್ತಾರೆ. ಒಂದು ಕೆಜಿ ಖರೀದಿಸಲು ನೀವು ಸುಮಾರು 2.5 ಲಕ್ಷದಿಂದ 3 ಲಕ್ಷ ರೂ. ಖರ್ಚು ಮಾಡಬೇಕು ಇದರ ಬಳಕೆಯು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ವಿಶ್ವದ ಅತ್ಯಂತ ದುಬಾರಿ ಮಸಾಲೆ ಎಂದರೆ ಅದು ಕೇಸರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಜಮ್ಮು ಮತ್ತು ಕಾಶ್ಮೀರದ ಕೆಲ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಕೇಸರಿ ಗಿಡವೂ ತುಂಬಾ ದುಬಾರಿಯಾಗಿದ್ದು, ಕೇಸರಿಯಂತೆ ಇದರ ಹೂವುಗಳೂ ಕೂಡ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತವೆ.
ಇದನ್ನೂ ಓದಿ-Sleeping Style: ವ್ಯಕ್ತಿಯ ಮಲಗುವ ಶೈಲಿಯಿಂದ ಆತನ ಸ್ವಭಾವ-ಭವಿಷ್ಯ ಈ ರೀತಿ ತಿಳಿದುಕೊಳ್ಳಿ
ಕೇಸರಿ ಪ್ರಯೋಜನಗಳು
ಕೇಸರಿಯನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಔಷಧೀಯ ರೂಪದಲ್ಲಿ ಬಳಸಲಾಗುತ್ತದೆ. ಇದನ್ನು ಬ್ಯೂಟಿ ಕ್ರೀಮ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಗರ್ಭಿಣಿಯರಿಗೆ ಹಾಲಿನೊಂದಿಗೆ ಕೇಸರಿ ಬೆರೆಸಿ ಕುಡಿಸುವುದರಿಂದ ಹುಟ್ಟುವ ಮಗುವಿಗೆ ಲಾಭವಾಗುತ್ತದೆ. ಇದರ ಬಳಕೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ. ಇದು ನಿಮಗೆ ಶೀತ ಮತ್ತು ಕೀಲು ನೋವಿನಿಂದ ಪರಿಹಾರವನ್ನು ಸಹ ಒದಗಿಸುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.