Garlic Eating Benefits: ನಿತ್ಯ ಬೆಳಗ್ಗೆ ಬೆಳ್ಳುಳ್ಳಿ ಸೇವಿಸುವುದನ್ನು ಮರೆಯಬೇಡಿ, ಯಾಕೆ ಅಂತೀರಾ? ಈ ಲೇಖನ ಓದಿ

Garlic Benefits - ಬೆಳ್ಳುಳ್ಳಿಯನ್ನು (Garlic) ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿಯ ವಾಸನೆಯನ್ನು ಜನರು ತುಂಬಾ ಇಷ್ಟಪಡುತ್ತಾರೆ, ಇದೇ ಕಾರಣಕ್ಕೆ ಅದನ್ನು ಬಡವರ ಮನೆ ಕಸ್ತೂರಿ ಎಂದೂ ಕೂಡ ಕರೆಯಲಾಗುತ್ತದೆ. 

Written by - Nitin Tabib | Last Updated : Mar 18, 2022, 07:42 PM IST
  • ನಿತ್ಯ ಬೆಳ್ಳುಳ್ಳಿ ಸೇವಿಸಲು ಮರೆಯಬೇಡಿ
  • ಆರೋಗ್ಯಕ್ಕೆ ಈ ಲಾಭಗಳಾಗಲಿವೆ
  • ಕೊಲೆಸ್ಟ್ರಾಲ್ ಕಮ್ಮಿಯಾಗಲಿದೆ
Garlic Eating Benefits: ನಿತ್ಯ ಬೆಳಗ್ಗೆ ಬೆಳ್ಳುಳ್ಳಿ ಸೇವಿಸುವುದನ್ನು ಮರೆಯಬೇಡಿ, ಯಾಕೆ ಅಂತೀರಾ? ಈ ಲೇಖನ ಓದಿ title=
Garlic Eating Benefits (File Photo)

ನವದೆಹಲಿ: Garlic Benefits - ಬೆಳ್ಳುಳ್ಳಿಯನ್ನು (Garlic) ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿಯ ವಾಸನೆಯನ್ನು ಜನರು ತುಂಬಾ ಇಷ್ಟಪಡುತ್ತಾರೆ, ಇದೇ ಕಾರಣಕ್ಕೆ ಅದನ್ನು ಬಡವರ ಮನೆ ಕಸ್ತೂರಿ ಎಂದೂ ಕೂಡ ಕರೆಯಲಾಗುತ್ತದೆ. ಇದರಿಂದಾಗಿ ಅನೇಕ ಮನೆಗಳಲ್ಲಿ ಬೆಳ್ಳುಳ್ಳಿಯನ್ನು ಅಡುಗೆ ಮಾಡುವಾಗ ಬಳಸಲಾಗುತ್ತದೆ. ಆದರೆ, ಬೆಳ್ಳುಳ್ಳಿ  ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವ ಕೆಲಸ ಮಾತ್ರ ಮಾಡುವುದಿಲ್ಲ. ಇದು ಆರೋಗ್ಯಕ್ಕೆ ಒಂದು ರೀತಿಯ ಸಂಜೀವನಿ ಕೂಡ ಆಗಿದೆ. ಹಾಗಾದರೆ ಬನ್ನಿ ಬೆಳ್ಳುಳ್ಳಿ ಸೇವನೆಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ, 

ಬೆಳ್ಳುಳ್ಳಿ ತಿನ್ನುವುದರಿಂದ 5 ಪ್ರಯೋಜನಗಳು
1. ವಿವಾಹಿತ ಪುರುಷರಿಗಾಗುವ ಲಾಭಗಳು

ಲೈಂಗಿಕ ಜೀವನವನ್ನು (Married Life) ಸುಧಾರಿಸಲು ಬೆಳ್ಳುಳ್ಳಿ ಪ್ರಯೋಜನಕಾರಿಯಾಗಿದೆ. ಬೆಳ್ಳುಳ್ಳಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದುಬಂದಿದೆ. ಇದೇ ವೇಳೆ, ಬೆಳ್ಳುಳ್ಳಿ ದೇಹದಲ್ಲಿನ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಿವೆ, ಇದರಿಂದಾಗಿ ರಕ್ತನಾಳಗಳು ತೆರೆದುಕೊಂಡು ರಕ್ತಪರಿಚಲನೆ ಸುಲಲಿತಗೊಳ್ಳುತ್ತದೆ. 

2. ಶೀತಗಳಲ್ಲಿ ಪರಿಣಾಮಕಾರಿ
ಶೀತ ನಿವಾರಣೆಗೆ ಬೆಳ್ಳುಳ್ಳಿ ಒಂದು ಪರಿಣಾಮಕಾರಿ ಔಷಧಿಯಾಗಿದೆ. 12 ವಾರಗಳ ಸಂಶೋಧನೆಯಲ್ಲಿ, ಬೆಳ್ಳುಳ್ಳಿ ಶೀತ ಮತ್ತು ಜ್ವರದ ಸಮಸ್ಯೆಯನ್ನು ಶೇಕಡಾ 63 ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಆದರೆ, ಈ ಕುರಿತು ಇನ್ನೂ ಹಲವು ಸಂಶೋಧನೆಗಳು ನಡೆಯುತ್ತಿವೆ.

3. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಅಧಿಕ ರಕ್ತದೊತ್ತಡವು ಹೃದಯಾಘಾತ (Heart Health) ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಬೆಳ್ಳುಳ್ಳಿ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ, ಬೆಳ್ಳುಳ್ಳಿ ರಕ್ತದೊತ್ತಡವನ್ನು ನಿರ್ವಹಿಸುವ ಗುಣವನ್ನು ಹೊಂದಿದೆ ಎಂದು ಹೇಳಲಾಗಿದೆ.

4. ಕಡಿಮೆ ಕೊಲೆಸ್ಟ್ರಾಲ್ (Cholesterol)
ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ (Weight Loss) ಮಾಡಲು ನೆರವಾಗುತ್ತದೆ. ಸಂಶೋಧನೆಯೊಂದರಲ್ಲಿ ಕೆಲವರಿಗೆ ಬೆಳ್ಳುಳ್ಳಿ ಸಪ್ಲಿಮೆಂಟ್ ನೀಡಲಾಗಿದೆ. ಅದರ ನಂತರ ಅವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂದರೆ LDL ಮಟ್ಟ ಇಳಿಕೆಯಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ-Empty Stomach : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ!

5. ಅಥ್ಲೆಟಿಕ್ ಪರ್ಫಾರ್ಮನ್ಸ್ ಗೆ ಉತ್ತಮ
ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬೆಳ್ಳುಳ್ಳಿ ಒಂದು ಉತ್ತಮ ಮದ್ದಾಗಿದೆ. ಬೆಳ್ಳುಳ್ಳಿಯ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ, ಅದರಲ್ಲಿ ಬೆಳ್ಳುಳ್ಳಿ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ತ್ರಾಣವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ-Summer Drinks : ಬೇಸಿಗೆಯಲ್ಲಿ ನಿಮ್ಮನ್ನು ನೀವು ಆರೋಗ್ಯವಾಗಿಡಲು ತಪ್ಪದೆ ಕುಡಿಯಿರಿ 5 ಪಾನೀಯಗಳನ್ನು!

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿವೆ. ಅನುಸರಿಸುವುದಕ್ಕು ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Seeds: ಗಂಭೀರ ಕಾಯಿಲೆಗಳಿಗೆ ವರದಾನವಾಗುವ ಈ ಹಣ್ಣು-ತರಕಾರಿಗಳ ಬೀಜಗಳನ್ನು ಎಂದಿಗೂ ಎಸೆಯಬೇಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News