ಅತಿಯಾಗಿ ಉಪ್ಪು ತಿಂದರೂ ಟೈಪ್ 2 ಡಯಾಬಿಟಿಸ್ ಬರುತ್ತೆ..! ಎಚ್ಚರಿಕೆಯಿಂದಿರಿ 

Salt side effect : ಇತ್ತೀಚಿನ ಅಧ್ಯಯನಗಳು ಉಪ್ಪಿನ ಅತಿಯಾದ ಸೇವನೆಯು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಹೇಳುತ್ತಿವೆ. ಇದಲ್ಲದೆ, ಇದರಿಂದ ಕೆಲವರಿಗೆ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಸಹ ಬರುತ್ತವೆ ಎಂದು ತಿಳಿಸಿವೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..  

Written by - Krishna N K | Last Updated : Nov 4, 2023, 06:20 PM IST
  • ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ಹಾನಿಕರ
  • ಟೈಪ್‌ 2 ಡಯಾಬಿಟಿಸ್‌ಗೆ ಕಾರಣವಾಗಬಹುದು
  • ಅಧಿಕ ರಕ್ತದೊತ್ತಡಕ್ಕೂ ಸಹ ಕಾರಣವಾಗುತ್ತದೆ
ಅತಿಯಾಗಿ ಉಪ್ಪು ತಿಂದರೂ ಟೈಪ್ 2 ಡಯಾಬಿಟಿಸ್ ಬರುತ್ತೆ..! ಎಚ್ಚರಿಕೆಯಿಂದಿರಿ  title=

Type 2 Diabetes : ಉಪ್ಪು ಇಲ್ಲದ ಆಹಾರವನ್ನು ತಿನ್ನುವುದು ತುಂಬಾ ಕಷ್ಟ. ಖಾದ್ಯಗಳ ರುಚಿಯನ್ನು ದ್ವಿಗುಣಗೊಳಿಸುವಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಸೋಡಿಯಂ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ಎಂಬುವುದು ಎಲ್ಲಿರಿಗೂ ತಿಳಿದಿದೆ. ಆದರೆ ಉಪ್ಪನ್ನು ಅತಿಯಾಗಿ ಸೇವಿಸಿದರೆ. ದೀರ್ಘಕಾಲದ ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಕ್ಕರೆಯೊಂದಿಗೆ ಉಪ್ಪು ತುಂಬಾ ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. 

ಹೌದು.. ಅತಿಯಾದ ಉಪ್ಪು ಸೇವನೆಯು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಇತ್ತೀಚಿನ ಅಧ್ಯಯನದ ಪ್ರಕಾರ, ಪ್ರತಿದಿನ ಟೇಬಲ್ ಉಪ್ಪನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.  ವಿಶ್ವವಿದ್ಯಾನಿಲಯದ ಹೊಸ ಅಧ್ಯಯನವು ಪ್ರತಿದಿನ ಆಹಾರದಲ್ಲಿ ಹೆಚ್ಚುವರಿ ಉಪ್ಪನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು ಎಂದು ಕಂಡುಹಿಡಿದಿದೆ.

ಇದನ್ನೂ ಓದಿ:Health Tips: ಚಳಿಗಾಲದಲ್ಲಿ ತಾಜಾ ಹಸಿರು ಬಟಾಣಿಗಳನ್ನು ಏಕೆ ತಿನ್ನಬೇಕು ಗೊತ್ತಾ?

ಈ ಅಧ್ಯಯನವು ಬ್ರಿಟನ್‌ನಲ್ಲಿ 400,000 ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗೆ ಒಳಪಡಿಸಿತು. ಈ ಸಮೀಕ್ಷೆಯ ಭಾಗವಾಗಿ, ಪ್ರತಿದಿನ ಉಪ್ಪು ಸೇವಿಸುವವರಿಗೆ ಮಧುಮೇಹವು ಸುಲಭವಾಗಿ ಬಾಧಿಸುತ್ತದೆ ಎಂದು ಕಂಡುಬಂದಿದೆ. ಉಪ್ಪಿನ ಮೇಲಿನ ಸಮೀಕ್ಷೆಯನ್ನು ಮಾಯೊ ಕ್ಲಿನಿಕ್ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ಸಂಕ್ಷಿಪ್ತವಾಗಿ ಪ್ರಕಟಿಸಲಾಗಿದೆ.

ಉಪ್ಪು ಮಧುಮೇಹಕ್ಕೆ ಹೇಗೆ ಕಾರಣವಾಗುತ್ತದೆ..? : ಪ್ರತಿದಿನ ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹ ಬರುತ್ತದೆ. ಆದ್ರೆ ಇದು ಹೇಗೆ ಸಾಧ್ಯ ಎಂಬುದನ್ನು ಅಧ್ಯಯನವು ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. ಸಂಶೋಧಕರ ಪ್ರಕಾರ, ಹೆಚ್ಚು ಉಪ್ಪು ಸೇವನೆಯಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳು ಉಂಟಾಗುತ್ತವೆ ಎನ್ನಲಾಗಿದೆ. ಈ ಉಪ್ಪಿನಿಂದಾಗಿ ಅನೇಕ ಜನರು ಊತ ಸಮಸ್ಯೆ ಮತ್ತು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. 

ಇದನ್ನೂ ಓದಿ:ಮಧುಮೇಹಕ್ಕೆ ರಾಮಬಾಣ ಈ 3 ಗಿಡಗಳು, ಶುಗರ್‌ ಲೆವಲ್‌ ಹೆಚ್ಚಾಗೋದೇ ಇಲ್ಲ!

ಹೆಚ್ಚಿನ ಉಪ್ಪಿನ ಸೇವನೆ ಬೇಡ : ಉಪ್ಪಿನಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸೋಡಿಯಂ ಹೆಚ್ಚಿರುವ ಉಪ್ಪನ್ನು ಹೊರತುಪಡಿಸಿ ಇತರ ಉತ್ಪನ್ನಗಳನ್ನು ಖಂಡಿತವಾಗಿ ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಅದಲ್ಲದೆ, ಉಪ್ಪಿಗೆ ಪರ್ಯಾಯವಾಗಿ ನಿಂಬೆ ಉಪ್ಪನ್ನು ಬಳಸುವುದು ತುಂಬಾ ಒಳ್ಳೆಯದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News