ಶುಗರ್ ಮತ್ತು ಬ್ಲಡ್ ಪ್ರೆಶರ್ ನಂತಹ ರೋಗಗಳಿಗೆ ರಾಮಬಾಣ ಅಡುಗೆ ಕೋಣೆಯಲ್ಲಿಯೇ ಸಿಗುವ ಈ ವಸ್ತು

ಶುಗರ್, ಕೆಟ್ಟ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದಂತಹ ಸಮಸ್ಯೆ ಉಂಟಾದರೆ,  ಆಹಾರ ಮತ್ತು ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.  ಈ ಸಮಸ್ಯೆಗಳ ಪರಿಹಾರವಾಗಿ ಅಡುಗೆ ಕೋಣೆಯಲ್ಲಿ ಸುಲಭವಾಗಿ ಸಿಗುವ ಈ ಒಂದು ವಸ್ತುವನ್ನು ಬಳಸಬಹುದು. ಇದು ಈ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. 

Written by - Ranjitha R K | Last Updated : Sep 16, 2022, 02:43 PM IST
  • ರಕ್ತದೊತ್ತಡ, ಬೊಜ್ಜು, ಮಧುಮೇಹ ಸಮಸ್ಯೆಗಳು ಸಾಮಾನ್ಯವಾಗಿದೆ
  • ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಈ ಒಂದು ವಸ್ತು
  • ಮೆಂತ್ಯೆ ಮಧುಮೇಹ ರೋಗಿಗಳಿಗೆ ದಿವ್ಯ ಔಷಧ
ಶುಗರ್ ಮತ್ತು ಬ್ಲಡ್ ಪ್ರೆಶರ್ ನಂತಹ ರೋಗಗಳಿಗೆ ರಾಮಬಾಣ ಅಡುಗೆ ಕೋಣೆಯಲ್ಲಿಯೇ ಸಿಗುವ ಈ ವಸ್ತು  title=
Fenugreek Benefits (file photo)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ, ನಾವು ಅನುಸರಿಸುತ್ತಿರುವ ಜೀವನಶೈಲಿ ಎಷ್ಟು ಕೆಟ್ಟದಾಗಿದೆ ಎಂದರೆ, ಪ್ರತಿ ಮನೆಯಲ್ಲೂ ರಕ್ತದೊತ್ತಡ, ಬೊಜ್ಜು, ಮಧುಮೇಹ ಮತ್ತು ಹೃದಯಕ್ಕೆ ಸಂಬಂಧಿಸಿದ ಅಪಾಯಕಾರಿ ಕಾಯಿಲೆಗಳಿಂದ ಬಳಲುವ ರೋಗಿಗಳನ್ನು ಕಾಣಬಹುದು. ಇದಕ್ಕೆ ದೊಡ್ಡ ಕಾರಣವೆಂದರೆ ತಪ್ಪಾದ ಆಹಾರ ಪದ್ಧತಿ ಮತ್ತು ಮತ್ತು ಕೆಟ್ಟ ದಿನಚರಿ. ಅತಿಯಾದ ಜಂಕ್ ಫುಡ್ ಸೇವನೆಯು ಯುವಜನತೆಯನ್ನು ಈ ರೋಗಗಳಿಗೆ ತುತ್ತಾಗಿಸುತ್ತಿದೆ. ಸರಿಯಾದ ಆಹಾರ ಮತ್ತು ದೈನಂದಿನ ವ್ಯಾಯಾಮದ ಮೂಲಕ ಶುಗರ್, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡಅ ಅಪಾಯವನ್ನು ನಿಯಂತ್ರಿಸಬಹುದು.  

ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಈ ಒಂದು ವಸ್ತು :
ಮೆಂತ್ಯೆ ಪ್ರತಿ ಅಡುಗೆ ಮನೆಯಲ್ಲಿಯೂ ಸುಲಭವಾಗಿ ಸಿಗುವ ಮಸಾಲೆ.  ಮೆಂತ್ಯೆ ಆಹಾರದ ರುಚಿಯನ್ನು ಹೆಚ್ಚಿಸುವುದರೊಂದಿಗೆ ಅನೇಕ ಕಾಯಿಲೆಗಳನ್ನು ದೂರ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಇದರಲ್ಲಿ ಕಂಡುಬರುವ ಸ್ಟೀರಾಯ್ಡ್ ಸಪೋನಿನ್ ಎಂಬ ಪೋಷಕಾಂಶವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಮೆಂತ್ಯೆಯಲ್ಲಿ ಪೊಟ್ಯಾಸಿಯಮ್ ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ನಿಯಾಸಿನ್, ಫೈಬರ್, ಪ್ರೋಟೀನ್ ಮತ್ತು ಕಬ್ಬಿಣದ ಅಂಶ ಸಮೃದ್ಧವಾಗಿರುತ್ತದೆ.  ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇರಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಮೆಂತ್ಯವು ಉತ್ಕರ್ಷಣ ನಿರೋಧಕ ಮತ್ತು ಸ್ಟೀರಾಯ್ಡ್ ಸಪೋನಿನ್ ಗುಣಗಳನ್ನು  ಕೂಡಾ ಒಳಗೊಂಡಿದೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಮೆಂತ್ಯೆಯಲ್ಲಿ ಕಂಡುಬರುತ್ತದೆ. ಮೆಂತ್ಯೆ ಮಧುಮೇಹ ರೋಗಿಗಳಿಗೆ ಆಯುರ್ವೇದ ಔಷಧಿಯಂತೆ ಕೆಲಸ ಮಾಡುತ್ತದೆ.

ಇದನ್ನೂ ಓದಿ : ಈ ಅಭ್ಯಾಸಗಳೇ ಮಧುಮೇಹ ಕಾಯಿಲೆಗೆ ಮೂಲ ಕಾರಣ .!

ಮೆಂತ್ಯೆ ಕಾಳಿನ ಪ್ರಯೋಜನಗಳು : 
ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೋಗಲಾಡಿಸುವ ಮೂಲಕ ಮೆಂತ್ಯೆ ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ. ಮೆಂತ್ಯೆಯಲ್ಲಿರುವ ನಾರಿನಂಶವು ಚರ್ಮದ ಶುಷ್ಕತೆಯನ್ನು ಹೋಗಲಾಡಿಸಿ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಇದು ಬೊಜ್ಜಿನ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ. ಮೆಂತ್ಯೆಯಲ್ಲಿರುವ   ಪ್ರೋಟೀನ್ ಮೂಳೆಗಳನ್ನು ಬಲಪಡಿಸುತ್ತದೆ. ಮೂಳೆ ಚಯಾಪಚಯವನ್ನು ಸುಧಾರಿಸುತ್ತದೆ. ಕೂದಲು ಉದುರುವ ಸಮಸ್ಯೆಗೆ ಮೆಂತ್ಯ ಔಷಧಿಯಂತೆ ಕೆಲಸ ಮಾಡುತ್ತದೆ. ಇದು ಭೇದಿ, ಹೊಟ್ಟೆ ನೋವಿನಿಂದ ಪರಿಹಾರವನ್ನು ನೀಡುತ್ತದೆ.  ಹೃದಯ ಸಂಬಂಧಿ ಸಮಸ್ಯೆಗಳಲ್ಲಿ ಪ್ರಯೋಜನಕಾರಿಯಾಗಿದೆ.  

ಇದನ್ನೂ ಓದಿ : ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತಾ?

 

(ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News