ವ್ಯಾಯಾಮ, ಡಯೆಟ್ ಬೇಡವೇ ಬೇಡ ! ಹತ್ತೇ ದಿನದಲ್ಲಿ weight loss ಆಗಲು ಹೀಗೆ ಮಾಡಿ

ವ್ಯಾಯಾಮ ಇಲ್ಲದೆ ಡಯೆಟ್ ಮಾಡದೇ ಕೂಡಾ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು.  ಈ ಸುಲಭ ವಿಧಾನವನ್ನು ಅನುಸರಿಸುವ ಮೂಲಕ ಕೆಲವ 10 ದಿನಗಳಲ್ಲಿ ತೂಕ ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ. 

Written by - Ranjitha R K | Last Updated : Feb 13, 2023, 03:31 PM IST
  • ತೂಕ ಹೆಚ್ಚಳ ಎನ್ನುವುದು ಬಹುತೇಕರ ಸಮಸ್ಯೆ.
  • ತೂಕ ಇಳಿಸಿಕೊಳ್ಳಲು ಪಡುವ ಪಾಡು ಅಷ್ಟಿಷ್ಟಲ್ಲ.
  • ವ್ಯಾಯಾಮ ಇಲ್ಲದೆ ಡಯೆಟ್ ಮಾಡದೇ ತೂಕ ಕಡಿಮೆ ಮಾಡಿಕೊಳ್ಳಬಹುದು.
ವ್ಯಾಯಾಮ, ಡಯೆಟ್ ಬೇಡವೇ ಬೇಡ ! ಹತ್ತೇ ದಿನದಲ್ಲಿ weight loss ಆಗಲು ಹೀಗೆ ಮಾಡಿ  title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆರೋಗ್ಯವೇ ಪ್ರತಿಯೊಬ್ಬರ ಸಮಸ್ಯೆ. ಯಾರೇ ಕೇಳಿದರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಅದರಲ್ಲೂ ತೂಕ ಹೆಚ್ಚಳ ಎನ್ನುವುದು ಬಹುತೇಕರ ಸಮಸ್ಯೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಪಡುವ ಪಾಡು ಅಷ್ಟಿಷ್ಟಲ್ಲ. ತೂಕ ಇಳಿಸಲು ಪ್ರಯತ್ನಿಸುವವರು ಮೊದಲು ಆಹಾರಕ್ರಮವನ್ನು ಬದಲಾಯಿಸಿಕೊಳ್ಳುತ್ತಾರೆ. ನಂತರ ವ್ಯಾಯಾಮದ ಕಡೆಗೆ ಗಮನ ಹರಿಸುತ್ತಾರೆ. ಆದರೆ, ವ್ಯಾಯಾಮ ಇಲ್ಲದೆ ಡಯೆಟ್ ಮಾಡದೇ ಕೂಡಾ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು.  ಈ ಸುಲಭ ವಿಧಾನವನ್ನು ಅನುಸರಿಸುವ ಮೂಲಕ ಕೇವಲ 10 ದಿನಗಳಲ್ಲಿ ತೂಕ ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ. 

ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ : 
ಹೆಚ್ಚಿದ ತೂಕವನ್ನು ಇಳಿಸಿಕೊಳ್ಳುವುದು ಒಂದು ದೊಡ್ಡ ಸವಾಲೇ ಸರಿ. ತೂಕ  ಹೆಚ್ಚಿಸಿದ ನಂತರ ತೂಕ ನಷ್ಟಕ್ಕಾಗಿ ಬಹಳ ಪ್ರಯತ್ನಪಡಬೇಕಾಗುತ್ತದೆ.  ಸ್ಥೂಲಕಾಯದಿಂದ ಬಳಲುತ್ತಿರುವವರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಮಾತ್ರ ದೇಹ ತೂಕವನ್ನು ಕಳೆದುಕೊಳ್ಳಬಹುದು.

ಇದನ್ನೂ ಓದಿ : ಕಡಲೆ ಕಾಳಿನಲ್ಲಿದೆ ಆರೋಗ್ಯದಾಯಕ ಗುಣಗಳು

ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ಲಘು ಆಹಾರವಿರಲಿ : 
ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ಹೆಚ್ಚು ವ್ಯತ್ಯಾಸವಿರುತ್ತದೆ. ಹಾಗಾಗಿ ಈ ಅಂತರದಲ್ಲಿ ಬಹಳ ಮಂದಿಗೆ ಹಸಿವಾಗುತ್ತದೆ. ಈ ಸಂದರ್ಭದಲ್ಲಿ ಹಸಿವಾದಾಗಲೂ ಜನ ಏನನ್ನೂ  ತಿನ್ನದೇ ರಾತ್ರಿ ಒಮ್ಮೆಲೇ ಭೋಜನ ಮಾಡುತ್ತಾರೆ. ಇದು ದೇಹ ತೂಕದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ  ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ಲಘು  ಆಹಾರವನ್ನು ತೆಗೆದುಕೊಳ್ಳಿ. 

ಯಾವಾಗಲೂ ಸಣ್ಣ ತಟ್ಟೆಯಲ್ಲಿ ಆಹಾರವನ್ನು ಸೇವಿಸಿ :
ತೂಕವನ್ನು ಕಳೆದುಕೊಳ್ಳಲು, ಆಹಾರದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ಸಣ್ಣ ತಟ್ಟೆಯಲ್ಲಿ ಆಹಾರ ಸೇವಿಸಿ. ಪದೇ ಪದೇ ಆಹಾರ ಸೇವಿಸುತ್ತಾ ಇರಬೇಡಿ. ಕಡಿಮ ಆಹಾರ ತಿನ್ನುವಾಗ ಆರಂಭದ ದಿನಗಳಲ್ಲಿ ಹಸಿವಾಗಬಹುದು. ಕ್ರಮೇಣ ಇದು ಅಭ್ಯಾಸವಾಗಿ ಬಿಡುತ್ತದೆ. 

ಮಲಗುವ 2 ಗಂಟೆಗಳ ಮೊದಲು ಊಟ ಮಾಡಿ :
ರಾತ್ರಿ ಮಲಗುವ ಕನಿಷ್ಠ 2 ಗಂಟೆಗಳ ಮೊದಲು ಊಟ ಮಾಡಿ. ಇದರೊಂದಿಗೆ ರಾತ್ರಿ ಊಟದ ನಂತರ ಬೇರೆ ಏನನ್ನೂ ತಿನ್ನಬಾರದು. ನೀವು 10 ಗಂಟೆಗೆ ಮಲಗುವುದಾದರೆ 8 ಗಂಟೆಗೆ ಮೊದಲು ರಾತ್ರಿ ಊಟ ಮಾಡಿ ಮುಗಿಸಿ.  

ಇದನ್ನೂ ಓದಿ : ಸ್ತ್ರೀಯರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಚಿಟಿಕೆ ಅರಿಶಿನ

ಊಟಕ್ಕೆ ಮುಂಚೆ ಬಿಸಿ ಪಾನೀಯಗಳನ್ನು ಕುಡಿಯಿರಿ :
ಆಹಾರವನ್ನು ತಿನ್ನುವ ಮೊದಲು ಬಿಸಿ ಪಾನೀಯಗಳನ್ನು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಈ ಕಾರಣದಿಂದಾಗಿ ಆಹಾರದಲ್ಲಿ ಸೂಪ್ ಅಥವಾ ಬಿಸಿ ನಿಂಬೆ ಪಾನಕವನ್ನು ತೆಗೆದುಕೊಳ್ಳಬಹುದು. 

ತೂಕವನ್ನು ಕಳೆದುಕೊಳ್ಳಲು ಬಯಸುವವರು ಸಾಧ್ಯವಾದಷ್ಟು ಮನೆ ಆಹಾರವನ್ನೇ ಸೇವಿಸಿ. ಇದರೊಂದಿಗೆ, ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯಿರಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ, ವ್ಯಾಯಾಮವಿಲ್ಲದೆ ತೂಕವನ್ನು ಕಳೆದುಕೊಳ್ಳಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News