ಡಯಾಬಿಟೀಸ್ ರೋಗಿಗಳು ಈ ನಾಲ್ಕು ಹಣ್ಣುಗಳನ್ನು ತಿನ್ನಲೇ ಬಾರದು.!

ಮಧುಮೇಹ ರೋಗಿಗಳು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ತಪ್ಪುತ್ತದೆ. ಮಧುಮೇಹ ರೋಗಿಗಳು ಈ ಕೆಳಗೆ ಹೇಳಲಾದ ಹಣ್ಣುಗಳನ್ನು ಸೇವಿಸಲೇ ಬಾರದು.

Written by - Ranjitha R K | Last Updated : Oct 21, 2022, 04:46 PM IST
  • ಲಕ್ಷಾಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.
  • ಈ ರೋಗಗಿಂದ ಸಂಪೂರ್ಣವಾಗಿ ಗುಣಮುಖರಾಗುವುದು ಸಾಧ್ಯವಿಲ್ಲ.
  • ಮಧುಮೇಹ ರೋಗಿಗಳು ಈ ಹಣ್ಣುಗಳನ್ನು ತಿನ್ನಬಾರದು
ಡಯಾಬಿಟೀಸ್ ರೋಗಿಗಳು ಈ ನಾಲ್ಕು ಹಣ್ಣುಗಳನ್ನು ತಿನ್ನಲೇ ಬಾರದು.!   title=
Diabetes control tips

ಬೆಂಗಳೂರು : ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ದತಿಯನ್ನು ಸರಿಯಾಗಿ ಅನುಸರಿಸದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಮಧುಮೇಹ ಅತಿ ವೇಗವಾಗಿ ಹರಡುವ ರೋಗವಾಗಿದೆ. ಪ್ರಸ್ತುತ ದೇಶದಲ್ಲಿ ಲಕ್ಷಾಂತರ ಜನರು  ಮಧುಮೇಹದಿಂದ ಬಳಲುತ್ತಿದ್ದಾರೆ. ಒಮ್ಮೆ ಈ ರೋಗ ಬಂದರೆ , ಅದನ್ನು ನಿಯಂತ್ರಣದಲ್ಲಿದಬಹುದು ಹೊರತು ಸಂಪೂರ್ಣವಾಗಿ ಗುಣಮುಖರಾಗುವುದು ಸಾಧ್ಯವಿಲ್ಲ. ಈ ರೋಗವು ಅನೇಕ ಇತರ ಕಾಯಿಲೆಗಳನ್ನು ಸಹ ಹೊತ್ತು ತರುತ್ತದೆ.  ಮಧುಮೇಹ ರೋಗಿಗಳು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ತಪ್ಪುತ್ತದೆ. ಮಧುಮೇಹ ರೋಗಿಗಳು ಈ ಕೆಳಗೆ ಹೇಳಲಾದ ಹಣ್ಣುಗಳನ್ನು ಸೇವಿಸಲೇ ಬಾರದು. 

ಮಾವಿನ ಹಣ್ಣು : 
ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವಿನಹಣ್ಣುಗಳನ್ನು  ಇಷ್ಟ ಪಡದವರು ಯಾರೂ ಇರಲಿಕ್ಕಿಲ್ಲ. ಆದರೆ, ನೀವು ಮಧುಮೇಹಿಗಳಾಗಿದ್ದರೆ, ಮಾವಿನ ರುಚಿಗೆ ಮಾರು ಹೋಗಿ ಖಂಡಿತಾ ಈ ಹಣ್ಣನ್ನು ತಿನ್ನಬೇಡಿ.  ಒಂದು ಬೌಲ್ ಮಾವಿನ ಹಣ್ಣಿನಲ್ಲಿ 23 ಗ್ರಾಂ ಸಕ್ಕರೆ ಇರುತ್ತದೆ. ಇದು ಅಧಿಕ ರಕ್ತದಲ್ಲಿ  ಸಕ್ಕರೆ ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು.  

ಇದನ್ನೂ ಓದಿ : Mung Bean Benefits : ಪ್ರತಿದಿನ ಸೇವಿಸಿ ಹೆಸರು ಬೆಳೆ, ಈ ರೋಗಗಳಿಂದ ದೂರವಿಡುತ್ತೆ ನಿಮ್ಮನ್ನು!

ಲಿಚಿ :
ಲಿಚಿಯನ್ನು ಆರೋಗ್ಯದ ದೃಷ್ಟಿಯಿಂದ ಉತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ಆದರೆ ಶುಗರ್ ರೋಗಿಗಳು ಇದನ್ನು ತಿನ್ನುವುದು ಅಪಾಯಕಾರಿ. ಲಿಚಿಯಲ್ಲಿ ಅಧಿಕ ಪ್ರಮಾಣದ ಸಕ್ಕರೆ ಇರುತ್ತದೆ. ಹೀಗಾಗಿ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ. 

ಅಂಜೂರ :
ಅಂಜೂರವು ಅನೇಕ ಆರೋಗ್ಯ ಲಾಭಗಳನ್ನು ಹೊಂದಿದೆ. ಆದರೆ, ಇದರಲ್ಲಿ ಸಕ್ಕರೆ ಅಂಶವೂ ಇರುತ್ತದೆ. ಅಧ್ಯಯನದ ಪ್ರಕಾರ, ಒಂದು ಬೌಲ್ ಅಂಜೂರದಲ್ಲಿ 29 ಗ್ರಾಂ ಸಕ್ಕರೆ ಇರುತ್ತದೆ. ಇದು ಡಯಾಬಿಟೀಸ್ ರೋಗಿಗಳ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಹುದು. ಆದ್ದರಿಂದ, ಸಾಧ್ಯವಾದಷ್ಟು ಅದನ್ನು ತಿನ್ನುವುದನ್ನು ತಪ್ಪಿಸುವುದು ಜಾಣತನ.

ಇದನ್ನೂ ಓದಿ : Asthama ಕಾಯಿಲೆ ಇರುವವರು ದೀಪಾವಳಿಯಲ್ಲಿ ಚಿಂತಿಸುವ ಅವಶ್ಯಕತೆ ಇಲ್ಲ, ಈ 5 ಸಂಗತಿಗಳನ್ನು ನೆನಪಿನಲ್ಲಿಡಿ

ಅನಾನಸ್ :
ಅನಾನಸ್ ಅನೇಕ ಜೀವಸತ್ವಗಳನ್ನು ಹೊಂದಿರುವ ಅದ್ಭುತ ಹಣ್ಣು. ಆದರೂ  ಈ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಸಕ್ಕರೆಯ ಕಾರಣ ಮಧುಮೇಹ ರೋಗಿಗಳಿಗೆ ಈ ಹಣ್ಣು ಸೂಕ್ತವಲ್ಲ. ಒಂದು ಬಟ್ಟಲು ಅನಾನಸ್ ಹಣ್ಣಿನಲ್ಲಿ  16 ಗ್ರಾಂ ಸಕ್ಕರೆ ಕಂಡುಬರುತ್ತದೆ. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News