Fatty liver: ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದ ಯಕೃತ್ತಿನ ಸಂಬಂಧಿತ ಸಮಸ್ಯೆಗಳು ವೇಗವಾಗಿ ಹೆಚ್ಚಾಗುತ್ತಿವೆ.. ಅವುಗಳಲ್ಲಿ ಒಂದು ಫ್ಯಾಟಿ ಲಿವರ್ ಸಮಸ್ಯೆ. ಲಿವರ್ ನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾದಾಗ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುತ್ತದೆ. ಫ್ಯಾಟಿ ಲಿವರ್ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇದು ಲಿವರ್ ಫೈಬ್ರೋಸಿಸ್, ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು.
ಅನೇಕ ಜನರು ಫ್ಯಾಟಿ ಲಿವರ್ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಇದು ಅವರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಫ್ಯಾಟಿ ಲಿವರ್ ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಅದು ಗಂಭೀರವಾಗಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳ ಪ್ರಕಾರ, ಈ ರೋಗಲಕ್ಷಣಗಳಿಂದ ನೀವು ಮನೆಯಲ್ಲಿಯೇ ಫ್ಯಾಟಿ ಲಿವರ್ ಬಗ್ಗೆ ತಿಳಿದುಕೊಳ್ಳಬಹುದು. ಫ್ಯಾಟಿ ಲಿವರ್ ಲಕ್ಷಣಗಳನ್ನು ತಿಳಿಯೋಣ.
ಹೊಕ್ಕುಳಿನ ಬಳಿ ಕೊಬ್ಬಿನ ಶೇಖರಣೆ: ಹೊಟ್ಟೆಯ ಮಧ್ಯದಲ್ಲಿ ಕೊಬ್ಬಿನ ದೊಡ್ಡ ಶೇಖರಣೆ ಆಗುತ್ತಿದ್ದರೆ ಅದು ಫ್ಯಾಟಿ ಲಿವರ್ ಲಕ್ಷಣವಾಗಿದೆ. ಇನ್ಸುಲಿನ್ ಪ್ರತಿರೋಧದಿಂದಾಗಿ ಹೊಟ್ಟೆಯ ಮಧ್ಯದಲ್ಲಿ ಕಪ್ಪು ಗೆರೆಗಳು ಸಹ ಫ್ಯಾಟಿ ಲಿವರ್ ಸಮಯದಲ್ಲಿ ರೂಪುಗೊಳ್ಳುತ್ತವೆ.
ಇದನ್ನೂ ಓದಿ: ನಿಂಬೆ ರಸಕ್ಕೆ ಈ ಪುಡಿ ಬೆರೆಸಿ ಹಲ್ಲುಜ್ಜಿದ್ರೆ ಸಾಕು ಹಳದಿಗಟ್ಟಿರುವ ಹಲ್ಲು ಫಳಫಳ ಹೊಳೆಯೋದು ಫಿಕ್ಸ್!
ಆಲಸ್ಯ: ನೀವು ದೀರ್ಘಕಾಲದವರೆಗೆ ಆಯಾಸ ಅನುಭವಿಸುತ್ತಿದ್ದರೆ ಅದು ಫ್ಯಾಟಿ ಲಿವರ್ ಸಂಕೇತವಾಗಿರಬಹುದು. ಯಕೃತ್ತು ಪೋಷಕಾಂಶಗಳನ್ನು ಸಂಸ್ಕರಿಸುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಫ್ಯಾಟಿ ಲಿವರ್ ಉಂಟಾದಾಗ ದೇಹದಲ್ಲಿ ಟಾಕ್ಸಿನ್‌ಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಆಯಾಸ ಹೆಚ್ಚಾಗುತ್ತದೆ.
ಬಲ ಪಕ್ಕೆಲುಬಿನ ನೋವು: ಬಲ ಪಕ್ಕೆಲುಬಿನ ಕೆಳಭಾಗದಲ್ಲಿ ಅಸಹನೀಯ ನೋವು ಅಥವಾ ಅಸ್ವಸ್ಥತೆ ಉಂಟಾಗುತ್ತಿದ್ದರೆ ಎಚ್ಚರವಹಿಸಿ. ಫ್ಯಾಟಿ ಲಿವರ್ ಲಕ್ಷಣವಾಗಿದೆ. ಬಲ ಪಕ್ಕೆಲುಬಿನ ನೋವನ್ನು ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯರ ಬಳಿ ಹೋಗಿ.
ಚರ್ಮದ ಸಮಸ್ಯೆಗಳು: ಫ್ಯಾಟಿ ಲಿವರ್ ಸಮಯದಲ್ಲಿ ಚರ್ಮದ ಆರೋಗ್ಯವೂ ಹದಗೆಡುತ್ತದೆ. ಇದರ ಜೊತೆಗೆ ಕೂದಲು ಉದುರುವ ಸಮಸ್ಯೆ ಕೂಡ ಕಾಣಬಹುದು. ಮುಖದ ಮೇಲೆ ಮೊಡವೆ, ಕಪ್ಪು ಕಲೆ ಫ್ಯಾಟಿ ಲಿವರ್ ಲಕ್ಷಣಗಳಾಗಿವೆ.
ವಾಕರಿಕೆ : ವಾಕರಿಕೆ ಮತ್ತು ಹಸಿವಿನ ಕೊರತೆ ಫ್ಯಾಟಿ ಲಿವರ್ ಲಕ್ಷಣಗಳಾಗಿರಬಹುದು. ಈ ರೋಗಲಕ್ಷಣಗಳನ್ನು ನೀವು ಗಮನಿಸಿದರೆ ತಕ್ಷಣ ವೈದ್ಯರ ಬಳಿಗೆ ಹೋಗಿ. ಫ್ಯಾಟಿ ಲಿವರ್ ಉಂಟಾದಾಗ ಹಸಿವು ಆಗುವುದಿಲ್ಲ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಇದನ್ನೂ ಓದಿ: ತುಳಸಿ ಕಷಾಯದ ಈ ಪ್ರಯೋಜನಗಳನ್ನು ತಿಳಿಯಿರಿ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.