Blue Tea: ನೀವು ನೀಲಿ ಚಹಾ ಎಂದಾದರೂ ಸೇವಿಸಿದ್ದೀರಾ? ಸ್ವಾದ-ಆರೋಗ್ಯ ಎರಡಕ್ಕೂ ಬೆಸ್ಟ್

Blue Tea Benefits: ಯಾರಾದರು ನಿಮಗೆ ಹಾಲಿನ ಚಹಾ ಅಥವಾ ಗ್ರೀನ್ ಟೀ ಬದಲಾಗಿ ನೀಲಿ ಚಹಾ ಕುಡಿಯಲು ಆಫರ್ ಮಾಡಿದರೆ, ಮೊದಲ ನೋಟದಲ್ಲಿ ನೀವು ಅದನ್ನು ಕುಡಿಯುವಿರಾ? ಬಹುಶಃ ಇಲ್ಲ. ಏಕೆಂದರೆ, ನೀವೂ ಕೂಡ ಇಂತಹ ಚಹಾ ಹಿಂದೆಂದು ನೋಡಿರಲಿಕ್ಕಿಲ್ಲ. ಹಾಗಾದರೆ ಬನ್ನಿ ಏನಿದು ನೀಲಿ ಚಹಾ ಮತ್ತು ಆರೋಗ್ಯಕ್ಕೆ ಅದರಿಂದಾಗುವ ಲಾಭಗಳೇನು ತಿಳಿದುಕೊಳ್ಳೋಣ,  

Written by - Nitin Tabib | Last Updated : Nov 25, 2022, 04:59 PM IST
  • ಭಾರತದಲ್ಲಿ ನೀರಿನ ಬಳಿಕ ಚಹಾ ಅತಿ ಹೆಚ್ಚು ಸೇವನೆಗೆ ಒಳಗಾಗುವ ಪಾನೀಯವಾಗಿದೆ.
  • ನೀವು ಹರ್ಬಲ್, ಗ್ರೀನ್ ಟೀ, ಬ್ಲ್ಯಾಕ್ ಟೀ ಮುಂತಾದ ಹಲವು ಬಗೆಯ ಜನಪ್ರಿಯ ಚಹಾಗಳನ್ನು ಸೇವಿಸಿರಬಹುದು.
  • ಆದರೆ, ನೀವು ಎಂದಾದರೂ ನೀಲಿ ಚಹಾವನ್ನು ಟ್ರೈ ಮಾಡಿದ್ದೀರಾ?
Blue Tea: ನೀವು ನೀಲಿ ಚಹಾ ಎಂದಾದರೂ ಸೇವಿಸಿದ್ದೀರಾ? ಸ್ವಾದ-ಆರೋಗ್ಯ ಎರಡಕ್ಕೂ ಬೆಸ್ಟ್  title=
Blue Tea Health Benefits

Blue Tea Health Benefits: ಭಾರತದಲ್ಲಿ ನೀರಿನ ಬಳಿಕ ಚಹಾ ಅತಿ ಹೆಚ್ಚು ಸೇವನೆಗೆ ಒಳಗಾಗುವ ಪಾನೀಯವಾಗಿದೆ. ನೀವು ಹರ್ಬಲ್, ಗ್ರೀನ್ ಟೀ, ಬ್ಲ್ಯಾಕ್ ಟೀ ಮುಂತಾದ ಹಲವು ಬಗೆಯ ಜನಪ್ರಿಯ ಚಹಾಗಳನ್ನು ಸೇವಿಸಿರಬಹುದು. ಆದರೆ, ನೀವು ಎಂದಾದರೂ ನೀಲಿ ಚಹಾವನ್ನು ಟ್ರೈ ಮಾಡಿದ್ದೀರಾ? ಬಿಡಿ, ನೀವು ಎಂದಾದರೂ ನೋಡಿದ್ದೀರಾ? ಬಹುಶಃ ಈ ಚಹಾದ ಬಗ್ಗೆ ತಿಳಿದಿರುವ ಅಥವಾ ಅದನ್ನು ನೋಡಿದವರು ತುಂಬಾ ವಿರಳವಾಗಿರಬಹುದು. ನೀಲಿ ಚಹಾವನ್ನು ನೀಲಿ ಬಟರ್ಫ್ಲೈ ಬಟಾಣಿ ಹೂವುಗಳಿಂದ ತಯಾರಿಸಲಾಗುತ್ತದೆ. ಇದು ನೋಡಲಷ್ಟೇ ಸುಂದರವಾಗಿರುವುದಿಲ್ಲ ರುಚಿಯಲ್ಲಿಯೂ ಕೂಡ ಅಷ್ಟೇ ಅದ್ಭುತವಾಗಿರುತ್ತದೆ. ಈ ಚಹಾ ನಿಮ್ಮ ಆಯಾಸವನ್ನು ನಿವಾರಿಸುವುದು ಮಾತ್ರವಲ್ಲದೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಇದನ್ನು ಹೇಗೆ ತಯಾರಿಸಬೇಕು?
ನೀಲಿ ಚಹಾವನ್ನು ತಯಾರಿಸಲು, ಮೊದಲು ಪ್ಯಾನ್‌ನಲ್ಲಿ ಒಂದು ಕಪ್ ನೀರನ್ನು ಬಿಸಿ ಮಾಡಿ. ನೀರು ಸ್ವಲ್ಪ ಉಗುರು ಬೆಚ್ಚಗಾದಾಗ ಅದಕ್ಕೆ ನಾಲ್ಕೈದು ನೀಲಿ ಬಟರ್ ಫ್ಲೈ ಬಟಾಣಿ ಹೂಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಇದರ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಮತ್ತು ಬಿಸಿಯಾಗಿ ಕುಡಿಯಿರಿ.

ಬ್ಲೂ ಟೀ ಸೇವನೆಯಿಂದ ಆರೋಗ್ಯಕ್ಕೆ ಏನು ಲಾಭ?
ದೇಹಕ್ಕೆ ಶಕ್ತಿ ತುಂಬುತ್ತದೆ

ನೀಲಿ ಚಹಾದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಅದರ ಅದ್ಭುತವಾದ ವಾಸನೆಯು ದಿನವಿಡೀ ದೇಹದಲ್ಲಿ ಶಕ್ತಿಯನ್ನು ತುಂಬುತ್ತದೆ.

ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ
ನೀಲಿ ಚಹಾ ಉತ್ಕರ್ಷಣ ನಿರೋಧಕ ಅಂಶಗಳಿಂದ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಕೂದಲು ಮತ್ತು ಚರ್ಮವನ್ನು ಸುಧಾರಿಸುತ್ತದೆ. ಇದು ದೇಹದಲ್ಲಿ ಇರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕಿ ದೇಹವನ್ನು ನಿರ್ವಿಷಗೊಳಿಸುವ  ಕೆಲಸ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ ಬೆಸ್ಟ್
ಬ್ಲೂ ಟೀಯಲ್ಲಿರುವ ಗುಣಲಕ್ಷಣಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ, ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಮಧುಮೇಹಿಗಳಿಗೆ ಬ್ಲೂ ಟೀ ಒಂದು ಉತ್ತಮ ಆಯ್ಕೆಯಾಗಿದೆ.

ತೂಕ ಇಳಿಕೆ
ತೂಕವನ್ನು ಇಳಿಕೆ ಮಾಡಿಕೊಳ್ಳಲು ಬಯಸುವವರಿಗೆ ಬ್ಲೂ ಟೀ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿರುವ ಕ್ಯಾಟೆಚಿನ್ ತೂಕವನ್ನು ವೇಗವಾಗಿ ಇಳಿಕೆ ಮಾಡಲು ಸಹಕರಿಸುತ್ತದೆ. ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಸುಡಲು ಕೆಲಸ ಮಾಡುತ್ತದೆ ಮತ್ತು ಶರೀರಕ್ಕೆ ಶೇಪ್ ಬರುತ್ತದೆ.

ಇದನ್ನೂ ಓದಿ-Thyroid ಸಮಸ್ಯೆ ಇದ್ದರೆ ಶರೀರ ಈ ಸಂಕೇತಗಳನ್ನು ನೀಡುತ್ತದೆ

ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ
ಯಾವ ರೀತಿ ಕಪ್ಪು, ಹಸಿರು ಚಹಾಗಳು  ಒತ್ತಡ ಮತ್ತು ಆತಂಕವನ್ನು ತೆಗೆದುಹಾಕಲು ಕೆಲಸ ಮಾಡುತ್ತವೆಯೋ, ಅದೇ ರೀತಿಯಲ್ಲಿ, ನೀಲಿ ಚಹಾವು ಮಾನಸಿಕ ಅಸ್ವಸ್ಥತೆಗಳನ್ನು ತೆಗೆದುಹಾಕಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಾಕಷ್ಟು  ಪ್ರಯೋಜನಕಾರಿಯಾಗಿದೆ. ಬ್ಲೂ ಟೀ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಕಂಡುಬಂದಿದೆ.

ಇದನ್ನೂ ಓದಿ-Foods for Weight Loss: 4 ಪದಾರ್ಥ ಸೇವಿಸಿದರೆ ಒಂದು ವಾರದಲ್ಲಿ ಕಡಿಮೆಯಾಗುತ್ತದೆ ದೇಹದ ಬೊಜ್ಜು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿ ಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News