ಹಾಲಿನೊಂದಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಸಿಗುತ್ತೆ ಹಲವು ಅದ್ಭುತ ಪ್ರಯೋಜನ

ಹಾಲು-ತುಪ್ಪ ಸೇವನೆಯ ಪ್ರಯೋಜನಗಳು: ಹಾಲು ಒಂದು ಸಂಪೂರ್ಣ ಆಹಾರ. ಇದಲ್ಲದೆ ತುಪ್ಪವೂ ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಲು ಮತ್ತು ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಆದ್ದರಿಂದ, ಇವೆರಡನ್ನು ಒಟ್ಟಿಗೆ ಸೇವಿಸಿದರೆ ಹಲವಾರು ಪ್ರಯೋಜನಗಳಿವೆ. 

Written by - Yashaswini V | Last Updated : Sep 7, 2022, 11:51 AM IST
  • ತುಪ್ಪದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಕೆ ನಂತಹ ಪೋಷಕಾಂಶಗಳು, ಪ್ರೋಟೀನ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳು ಹೇರಳವಾಗಿ ಕಂಡುಬರುತ್ತವೆ.
  • ಹಾಲಿನಲ್ಲಿ ವಿಟಮಿನ್ ಡಿ, ಪ್ರೋಟೀನ್, ಕ್ಯಾಲ್ಸಿಯಂ ಸಮೃದ್ಧವಾಗಿದೆ.
  • ಹಾಗಾಗಿ, ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಹಲವು ರೋಗಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ.
ಹಾಲಿನೊಂದಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಸಿಗುತ್ತೆ ಹಲವು ಅದ್ಭುತ ಪ್ರಯೋಜನ  title=
Milk with ghee Benefits

ಹಾಲಿನೊಂದಿಗೆ ತುಪ್ಪ ಸೇವನೆ ಪ್ರಯೋಜನಗಳು:  ಹಾಲು ಒಂದು ಸಂಪೂರ್ಣ ಆಹಾರ. ಇದಲ್ಲದೆ ತುಪ್ಪವೂ ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಲು ಮತ್ತು ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಹಾಲು ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹಾಲು ಮತ್ತು ತುಪ್ಪ ಅನೇಕ ಪೌಷ್ಟಿಕಾಂಶದ ಗುಣಗಳಿಂದ ಕೂಡಿದೆ. ಆದರೆ ಇದನ್ನು ಹಾಲಿಗೆ ತುಪ್ಪ ಸೇರಿಸಿ ಸೇವಿಸಿದಾಗ ಇದರ ಲಾಭ ದುಪ್ಪಟ್ಟಾಗುತ್ತದೆ. 

ತುಪ್ಪದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಕೆ ನಂತಹ ಪೋಷಕಾಂಶಗಳು, ಪ್ರೋಟೀನ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳು  ಹೇರಳವಾಗಿ ಕಂಡುಬರುತ್ತವೆ. ಹಾಲಿನಲ್ಲಿ ವಿಟಮಿನ್ ಡಿ, ಪ್ರೋಟೀನ್, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹಾಗಾಗಿ, ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಹಲವು ರೋಗಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ.

ಹಾಲಿನೊಂದಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನಗಳು:
ಉತ್ತಮ ನಿದ್ರೆ:

ತುಪ್ಪವು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮೈಂಡ್ ಅನ್ನು ರಿಫ್ರೆಶ್ ಮಾಡುತ್ತದೆ. ಇದನ್ನು ಒಂದು ಬಟ್ಟಲು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಸೇವಿಸಿದರೆ ನರಗಳು ಶಾಂತವಾಗಿ, ಸೇವಿಸುವ ವ್ಯಕ್ತಿಗೆ ಒಳ್ಳೆಯ ನಿದ್ದೆ ಬರುತ್ತದೆ.  ಹಾಗಾಗಿ ನಿದ್ರಾಹೀನತೆ ಸಮಸ್ಯೆ ಇರುವವರಿಗೆ ಇದು ಉತ್ತಮ ಮನೆಮದ್ದಾಗಿದೆ.

ಇದನ್ನೂ ಓದಿ- ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ ಪತ್ತೆ

ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರುತ್ತದೆ:
ಹಾಲಿನೊಂದಿಗೆ ತುಪ್ಪ ಬೆರೆಸಿ ಸೇವಿಸಿದಾಗ  ದೇಹದೊಳಗಿನ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಮೂಲಕ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಿಣ್ವಗಳು ಸಂಕೀರ್ಣ ಆಹಾರಗಳನ್ನು ಸರಳ ಆಹಾರಗಳಾಗಿ ಒಡೆಯುತ್ತವೆ, ಇದು ದೇಹದಲ್ಲಿ ಉತ್ತಮ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ. 

ಕೀಲು ನೋವಿಗೆ ಪರಿಹಾರ:
ಕೀಲು ನೋವಿನ ಸಮಸ್ಯೆ ಇರುವವರು ನಿಯಮಿತವಾಗಿ ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಕೀಲು ನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ ಮತ್ತು ತುಪ್ಪದಲ್ಲಿ ವಿಟಮಿನ್ ಕೆ 2 ಪ್ರಮಾಣವು ಉತ್ತಮವಾಗಿದೆ. ಈ ಜೀವಸತ್ವಗಳು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ಹಾಲಿಗೆ ತುಪ್ಪ ಬೆರೆಸಿ ಕುಡಿದರೆ ಕೀಲುನೋವು ನಿವಾರಣೆಯಾಗುತ್ತದೆ.

ಇದನ್ನೂ ಓದಿ- ಈ ವಿಟಮಿನ್ಗಳ ಕೊರತೆಯಿಂದ ದುರ್ಬಲಗೊಳ್ಳುತ್ತೆ ಮೂಳೆಗಳು

ಕಾಂತಿಯುತ ತ್ವಚೆ:
ತುಪ್ಪ ಮತ್ತು ಹಾಲು ಎರಡೂ ನೈಸರ್ಗಿಕ ಆರ್ಧ್ರಕಗಳಾಗಿವೆ, ಇದರ ಹೊರತಾಗಿ, ತುಪ್ಪವು ಒಳಗಿನಿಂದ ಹೊರಗಿನ ಚರ್ಮವನ್ನು ಸುಧಾರಿಸುತ್ತದೆ. ಪ್ರತಿದಿನ ಸಂಜೆ ಹಾಲು ಮತ್ತು ತುಪ್ಪವನ್ನು ಕುಡಿಯುವುದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.

ಚಯಾಪಚಯ:
ಮಲಗುವ ವೇಳೆ ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡಲು ಸಹ ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೇ ಹಾಲು ಮತ್ತು ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News