Food to Avoid Before Sleeping: ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಲೇ ಬಾರದು

Food to Avoid Before Sleeping: ಸಾಮಾನ್ಯವಾಗಿ ಉತ್ತಮ ನಿದ್ರೆಗಾಗಿ ಯಾವ ಆಹಾರಗಳನ್ನು ಸೇವಿಸಬೇಕು ಎಂಬ ಬಗ್ಗೆ ನೀವು ಕೇಳಿರಬಹುದು. ಆದರೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ನಿದ್ರೆಗೆ ತೊಂದರೆ ಆಗುತ್ತದೆ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Jul 14, 2021, 02:35 PM IST
  • ರಾತ್ರಿಯಲ್ಲಿ ನಿದ್ರೆ ಬರದಿರಲು ಹಲವು ಕಾರಣಗಳಿವೆ
  • ಸಾಮಾನ್ಯವಾಗಿ ರಾತ್ರಿ ಮಲಗುವ ಮೊದಲು ನಾವು ಸೇವಿಸುವ ಕೆಲವು ಆಹಾರಗಳು ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗಿವೆ
  • ರಾತ್ರಿಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಭರಿತ ಆಹಾರ ಸೇವನೆಯು ನಿದ್ರಾಹೀನತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ
Food to Avoid Before Sleeping: ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಲೇ ಬಾರದು title=
Food to Avoid Before Sleeping

Food to Avoid Before Sleeping: ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆದರೆ ನಮ್ಮಲ್ಲಿ ಹಲವರಿಗೆ ದಿನವಿಡೀ ಬಿಡುವಿಲ್ಲದ ಕೆಲಸದ ಹೊರತಾಗಿಯೂ ರಾತ್ರಿ ವೇಳೆ ನಿದ್ರೆ ಬರುವುದಿಲ್ಲ. ನಿದ್ರಾಹೀನತೆ ಸಮಸ್ಯೆಯಿಂದಾಗಿ ಮರುದಿನ ಉಲ್ಲಾಸದಿಂದ ಇರುವುದು ಕೂಡ ಕಷ್ಟವೇ. ಬಹುತೇಕ ಜನರಿಗೆ ಇದು ಒಂದೆರಡು ದಿನದ ಸಮಸ್ಯೆ ಅಲ್ಲ. ರಾತ್ರಿಯಲ್ಲಿ ನಿದ್ರೆ ಬರದಿರಲು ಹಲವು ಕಾರಣಗಳಿವೆ. ಇದರಲ್ಲಿ ನಿತ್ಯ ರಾತ್ರಿ ನಾವು ತೆಗೆದುಕೊಳ್ಳುವ ಆಹಾರವೂ ಒಂದು ಕಾರಣವಾಗಿರಬಹುದು. ಸಾಮಾನ್ಯವಾಗಿ ಉತ್ತಮ ನಿದ್ರೆಗಾಗಿ ಯಾವ ಆಹಾರಗಳನ್ನು ಸೇವಿಸಬೇಕು ಎಂಬ ಬಗ್ಗೆ ನೀವು ಕೇಳಿರಬಹುದು. ಆದರೆ ರಾತ್ರಿ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ನಿದ್ರೆಗೆ ತೊಂದರೆ ಆಗುತ್ತದೆ ಎಂದು ನಿಮಗೆ ತಿಳಿದಿದೆಯೇ?

ಹೌದು, ಸಾಮಾನ್ಯವಾಗಿ ರಾತ್ರಿ ಮಲಗುವ ಮೊದಲು ನಾವು ಸೇವಿಸುವ ಕೆಲವು ಆಹಾರಗಳು ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗಿವೆ. ಅದಕ್ಕಾಗಿ ರಾತ್ರಿ ವೇಳೆ ಯಾವ ಆಹಾರಗಳನ್ನು ಸೇವಿಸಬಾರದು (Food to Avoid Before Sleeping) ಎಂಬ ಬಗ್ಗೆ ತಿಳಿಯುವುದು ಬಹಳ ಮುಖ್ಯ.

ಇದನ್ನೂ ಓದಿ- Betel Leaf Benefits For Men: ವಿವಾಹಿತ ಪುರುಷರು ರಾತ್ರಿ ಮಲಗುವ ಮುನ್ನ ವಿಳ್ಳೆದೆಲೆ ಸೇವಿಸುವುದರಿಂದ ಸಿಗುತ್ತೆ ಈ ಲಾಭ

ಕಾರ್ಬೋಹೈಡ್ರೇಟ್ ಭರಿತ ಆಹಾರಗಳು- ರಾತ್ರಿಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಭರಿತ ಆಹಾರ ಸೇವನೆಯು ನಿದ್ರಾಹೀನತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಾತ್ರಿ ಭೋಜನದಲ್ಲಿ ಹೆಚ್ಚಿನ ಕೊಬ್ಬಿನ ಅಂಶವನ್ನು ಹೊಂದಿರುವ ಆಹಾರಗಳನ್ನು ಸೇವಿಸದಿರುವುದು ಉತ್ತಮ.

ಬೆಳ್ಳುಳ್ಳಿ- ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮ. ಆದರೆ ರಾತ್ರಿಯ ಸಮಯದಲ್ಲಿ ಬೆಳ್ಳುಳ್ಳಿಯನ್ನು (Garlic) ಸೇವಿಸಿದರೆ, ಅದು ನಿದ್ರೆಗೆ ತೊಂದರೆ ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಅದರರ್ಥ ರಾತ್ರಿಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸಲೇ ಬಾರದು ಎಂದಲ್ಲ. ಆದರೆ ಅದನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದು ಸರಿಯಾದ ಮಾರ್ಗವಾಗಿದೆ.

ಇದನ್ನೂ ಓದಿ- Curry Leaf Benefits: ಕರಿಬೇವಿನ ಎಲೆ ರಸ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ

ಚಾಕೊಲೇಟ್- ಚಾಕೊಲೇಟ್‌ನಲ್ಲಿ ಕೆಫೀನ್ ಅಧಿಕವಾಗಿದ್ದು ಅದು ನಿಮ್ಮ ಉತ್ತಮ ನಿದ್ರೆಗೆ ಭಂಗ ತರುತ್ತದೆ. ಆದ್ದರಿಂದ, ಮಲಗುವ ಮೊದಲು ಚಾಕೊಲೇಟ್‌ನಿಂದ ದೂರವಿರುವುದು ಒಳ್ಳೆಯದು.

ಟೀ-ಕಾಫಿ- ಕೆಲವರು ರಾತ್ರಿ ಊಟ ಆದ ಬಳಿಕ ಟೀ ಅಥವಾ ಕಾಫಿಯನ್ನು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಇದು ನಿಮ್ಮ ನಿದ್ರೆಗೆ ಸಮಸ್ಯೆ ಉಂಟುಮಾಡಬಹುದು.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News