Good News: ಇಂದಿನಿಂದ ಮೊದಲ ಹಂತದ Covishield ಲಸಿಕೆಗಳ ವಿತರಣೆ ಆರಂಭ

ಪುಣೆಯ ಮಂಜರಿಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆವರಣದಿಂದ 15 ಕಿ.ಮೀ ದೂರದಲ್ಲಿರುವ ಪುಣೆ ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನಾಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಕ್ನೋ, ಚಂಡೀಗಢ ಮತ್ತು ಭುವನೇಶ್ವರಕ್ಕೆ ಹೊರಟಿವೆ. ಒಟ್ಟು 8 ವಾಣಿಜ್ಯ ವಿಮಾನಗಳಲ್ಲಿ ಲಸಿಕೆಗಳನ್ನು ಪುಣೆಯಿಂದ ಸಾಗಿಸಲಾಗಿದೆ.

Written by - Yashaswini V | Last Updated : Jan 12, 2021, 10:35 AM IST
  • ರಾಷ್ಟ್ರವ್ಯಾಪಿ ಇನಾಕ್ಯುಲೇಷನ್ ಡ್ರೈವ್ ಚಾಲನೆಗೆ 4 ದಿನ ಮೊದಲೇ ಲಸಿಕೆಗಳ ವಿತರಣೆ
  • ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಿಂದ ದೇಶದ 13 ಸ್ಥಳಗಳಿಗೆ ರವಾನೆ
  • 3 ಲಾರಿಗಳಲ್ಲಿ ಒಟ್ಟು 478 ಪೆಟ್ಟಿಗೆಗಳಿದ್ದು, ಪ್ರತಿ ಬಾಕ್ಸ್ 32 ಕೆಜಿ ತೂಕವಿರುತ್ತದೆ
Good News: ಇಂದಿನಿಂದ ಮೊದಲ ಹಂತದ Covishield ಲಸಿಕೆಗಳ ವಿತರಣೆ ಆರಂಭ title=
The first consignment of Covishield vaccine has been dispatched from Pune (Photo: Reuters)

ಪುಣೆ: ಕಡೆಗೂ ಕೋವಿಶೀಲ್ಡ್ (Covishield) ಲಸಿಕೆಗಳ ವಿತರಣೆ ಆರಂಭವಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ (Serum Institute of India) ಪುಣೆ ವಿಮಾನ ನಿಲ್ದಾಣಕ್ಕೆ ಮೊದಲ ಹಂತದ ಲಸಿಕೆ ಹೊರಟಿದೆ.

ರಾಷ್ಟ್ರವ್ಯಾಪಿ ನಡೆಯಲಿರುವ ಇನಾಕ್ಯುಲೇಷನ್ ಡ್ರೈವ್ (Inoculation Draive) ಚಾಲನೆಗೆ 4 ದಿನಗಳ ಮೊದಲು ಕೊರೋನಾ ಲಸಿಕೆಗಳ (Corona Vaccine) ಮೊದಲ ಹಂತದ ಲಸಿಕೆ ವಿತರಣೆ ಆರಂಭವಾಗಿದ್ದು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಿಂದ ದೇಶದ 13 ಸ್ಥಳಗಳಿಗೆ ರವಾನೆ ಆಗುತ್ತಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ 3 ಟ್ರಕ್‌ಗಳು ಬೆಳಿಗ್ಗೆ 5 ಗಂಟೆಗೆ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದವು, ಅಲ್ಲಿಂದ ದೇಶದ 13 ಸ್ಥಳಗಳಿಗೆ ಲಸಿಕೆಗಳನ್ನು ವಿತರಿಸಲಾಗುತ್ತಿದೆ.

ಇದನ್ನು ಓದಿ - CoronaVaccine : ಶೀಘ್ರ ಬರಲಿದೆ ಗೇಮ್ ಚೇಂಜರ್ ಸಿಂಗಲ್ ಡೋಸ್ ಕರೋನಾ ವ್ಯಾಕ್ಸಿನ್..! ಏನಿದರ ಸ್ಪೆಷ್ಯಾಲಿಟಿ..?

3 ಲಾರಿಗಳಲ್ಲಿ ಒಟ್ಟು 478 ಪೆಟ್ಟಿಗೆಗಳಿದ್ದು, ಪ್ರತಿ ಬಾಕ್ಸ್ 32 ಕೆಜಿ ತೂಕವಿರುತ್ತದೆ ಎಂದು ಲಸಿಕೆ ಸಾರಿಗೆ ವ್ಯವಸ್ಥೆಯಲ್ಲಿ ತೊಡಗಿರುವ ಮೂಲಗಳು ಪಿಟಿಐ (PTI) ಸುದ್ದಿ ಸಂಸ್ಥೆಗೆ ತಿಳಿಸಿವೆ. ಟ್ರಕ್‌ಗಳು ಪುಣೆಯ ಮಂಜರಿಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆವರಣದಿಂದ 15 ಕಿ.ಮೀ ದೂರದಲ್ಲಿರುವ ಪುಣೆ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು (Bengaluru), ಕರ್ನಾಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಕ್ನೋ, ಚಂಡೀಗಢ ಮತ್ತು ಭುವನೇಶ್ವರಕ್ಕೆ ಹೊರಟಿವೆ. ಒಟ್ಟು 8 ವಾಣಿಜ್ಯ ವಿಮಾನಗಳಲ್ಲಿ ಲಸಿಕೆಗಳನ್ನು ಪುಣೆಯಿಂದ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲಸಿಕೆಯನ್ನು ಹೊತ್ತ ಮೊದಲ ವಿಮಾನ ಅಹಮದಾಬಾದ್‌ಗೆ ತೆರಳಿತು. ನಂತರ ಹೈದರಾಬಾದ್, ವಿಜಯವಾಡ, ಮತ್ತು ಭುವನೇಶ್ವರಕ್ಕೆ ತೆರಳಿದವು. ಇದಾದ ಮೇಲೆ ಕೋಲ್ಕತಾ ಮತ್ತು ಗುವಾಹತಿಗೆ ಹೋರಟವು. ಇದಲ್ಲದೆ ರಸ್ತೆ ಮೂಲಕ ಮುಂಬೈಗೆ ತೆರಳಿದವು. ಸೀರಮ್ ಸಂಸ್ಥೆಯಿಂದ ಲಸಿಕೆ ದಾಸ್ತಾನುಗಳನ್ನು ಸಾಗಿಸಲು ಕೂಲ್-ಎಕ್ಸ್ ಕೋಲ್ಡ್ ಚೈನ್ ಲಿಮಿಟೆಡ್‌ಗೆ ಸೇರಿದ ಟ್ರಕ್‌ಗಳನ್ನು ಬಳಸಲಾಗುತ್ತಿದೆ.

ಇದನ್ನು ಓದಿ - ಬ್ರಿಟನ್‌, ದಕ್ಷಿಣ ಆಫ್ರಿಕಾದ ಬಳಿಕ ಈಗ ಜಪಾನ್‌ನಲ್ಲಿ ಹೊಸ ರೂಪದ Coronavirus ಪತ್ತೆ!

ಕೋವಿಶೀಲ್ಡ್  (Covishield) ಲಸಿಕೆ ಸಾಗಿಸುತ್ತಿರುವ ಸ್ಪೈಸ್‌ಜೆಟ್ (SpiceJet) ಸಂತಸ ವ್ಯಕ್ತಪಡಿಸಿದ್ದು, "ಸ್ಪೈಸ್ ಜೆಟ್ ಇಂದು ಭಾರತದ ಮೊದಲ ಕೋವಿಡ್ ಲಸಿಕೆಯನ್ನು ಸಾಗಿಸಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. 34 ಪೆಟ್ಟಿಗೆಗಳು ಮತ್ತು 1088 ಕೆಜಿ ತೂಕದ ಕೋವಿಶೀಲ್ಡ್ ಮೊದಲ ರವಾನೆಯನ್ನು ಪುಣೆಯಿಂದ ದೆಹಲಿಗೆ ಸ್ಪೈಸ್ ಜೆಟ್ ವಿಮಾನ 8937ರಲ್ಲಿ ಸಾಗಿಸಲಾಯಿತು" ಎಂದು ತಿಳಿಸಿದೆ. ಕೋವಿಶೀಲ್ಡ್ ಹೊತ್ತು ತೆರಳಿದ 3 ಟ್ರಕ್ ಗಳಿಗೆ ಹೊರಡುವ ಮುನ್ನ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆವರಣದಲ್ಲಿ 'ಪೂಜೆ' ಮಾಡಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News