OMG: ₹300 ಕೋಟಿ ಆಸ್ತಿಗಾಗಿ ₹1 ಕೋಟಿ ಕೊಟ್ಟು ಮಾವನ ಹತ್ಯೆ ಮಾಡಿಸಿದ ಸೊಸೆ!

Nagpur Hit and Run Case: ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ಹಿಟ್ ಅಂಡ್ ರನ್ ಪ್ರಕರಣದಂತೆ ಮಾಡಿ ಪುರುಷೋತ್ತಮ್ ಪುಟ್ಟೇವಾರ್‌ರನ್ನು ಹತ್ಯೆ ಮಾಡಿಸಲು ಅರ್ಚನಾ ಪುಟ್ಟೇವಾರ್ 1 ಕೋಟಿ ರೂ. ಖರ್ಚು ಮಾಡಿ ಒಂದಷ್ಟು ಜನರನ್ನು ನೇಮಕ ಮಾಡಿದ್ದರೆಂದು ತಿಳಿದುಬಂದಿದೆ.

Written by - Puttaraj K Alur | Last Updated : Jun 13, 2024, 02:59 PM IST
  • ನಾಗ್ಪುರದಲ್ಲಿ ನಡೆದಿದ್ದ ಹಿಂಟ್‌ ಅಂಡ್‌ ರನ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್
  • ₹300 ಕೋಟಿ ಆಸ್ತಿಗಾಗಿ ₹1 ಕೋಟಿ ಕೊಟ್ಟು ಮಾವನ ಹತ್ಯೆ ಮಾಡಿಸಿದ ಸೊಸೆ!
  • ನಾಗ್ಪುರ ಪೊಲೀಸರ ತನಿಖೆ ವೇಳೆ ಬಯಲಾಯ್ತು ಭಯಾನಕ ಸತ್ಯ
OMG: ₹300 ಕೋಟಿ ಆಸ್ತಿಗಾಗಿ ₹1 ಕೋಟಿ ಕೊಟ್ಟು ಮಾವನ ಹತ್ಯೆ ಮಾಡಿಸಿದ ಸೊಸೆ! title=
ಮಾವನ ಹತ್ಯೆ ಮಾಡಿಸಿದ ಸೊಸೆ!

Nagpur Hit and Run Case: ₹300 ಕೋಟಿ ಆಸ್ತಿಯನ್ನು ಲಪಟಾಯಿಸಲು ₹1 ಕೋಟಿಗೆ ಸುಪಾರಿ ಕೊಟ್ಟು ಮಾವನನ್ನೇ ಸೊಸೆ ಹತ್ಯೆ ಮಾಡಿಸಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಹೌದು, ನಾಗ್ಪುರದಲ್ಲಿ ಸಂಭವಿಸಿದ್ದ ಹಿಟ್ ಅಂಡ್ ರನ್ ಪ್ರಕರಣದ ಹಿಂದೆ ವ್ಯವಸ್ಥಿತ ಸಂಚು ಇರುವುದನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಹಿಟ್ ಅಂಡ್ ರನ್ ಪ್ರಕರಣ ಅಂತಾ ಅನಿಸಿದರೂ, 300 ಕೋಟಿ ರೂ.ನ ಆಸ್ತಿಗಾಗಿ ಸೊಸೆ ತನ್ನ ಮಾವನನ್ನು 1 ಕೋಟಿ ರೂ. ಕೊಟ್ಟು ಕೊಲ್ಲಿಸಿದ್ದಾಳೆಂದು ತಿಳಿದುಬಂದಿದೆ. ನಗರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಅರ್ಚನಾ ಮನೀಷ್ ಪುಟ್ಟೇವಾರ್ ಅವರ ಮಾವ ಪುರುಷೋತ್ತಮ್ ಪುಟ್ಟೇವಾರ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: G7 ಶೃಂಗಸಭೆ : 3ನೇ ಬಾರಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಇಟಲಿಗೆ ಮೊದಲ ವಿದೇಶ ಪ್ರವಾಸ

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ಹಿಟ್ ಅಂಡ್ ರನ್ ಪ್ರಕರಣದಂತೆ ಮಾಡಿ ಪುರುಷೋತ್ತಮ್ ಪುಟ್ಟೇವಾರ್‌ರನ್ನು ಹತ್ಯೆ ಮಾಡಿಸಲು ಅರ್ಚನಾ ಪುಟ್ಟೇವಾರ್ 1 ಕೋಟಿ ರೂ. ಖರ್ಚು ಮಾಡಿ ಒಂದಷ್ಟು ಜನರನ್ನು ನೇಮಕ ಮಾಡಿದ್ದರು. ಈ ಉದ್ದೇಶಕ್ಕಾಗಿ ಹಳೆಯ ಕಾರು ಖರೀದಿಸಿ ಆರೋಪಿಗಳಿಗೆ ಅರ್ಚನಾ ಹಣಕಾಸು ನೆರವು ನೀಡಿದ್ದರು ಅನ್ನೋ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ಮಾವನಿಗೆ ಸೇರಿದ ಬರೋಬ್ಬರಿ 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಲಪಟಾಯಿಸಲು ಅರ್ಚನಾ ಕೊಲೆ ಮಾಡಿಸಿ, ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

53 ವರ್ಷದ ಅರ್ಚನಾ ತನ್ನ ಪತಿಯ ಚಾಲಕ ಬಾಗ್ಡೆ ಹಾಗೂ ಇತರ ಇಬ್ಬರು ಆರೋಪಿಗಳಾದ ನೀರಜ್ ನಿಮ್ಜೆ ಮತ್ತು ಸಚಿನ್ ಧಾರ್ಮಿಕ್‌ರೊಂದಿಗೆ ಕೊಲೆಗೆ ಸಂಚು ರೂಪಿಸಿದ್ದಳೆಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ಕೊಲೆ ಮತ್ತು ಇತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಎರಡು ಕಾರು, ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Ghaziabad Fire: ಗಾಜಿಯಾಬಾದ್‌ನ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ

ಘಟನೆ ನಡೆದ ದಿನ ಪುರುಷೋತ್ತಮ ಪುಟ್ಟೇವಾರ್ ಅವರು ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದ ಪತ್ನಿ ಶಕುಂತಲಾರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಿಂದ ವಾಪಸ್‌ ಮನೆಗೆ ಬರುವಾಗ ಕಾರು ಅವರ ಮೇಲೆ ಹರಿದಿತ್ತು. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News