ನವದೆಹಲಿ: Facial Exercise - ವಯಸ್ಸು ಹೆಚ್ಚಾದಂತೆ, ವಯಸ್ಸಾಗುವಿಕೆಯ ಲಕ್ಷಣಗಳು (Ageing Signs) ಮುಖದ ಮೇಲೆ ಕಾಣಿಸಿಕೊಳ್ಳಲಾರಂಭಿಸುತ್ತವೆ ಮತ್ತು ಹೆಚ್ಚಿನ ಜನರು ಇದನ್ನು ನಿವಾರಿಸಲು ಅನೇಕ ರೀತಿಯ ತ್ವಚೆ ಉತ್ಪನ್ನಗಳನ್ನು ಬಳಸುತ್ತಾರೆ. ವಯಸ್ಸಾದ ಕಾರಣ, ಮುಖದ ಮೇಲೆ ಸುಕ್ಕುಗಳು (Wrinkles) ಮತ್ತು ಸೂಕ್ಷ್ಮ ಗೆರೆಗಳು (Fine Lines) ಕಾಣಿಸಿಕೊಳ್ಳಲಾರಂಭಿಸುತ್ತವೆ. ಇವುಗಳನ್ನು ಹೇಗೆ ನಿವಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನಾವು ನಿಮಗೆ ಹೇಳುವ ವಿಧಾನವು ಮುಖಕ್ಕೆ ಯೋಗದ ರೀತಿ ಕೆಲಸ ಮಾಡುತ್ತವೆ. ಇದರಲ್ಲಿ ಕೆಲವು ಅಕ್ಷರಗಳನ್ನು ಮಾತನಾಡುವ ಮೂಲಕ ಚರ್ಮದ ಸಮಸ್ಯೆಗಳನ್ನು (Skin Problems) ತೆಗೆದುಹಾಕುತ್ತದೆ ಮತ್ತು ಮುಖದ ಮೇಲೆ ಹೊಳಪನ್ನು ಬರುತ್ತದೆ. ತಜ್ಞರ ಪ್ರಕಾರ, ಮುಖದ ಯೋಗವನ್ನು ಮಾಡುವಾಗ, ಸ್ನಾಯುಗಳಲ್ಲಿ ಒತ್ತಡವಿರುತ್ತದೆ, ಇದು ಒತ್ತಡವನ್ನು ತೆಗೆದುಹಾಕುತ್ತದೆ, ಜೊತೆಗೆ ಮುಖದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
10 ರಿಂದ 15 ನಿಮಿಷಗಳವರೆಗೆ ಮಾಡಿ ಮುಖದ ಯೋಗಾಸನ
ಮುಖದ ಯೋಗಕ್ಕಾಗಿ, ನೀವು ಕೇವಲ 10 ರಿಂದ 15 ನಿಮಿಷಗಳನ್ನು ನೀಡಬೇಕು. ತಜ್ಞರ ಪ್ರಕಾರ, ಮುಖದ ಸ್ನಾಯುಗಳನ್ನು ಟೋನ್ ಮಾಡಲು ಮುಖದ ಯೋಗ ಅಥವಾ ವ್ಯಾಯಾಮವು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಕೊಲೆಜನ್ ಉತ್ಪತ್ತಿಗೆ ಸಹಕಾರಿ
ಮುಖದ ಯೋಗಾಸನ ಕೆಲವು ಅಕ್ಷರಗಳನ್ನು ಉಚ್ಚಾರಣೆಯನ್ನು ಒಳಗೊಂಡಿರುತ್ತದೆ, ತನ್ಮೂಲಕ ನಿಮ್ಮ ಚರ್ಮವು ಪ್ರಯೋಜನವನ್ನು ಪಡೆಯುತ್ತದೆ. ಈ ಅಕ್ಷರಗಳನ್ನು ಮಾತನಾಡುವುದರಿಂದ ಮುಖದ ಸ್ನಾಯುಗಳಲ್ಲಿ ಹಿಗ್ಗುವಿಕೆ ಉಂಟಾಗುತ್ತದೆ, ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದರಿಂದ ಚರ್ಮಕ್ಕೆ ಸಾಕಷ್ಟು ಆಮ್ಲಜನಕವನ್ನು ಸಿಕ್ಕಾಗ, ಅದು ಸುಕ್ಕುಗಳನ್ನು ನಿವಾರಿಸುತ್ತದೆ. ಇದು ಚರ್ಮಕ್ಕೆ ಅಗತ್ಯವಾದ ಕೊಲೆಜನ್ ಉತ್ಪತ್ತಿಗೆ ಸಹಕಾರಿಯಾಗಿದೆ.
ಈ ಅಕ್ಷರಗಳನ್ನು ಹೇಳುವುದರಿಂದ ಲಾಭ ಸಿಗಲಿದೆ
>> ನಿತ್ಯ ಸುಮಾರು 15 ರಿಂದ 20 ಬಾರಿ ಆ, ಊ ಅಕ್ಷರಗಳನ್ನು ಒಟ್ಟಿಗೆ ಸತತವಾಗಿ ಉಚ್ಚರಿಸಿ.
>> ಈ ಹಾಗೂ ಊ ಅಕ್ಷರಗಳನ್ನು ಕೂಡ ಒಟ್ಟಿಗೆ ಉಚ್ಚರಿಸುವುದರಿಂದ ಮುಖದ ತ್ವಚೆಗೆ ಲಾಭ ಸಿಗುತ್ತದೆ.
>> ಆಂಗ್ಲ ಭಾಷೆಯ ಮೂರು ಅಲ್ಫಾಬೆಟ್ ಗಳಾಗಿರುವ O, E, X ಗಳನ್ನು ಕೂಡ ಫೆಸಿಯಲ್ ಯೋಗಾದಲ್ಲಿ ಸೇರಿಸುವುದರಿಂದ ಕೂಡ ತ್ವಚೆಗೆ ಲಾಭ ಸಿಗಲಿದೆ. ಈ ಅಲ್ಫಾಬೆಟ್ ಗಳನ್ನು ಪದೇ ಪದೇ 5 ನಿಮಿಷಗಳವರೆಗೆ ಹೇಳಿ.
>> ಈ ಅಲ್ಫಾಬೆಟ್ ಗಳನ್ನು ಪದೇ ಪದೇ ಹೇಳುವುದರಿಂದ ಜಾ ಲೈನ್, ಕುತ್ತಿಗೆ, ಗಂಟಲು ಭಾಗದ ಸ್ನಾಯುಗಳಲ್ಲಿ ಸೆಳೆತ ಉತ್ಪತ್ತಿಯಾಗುತ್ತದೆ ಮತ್ತು ತ್ವಚೆಗೆ ಅದರ ಲಾಭ ಸಿಗುತ್ತದೆ.
ಇದನ್ನೂ ಓದಿ-Benefits of Anjeer: ತೂಕ ಇಳಿಕೆಗೆ ತುಂಬಾ ಪರಿಣಾಮಕಾರಿಯಾಗಿದೆ ಅಂಜೂರ , ಈ ರೀತಿ ಸೇವಿಸಿ ಲಾಭ ನೋಡಿ
(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ನಂಬಿಕೆಗಳು ಹಾಗೂ ಮಾಹಿತಿಗಳನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವುದಕ್ಕು ಮುನ್ನ ವೈದ್ಯರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)