ನಿತ್ಯ ಬಳಸುವ ಈ ವಸ್ತುಗಳೇ ನಿಮ್ಮ ಆರೋಗ್ಯಕ್ಕೆ ಮುಳುವಾಗುವುದು.! ಏರಿಸಿಬಿಡುತ್ತದೆ ರಕ್ತದೊತ್ತಡ

High Blood Pressure Causes:ನಾವು ನಿತ್ಯ ಸೇವಿಸುವ ಕೆಲವು ಆಹಾರ  ಪದಾರ್ಥಗಳೇ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಆದ ಕಾರಣ ನಮ್ಮ ಆಹಾರದ ಪಟ್ಟಿಯಿಂದಲೇ ಈ ವಸ್ತುಗಳನ್ನು ದೂರ ಸರಿಸಿಬಿಡಬೇಕು.  

Written by - Ranjitha R K | Last Updated : Dec 14, 2022, 09:01 AM IST
  • ಅಧಿಕ ರಕ್ತದೊತ್ತಡ ಪ್ರಾಣಕ್ಕೆ ಮುಳುವಾಗಿಬಿಡುತ್ತದೆ.
  • ಅಧಿಕ ರಕ್ತದೊತ್ತಡ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ
  • ನಿತ್ಯ ಸೇವಿಸುವ ಆಹಾರ ಪದಾರ್ಥಗಳೇ ಅಧಿಕ ರಕ್ತದೊತ್ತಡಕ್ಕೆ ಕಾರಣ
 ನಿತ್ಯ ಬಳಸುವ  ಈ ವಸ್ತುಗಳೇ ನಿಮ್ಮ ಆರೋಗ್ಯಕ್ಕೆ ಮುಳುವಾಗುವುದು.!  ಏರಿಸಿಬಿಡುತ್ತದೆ ರಕ್ತದೊತ್ತಡ  title=
High Blood Pressure Causes

High Blood Pressure Causes: ಅಧಿಕ ರಕ್ತದೊತ್ತಡ ಪ್ರಾಣಕ್ಕೆ ಮುಳುವಾಗಿಬಿಡುತ್ತದೆ. ಅಧಿಕ ರಕ್ತದೊತ್ತಡ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ . ಹಾಗಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅಧಿಕ ರಕ್ತದೊತ್ತಡದಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಬೇಕಾದರೆ ಮುಖ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಕಾಳಜಿ ವಹಿಸಬೇಕು.  ನಾವು ನಿತ್ಯ ಸೇವಿಸುವ ಕೆಲವು ಆಹಾರ  ಪದಾರ್ಥಗಳೇ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಆದ ಕಾರಣ ನಮ್ಮ ಆಹಾರದ ಪಟ್ಟಿಯಿಂದಲೇ ಈ ವಸ್ತುಗಳನ್ನು ದೂರ ಸರಿಸಿಬಿಡಬೇಕು.  

ಕಾಫಿ  :
ಕಾಫಿ  ಅಧಿಕ ರಕ್ತದೊತ್ತಡ ರೋಗಿಗಳಿಗೆ ಮಾರಕವಾಗಿ ಪರಿಣಮಿಸಬಹುದು. ಕಾಫಿ ರಕ್ತದೊತ್ತಡವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದರಲ್ಲಿರುವ ಕೆಫೀನ್ ಮತ್ತು ಸಕ್ಕರೆ ಆರೋಗ್ಯಕ್ಕೆ ಅತಿಯಾಗಿ ಹಾನಿ ಉಂಟು ಮಾಡುತ್ತದೆ. ಅಧಿಕ ರಕ್ತದೊತ್ತಡ ಇರುವವರು ಕಾಫಿ ಕುಡಿಯುವುದನ್ನು ತಪ್ಪಿಸಬೇಕು. 

ಇದನ್ನೂ ಓದಿ : Drinking Water After Fruits: ಹಣ್ಣುಗಳನ್ನು ತಿಂದರೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಉಪ್ಪಿನಕಾಯಿ  :
ಊಟಕ್ಕೆ ಉಪ್ಪಿನಕಾಯಿ ಇದ್ದರೆ ಅದರ ಮಜವೇ ಬೇರೆ. ಆದರೆ ಬಾಯಿ ರುಚಿ ಎಂದು ನಿತ್ಯ ಉಪ್ಪಿನಕಾಯಿ ತಿನ್ನುತ್ತಿದ್ದರೆ ಜೀವ ಕಳೆದುಕೊಳ್ಳುವ ಸ್ಥಿತಿ ಎದುರಾಗಬಹುದು. ಅಧಿಕ ಬಿಪಿ ರೋಗಿಗಳ ಆರೋಗ್ಯಕ್ಕೆ ಉಪ್ಪಿನಕಾಯಿ ಒಳ್ಳೆಯದಲ್ಲ. ಉಪ್ಪಿನಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ಉಪ್ಪು ಉಪಯೋಗಿಸಲಾಗುತ್ತದೆ. ಇದು ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಧಿಕ ಸೋಡಿಯಂ ರಕ್ತವನ್ನು ದುರ್ಬಲಗೊಳಿಸಿ, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. 

ಸಂಸ್ಕರಿಸಿದ ಆಹಾರ  :
ಸಂಸ್ಕರಿಸಿದ ಆಹಾರದಲ್ಲಿ ಕೂಡಾ ಅಧಿಕ ಪ್ರಮಾಣದಲ್ಲಿ ಸೋಡಿಯಂ ಇರುತ್ತದೆ. ಇದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು. ಮುಖ್ಯವಾಗಿ ಇವರು ಸ್ಯಾಂಡ್‌ವಿಚ್‌ ಬರ್ಗರ್‌ಗಳಂತಹ ತಿನಿಸುಗಳಿಂದ ದೂರ ಉಳಿಯಬೇಕು. 

ಪ್ಯಾಕ್ ಮಾಡಿದ ಆಹಾರ :
ಚಿಪ್ಸ್ ಗಳಂಥಹ ಪ್ಯಾಕ್ ಮಾಡಲಾದ ವಸ್ತುಗಳಲ್ಲಿ ಕೂಡಾ ಸೋಡಿಯಂ ಅಧಿಕವಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ರಕ್ತದೊತ್ತಡ ವೇಗವಾಗಿ ಹೆಚ್ಚಾಗಬಹುದು. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಅಂತಹ ಆಹಾರವನ್ನು ಸೇವಿಸಬಾರದು. 

ಇದನ್ನೂ ಓದಿ : Mushroom benefits: ಅಣಬೆ ತಿನ್ನಿ ಈ 5 ಸಮಸ್ಯೆಗಳಿಗೆ ಗುಡ್‌ ಬೈ ಹೇಳಿ

ಸಿಹಿ  ತಿನಿಸುಗಳು : 
ಅಧಿಕ ಸಕ್ಕರೆ ಎಂದರೆ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸುವುದರಿಂದ ರಕ್ತದೊತ್ತಡವೂ ಹೆಚ್ಚಾಗಬಹುದು. ಸಿಹಿ ಪದಾರ್ಥಗಳು ತೂಕವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಧಿಕ ತೂಕವು ಅಧಿಕ ಬಿಪಿಗೆ ಕಾರಣವಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ, ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News