ಚಳಿಗಾಲದಲ್ಲಿ ಕೆಂಪು ತರಕಾರಿ ತಿಂದರೆ ಸಿಗುತ್ತೆ ಈ ಲಾಭ...!

ಹಸಿರು ತರಕಾರಿಗಳಂತೆಯೇ, ಕೆಂಪು ತರಕಾರಿಗಳಲ್ಲೂ ಅನೇಕ ಪೋಷಕಾಂಶಗಳಿವೆ.

Last Updated : Nov 30, 2019, 02:19 PM IST
ಚಳಿಗಾಲದಲ್ಲಿ ಕೆಂಪು ತರಕಾರಿ ತಿಂದರೆ ಸಿಗುತ್ತೆ ಈ ಲಾಭ...! title=
Photo courtesy: India.com

ಬೆಂಗಳೂರು: ಚಳಿಗಾಲದ ಆರಂಭವಾಗುತ್ತಿದ್ದಂತೆ ಹಸಿರು ತರಕಾರಿಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಫಿಟ್ ಆಗಿ ಉಳಿಯಲು ಹಸಿರು ತರಕಾರಿಗಳನ್ನು ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಏಕೆಂದರೆ ಹಸಿರು ತರಕಾರಿಗಳಲ್ಲಿ, ಹಿಮೋಗ್ಲೋಬಿನ್ ಮತ್ತು ಕಬ್ಬಿಣವು ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಅದೇ ರೀತಿ ಹೆಚ್ಚಿನ ವೈದ್ಯರು ಚಳಿಗಾಲದಲ್ಲಿ ಕೆಂಪು ತರಕಾರಿಗಳನ್ನು ತಿನ್ನಲು ಸಹ ಶಿಫಾರಸು ಮಾಡುತ್ತಾರೆ. ಚಳಿಗಾಲದಲ್ಲಿ ಕೆಂಪು ತರಕಾರಿಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುತ್ತದೆ. ಹಸಿರು ತರಕಾರಿಗಳಂತೆ, ಅವು ಅನೇಕ ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತವೆ. ಈ ರೀತಿಯ ಕೆಂಪು ತರಕಾರಿಗಳಿಂದ ಅನೇಕ ಪ್ರಯೋಜನಗಳಿವೆ, ಆದರೆ ಇದರ ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ದೇಹವನ್ನು ಸದೃಢವಾಗಿರಿಸುತ್ತದೆ ಮತ್ತು ಅದರ ಸೇವನೆಯಿಂದ ಚರ್ಮವು ಹೊಳೆಯುತ್ತದೆ. ಕೆಂಪು ತರಕಾರಿಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಕೆಂಪು ತರಕಾರಿಗಳಲ್ಲಿ ಆಂಟಿಆಕ್ಸಿಡೆಂಟ್‌ ಪ್ರಮಾಣ ಹೆಚ್ಚು:
ಹಸಿರು ತರಕಾರಿಗಳಂತೆ, ವೈದ್ಯರು ಮತ್ತು ಆಹಾರ ತಜ್ಞರು ಕೆಂಪು ತರಕಾರಿಗಳನ್ನು ದೇಹಕ್ಕೆ ತುಂಬಾ ಮುಖ್ಯವೆಂದು ಪರಿಗಣಿಸುತ್ತಾರೆ. ಕೆಂಪು ತರಕಾರಿಗಳು ಚಳಿಗಾಲದಲ್ಲಿ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳು ಕೆಂಪು ತರಕಾರಿಗಳಲ್ಲಿ ಕಂಡುಬರುತ್ತವೆ. ಇದು ನಮ್ಮ ದೇಹವನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ. ಇದಲ್ಲದೆ ಕೆಂಪು ತರಕಾರಿಗಳನ್ನು ತಿನ್ನುವುದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ತುಂಬಾ ಬಲವಾಗಿರುತ್ತದೆ.

ಕೆಂಪು ಬಣ್ಣದ ತರಕಾರಿಗಳಲ್ಲಿ ಖನಿಜಗಳು ಮತ್ತು ಜೀವಸತ್ವಗಳ ಪ್ರಮಾಣ ಅಧಿಕ:
ಕೆಂಪು ತರಕಾರಿಗಳಲ್ಲಿ ಖನಿಜಗಳು ಮತ್ತು ಜೀವಸತ್ವಗಳ ಪ್ರಮಾಣವೂ ಅಧಿಕವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೆಚ್ಚಿನ ಮಟ್ಟದ ಲೈಕೋಪೀನ್ ಮತ್ತು ಆಂಥೋಸಯಾನಿನ್‌ಗಳಿಂದಾಗಿ, ಹೃದಯ ಕಾಯಿಲೆಗಳ ವಿರುದ್ಧ ಹೋರಾಡುವಲ್ಲಿ ದೇಹವು ಶಕ್ತಿಯನ್ನು ಪಡೆಯುತ್ತದೆ.

ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ: 
ಗಾಢ ಬಣ್ಣದ ತರಕಾರಿಗಳನ್ನು ತಿನ್ನುವುದು ಮಹಿಳೆಯರಿಗೆ ಅನೇಕ ರೋಗಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಅವುಗಳಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್‌ ಅಂಶ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಮಹಿಳೆಯರಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸುತ್ತದೆ.

ಇವು ನಮಗೆ ನಿತ್ಯ ಸುಲಭವಾಗಿ ಸಿಗುವ ಕೆಂಪು ತರಕಾರಿಗಳು- ಕ್ಯಾರೆಟ್, ಬೀಟ್ರೂಟ್, ದಾಳಿಂಬೆ, ಟೊಮ್ಯಾಟೊ. ಬೀಟ್ರೂಟ್ ತಿನ್ನುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಕ್ಯಾರೆಟ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳಾದ ಲೈಕೋಪೀನ್, ಮ್ಯಾಂಗನೀಸ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು, ರಂಜಕ ಇದ್ದು ದೇಹವನ್ನು ಬಲಪಡಿಸುತ್ತದೆ.

Trending News