ಬೆಂಗಳೂರು : ಮುಂಜಾನೆ ಕಣ್ಣು ಬಿಟ್ಟ ತಕ್ಷಣ ಕೆಲವರಿಗೆ ಚಹಾ ಬೇಕು. ಒಂದು ಕಪ್ ಚಹಾ ದೇಹ ಸೇರಿದ ನಂತರವೇ ಕೆಲಸ ಮಾಡಲು ಉಲ್ಲಾಸ ಉತ್ಸಾಹ ಹುಟ್ಟಿಕೊಳ್ಳುವುದು. ಸಾಮಾನ್ಯವಾಗಿ ಚಹಾ ಪ್ರಿಯರು ಚಹಾದೊಂದಿಗೆ ಬಿಸ್ಕತ್ತುಗಳು, ಪಕೋಡಾಗಳು, ನಮ್ಕೀನ್ ಗಳನ್ನು ಸೇವಿಸುತ್ತಾರೆ. ಚಹಾದೊಂದಿಗೆ ಇವುಗಳನ್ನು ಸೇವಿಸುವ ಮೂಲಕ ಬಾಯಿ ರುಚಿ ಹೆಚ್ಚಾಗುತ್ತದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಈ ಮೂಲಕ ನಮ್ಮ ಆರೋಗ್ಯದೊಂದಿಗೆ ನಾವು ಆಟ ಆಡುತ್ತಿದ್ದೇವೆ ಎನ್ನುವುದು ನಮಗೆ ಅರಿವಿಲ್ಲದ ಸತ್ಯ. ಹೀಗೆ ಚಹಾದೊಂದಿಗೆ ಸೇವಿಸುವ ಬಿಸ್ಕತ್ತುಗಳು, ಪಕೋಡಾಗಳು, ನಮ್ಕೀನ್ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಪೌಷ್ಕಿಕ ತಜ್ಞರ ಪ್ರಕಾರ ಚಹಾದೊಂದಿಗೆ ಕೆಲವು ಆಹಾರಗಳನ್ನು ಸೇವಿಸಬಾರದು. ಹಾಗಿದ್ದರೆ ಆ ಆಹಾರಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ.
ಚಹಾದೊಂದಿಗೆ ಏನನ್ನು ತಿನ್ನಬಾರದು? :
ಬೀಜಗಳು :
ಡ್ರೈ ಫ್ರುಟ್ಸ್ ಗಳನ್ನು ಚಹಾದೊಂದಿಗೆ ಎಂದಿಗೂ ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಚಹಾದಲ್ಲಿ ಟ್ಯಾನಿನ್ ಇರುತ್ತದೆ. ಈ ಟ್ಯಾನಿನ್ಗಳು ಆಹಾರದಿಂದ ಕಬ್ಬಿಣ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದರಿಂದಾಗಿ ದೇಹಕ್ಕೆ ಪೋಷಕಾಂಶಗಳು ಪೂರೈಕೆಯಾಗುವುದಿಲ್ಲ. ಡ್ರೈ ಫ್ರುಟ್ಸ್ ಗಳು ಕಬ್ಬಿಣದಲ್ಲಿ ಸಮೃದ್ಧವಾಗಿರುತ್ತವೆ. ಆದ್ದರಿಂದ, ಚಹಾದೊಂದಿಗೆ ಬೀಜಗಳ ಸೇವನೆಯನ್ನು ತಪ್ಪಿಸಬೇಕು. ಒಂದು ವೇಳೆ ಡ್ರೈ ಫ್ರುಟ್ಸ್ ಗಳನ್ನು ಚಹಾದೊಂದಿಗೆ ಸೇವಿಸಿದರೆ ಅದು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ : ಕೇವಲ ಗೋಧಿ ಚಪಾತಿ ತಿಂದರೆ ಸಣ್ಣಗಾಗುವುದಿಲ್ಲ! ಗೋಧಿ ಜೊತೆಗೆ ಈ ಹಿಟ್ಟನ್ನೂ ಬೆರೆಸಿ
ಹಸಿರು ತರಕಾರಿಗಳು :
ತಜ್ಞರ ಪ್ರಕಾರ, ಚಹಾದೊಂದಿಗೆ ಹಸಿರು ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಹಸಿರು ತರಕಾರಿಗಳು ಕಬ್ಬಿಣದ ಅಂಶದಲ್ಲಿ ಸಮೃದ್ಧವಾಗಿವೆ. ಚಹಾವು ಟ್ಯಾನಿನ್ಗಳನ್ನು ಹೊಂದಿರುತ್ತದೆ, ಇದು ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಅನೇಕ ಜನರು ಬ್ರೆಡ್ ಮತ್ತು ತರಕಾರಿಗಳೊಂದಿಗೆ ಚಹಾವನ್ನು ಸೇವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಆ ಆಹಾರದಲ್ಲಿನ ಪೋಷಕಾಂಶಗಳು ದೇಹ ಸೇರುವುದೇ ಇಲ್ಲ.
ಅರಿಶಿನ :
ಅರಿಶಿನದಿಂದ ತಯಾರಿಸಿದ ಆಹಾರದೊಂದಿಗೆ ಚಹಾವನ್ನು ಕುಡಿಯುವುದನ್ನು ತಪ್ಪಿಸಬೇಕು. ಅರಿಶಿನ ಮತ್ತು ಚಹಾದಲ್ಲಿರುವ ಟ್ಯಾನಿನ್ಗಳು ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಅಸಿಡಿಟಿ ಮತ್ತು ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ : ತುಪ್ಪವನ್ನು ದೇಹದ ಈ ಭಾಗಕ್ಕೆ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ!
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ