Remedies For Constipation : ಮಲಬದ್ದತೆಯ ಸಮಸ್ಯೆಗೆ ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ

Remedies For Constipation Relief : ಹೊಟ್ಟೆ ಕ್ಲೀನ್ ಆಗಿಲ್ಲ ಎಂದಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ,ಮೊಡವೆ , ಗ್ಯಾಸ್ , ಯಕೃತ್ತಿನ ಸಮಸ್ಯೆ ಎದುರಾಗುತ್ತದೆ. ಮಲಬದ್ಧತೆಯ ನಿವಾರಣೆಗೆ  ಅನೇಕ ಜನರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಮನೆಮದ್ದುಗಳನ್ನು ಬಳಸಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು.

Written by - Ranjitha R K | Last Updated : Jul 11, 2021, 03:18 PM IST
  • ಹೊಟ್ಟೆ ಕ್ಲೀನ್ ಆಗದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
  • ಹೊಟ್ಟೆ ಕ್ಲೀನ್ ಆಗದಿದ್ದರೆ ಮೊಡವೆಗಳ ಸಮಸ್ಯೆ ಉಂಟುಮಾಡಬಹುದು.
  • ಜೀರಿಗೆ ಮಲಬದ್ಧತೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ.
Remedies For Constipation : ಮಲಬದ್ದತೆಯ ಸಮಸ್ಯೆಗೆ ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ  title=
ಹೊಟ್ಟೆ ಕ್ಲೀನ್ ಆಗದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ (file photo)

ನವದೆಹಲಿ : Remedies For Constipation Relief : ಸಿಕ್ಕ ಸಿಕ್ಕ ಆಹಾರ ಸೇವನೆ ಬ್ಯುಸಿ ಜೀವನಶೈಲಿ ಮಲಬದ್ಧತೆಗೆ ಪ್ರಮುಖ (Constipation causes) ಕಾರಣವಾಗಿದೆ. ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆಯ ಬಗ್ಗೆ ಜನರು, ಮುಕ್ತವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಇಂದಿನ ಕಾಲದಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಮಲಬದ್ಧತೆಯಿಂದಾಗಿ, ಹೊಟ್ಟೆ ನೋವು, ತಲೆನೋವು, ಹಸಿವು ಕಡಿಮೆಯಾಗುವುದು, ವಾಕರಿಕೆ ಮುಂತಾದ ಸಮಸ್ಯೆಗಳು ಉಂಟುಮಾಡುತ್ತದೆ. ಹೊಟ್ಟೆ ಸರಿಯಾಗಿ ಸ್ವಚ್ಛ ವಾಗಿಲ್ಲ ಎಂದಾದರೆ, ಆಗ ಅದನ್ನು ಮಲಬದ್ಧತೆಯ ಸಮಸ್ಯೆ ಎಂದು ಕರೆಯಲಾಗುತ್ತದೆ. ಹೊಟ್ಟೆ ಕ್ಲೀನ್ ಆಗಿಲ್ಲ ಎಂದಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ,ಮೊಡವೆ , ಗ್ಯಾಸ್ , ಯಕೃತ್ತಿನ ಸಮಸ್ಯೆ ಎದುರಾಗುತ್ತದೆ. ಮಲಬದ್ಧತೆಯ ನಿವಾರಣೆಗೆ  ಅನೇಕ ಜನರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಮನೆಮದ್ದುಗಳನ್ನು ಬಳಸಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು (Remedies For Constipation).  

ಮಲಬದ್ಧತೆಯ ಸಮಸ್ಯೆಯ ನಿವಾರಣೆಯಲ್ಲಿ ಇವು ಸಹಕಾರಿ : 
1. ಜೀರಿಗೆ: ಜೀರಿಗೆ (Cumin seed) ಒಂದು ರೀತಿಯ ಮಸಾಲೆ. ಇದು ಆಹಾರದಲ್ಲಿನ ರುಚಿಯನ್ನು ಹೆಚ್ಚಿಸುವುಡು ಮಾತ್ರವಲ್ಲ, ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಜೀರಿಗೆ ನೀರನ್ನು ಸೇವಿಸುವುದರಿಂದ ಮಲಬದ್ಧತೆಯನ್ನು (Constipation) ನಿವಾರಿಸಬಹುದು.

ಇದನ್ನೂ ಓದಿ  : Benefits of Jaggery : ದಿನ ಬೆಳಿಗ್ಗೆ 50 ಗ್ರಾಂ ಬೆಲ್ಲ ತಿನ್ನಿಈ 5 ಪ್ರಚಂಡ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ!

 2.ಹಸಿ ಈರುಳ್ಳಿ : ಹಸಿ ಈರುಳ್ಳಿಯಲ್ಲಿ (Onin) ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈರುಳ್ಳಿ ಸೇವನೆಯು ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ .

3. ಕಾಫಿ: ಮಲಬದ್ಧತೆಗೆ ಕಾಫಿ (coffee) ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮಲಬದ್ಧತೆ ಸಮಸ್ಯೆ ಇರುವ ಜನರು ಕಾಫಿ ಸೇವಿಸಬೇಕು. ಕಾಫಿ ಕುಡಿಯುವ ಮೂಲಕ, ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. 

4. ನಿಂಬೆ: ನಿಂಬೆ ಆರೋಗ್ಯಕ್ಕೆ (health beneits of lemon) ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಂಬೆ ರಸವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ದೇಹದಲ್ಲಿರುವ ವಿಷಕಾರಿ ಕಣಗಳನ್ನು ತೆಗೆದುಹಾಕುತ್ತದೆ. ತಾಜಾ ನಿಂಬೆ ಪಾನಕ ಅಥವಾ ನಿಂಬೆ ಚಹಾವನ್ನು ಬೆಳಿಗ್ಗೆ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ  Ghee For Bones: ಈ ಸಮಸ್ಯೆ ನಿಮಗಿದ್ದರೆ ನಿತ್ಯ ತುಪ್ಪವನ್ನು ಈ ರೀತಿ ಸೇವಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News