Good News: ಕೋವಿಡ್ ವ್ಯಾಕ್ಸಿನ್ ಹೇಗೆ ವಿತರಣೆ ಮಾಡ್ತಾರೆ ಗೊತ್ತಾ? ಇಂದಿನಿಂದ ಡ್ರೈ ರನ್!

ಲಸಿಕೆ ವಿತರಣಾ ವ್ಯವಸ್ಥೆಯ ಎಲ್ಲವನ್ನೂ 'ಕೋ-ವಿನ್‌' ಆನ್‌ಲೈನ್‌ ಆ್ಯಪ್ (Co-WIN Online App) ಮೂಲಕವೇ ನಿರ್ವಹಣೆ ಮಾಡಲಾಗುವುದರಿಂದ ನಿಯೋಜಿತಗೊಂಡಿರುವ ಸಿಬ್ಬಂದಿಯ ಜೊತೆಗೆ 'ಕೋ-ವಿನ್‌' ಆನ್‌ಲೈನ್‌ ಆ್ಯಪ್ ಕಾರ್ಯಕ್ಷಮತೆಯನ್ನೂ ಸಹ ಪರಿಶೀಲನೆ ಒಳಪಡಿಸಲಾಗುವುದು.

Written by - Yashaswini V | Last Updated : Dec 28, 2020, 07:11 AM IST
  • ಶೈತ್ಯಾಗಾರಗಳಿಂದ ಫಲಾನುಭವಿಗಳಿಗೆ ತಲುಪಿಸುವರೆಗಿನ‌ ಎಲ್ಲಾ ಪ್ರಕ್ರಿಯೆಗಳ ಪರಿಶೀಲನೆ
  • ಫಲಾನುಭವಿಗೆ ಲಸಿಕೆ ನೀಡುವುದೊಂದನ್ನು ಬಿಟ್ಟು ಉಳಿದ ಎಲ್ಲಾ ಪ್ರಕ್ರಿಯೆಗಳ ಪರಿಶೀಲನೆ
  • 4 ರಾಜ್ಯಗಳಲ್ಲಿ 2 ದಿನ‌ ಡ್ರೈ ರನ್ ಹಮ್ಮಿಕೊಂಡಿರುವ ಕೇಂದ್ರ ಆರೋಗ್ಯ ಇಲಾಖೆ
Good News: ಕೋವಿಡ್ ವ್ಯಾಕ್ಸಿನ್ ಹೇಗೆ ವಿತರಣೆ ಮಾಡ್ತಾರೆ ಗೊತ್ತಾ? ಇಂದಿನಿಂದ ಡ್ರೈ ರನ್! title=
Covid-19 vaccine Dry run (File Image)

ನವದೆಹಲಿ: ಬರೊಬ್ಬರಿ 11 ತಿಂಗಳಿನಿಂದ ದೇಶವನ್ನು ಎಡೆಬಿಡದೆ ಕಾಡಿದ್ದ COVID-19 ಎಂಬ ಕ್ರೂರ ಕಾಯಿಲೆಗೆ ಕಡೆಗೂ ಮದ್ದು ಲಭಿಸಿದ್ದು ಇಂದಿನಿಂದ ಕೋವಿಡ್ ಲಸಿಕೆಗಳನ್ನು (Covid Vaccine) ಹೇಗೆ ವಿತರಣೆ ಮಾಡಬೇಕು ಎಂಬ ಬಗ್ಗೆ 'ಡ್ರೈ ರನ್' (Dry Run) ಮಾಡಲಾಗುತ್ತಿದೆ.

ಇಂದು ಮತ್ತು ನಾಳೆ ಪಂಜಾಬ್‌, ಆಂಧ್ರಪ್ರದೇಶ ಮತ್ತು ಗುಜರಾತ್ ಮತ್ತು ಅಸ್ಸಾಂಗಳಲ್ಲಿ ಪ್ರಾಯೋಗಿಕವಾಗಿ ಕೋವಿಡ್ ವ್ಯಾಕ್ಸಿನ್ (Covid Vaccine) ಅನ್ನು ಹೇಗೆ ವಿತರಣೆ ಮಾಡಬೇಕು ಎಂಬ ಬಗ್ಗೆ 'ಡ್ರೈ ರನ್' (Dry Run) ಮಾಡಲಾಗುತ್ತಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಡುತ್ತಿರುವ ಈ 'ಡ್ರೈ ರನ್'ನಲ್ಲಿ ಫಲಾನುಭವಿಗೆ ಲಸಿಕೆ ನೀಡುವುದೊಂದನ್ನು ಬಿಟ್ಟು ಉಳಿದಂತೆ 'ಶೈತ್ಯಾಗಾರಗಳಿಂದ ಫಲಾನುಭವಿಗಳಿಗೆ ತಲುಪಿಸಬೇಕಾದ ಮತ್ತು ಆನಂತರ ಫಾಲೋ‌ಅಪ್ ಮಾಡಬೇಕಾದ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.

ಇದನ್ನೂ ಓದಿ: BIG NEWS: ಸ್ಥಳೀಯ ಲಸಿಕೆ 'Covaxin' ಸುರಕ್ಷಿತ ಮತ್ತು ಪರಿಣಾಮಕಾರಿ ಎಂದ ICMR

ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ಮತ್ತು ಆರೋಗ್ಯ ಸೇವೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. 'ಕರೋನಾ ವ್ಯಾಕ್ಸಿನ್ (Corona Vaccine) ಅನ್ನು ಹೇಗೆ ವಿತರಣೆ ಮಾಡಬೇಕು ಎಂದು ತರಬೇತಿ ಪಡೆದಿರುವ ಸಿಬ್ಬಂದಿ ಅನುಷ್ಠಾನದ ಹಂತದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದಾರೆ' ಎಂಬುದನ್ನು ಖಚಿತ ಪಡಿಸಿಕೊಳ್ಳಲು ಡ್ರೈ ರನ್ ನಡೆಸಲಾಗುತ್ತಿದೆ.

ಕೇಂದ್ರ ಆರೋಗ್ಯ ಇಲಾಖೆಯು ರಾಜ್ಯದ ಲಸಿಕೆ ಅಭಿಯಾನ ಅಧಿಕಾರಿಗಳು, ಶೀತಲ ಸರಬರಾಜು ಅಧಿಕಾರಿಗಳು, ಮಾಹಿತಿ ಸಂಗ್ರಹಣೆ ತಂಡ, ಶಿಕ್ಷಣ ಮತ್ತು ಸಂವಹನ ತಂಡಗಳಾಗಿ ವಿಂಗಡಿಸಿ ಅವರಿಗೆ ತರಬೇತಿ ನೀಡಿದೆ. ಈಗ ಅವರೆಲ್ಲರ ಕಾರ್ಯವೈಖರಿಯನ್ನು ಖಾತರಿ ಪಡಿಸಿಕೊಳ್ಳಲು ಮುಂದಾಗಿದೆ. 

ಕೋವ್ಯಾಕ್ಸಿನ್ ಅನ್ನು ಶೈತ್ಯಾಗಾರಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿ ಅಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡುವ ಸುದೀರ್ಘ ಪ್ರಕ್ರಿಯೆಯ ಎಲ್ಲವನ್ನೂ 'ಕೋ-ವಿನ್‌' ಆನ್‌ಲೈನ್‌ ಆ್ಯಪ್ (Co-WIN Online App) ಮೂಲಕವೇ ನಿರ್ವಹಣೆ ಮಾಡಲಾಗುವುದು. ಆದುದರಿಂದ ನಿಯೋಜಿತಗೊಂಡಿರುವ ಸಿಬ್ಬಂದಿಯ ಜೊತೆಗೆ 'ಕೋ-ವಿನ್‌' ಆನ್‌ಲೈನ್‌ ಆ್ಯಪ್ ಕಾರ್ಯಕ್ಷಮತೆಯನ್ನೂ ಸಹ ಪರಿಶೀಲನೆ ಒಳಪಡಿಸಲಾಗುವುದು.

ಇದನ್ನೂ ಓದಿ: ಬ್ರಿಟನ್‌ನಿಂದ ಭಾರತಕ್ಕೆ ಬಂದವರೆಲ್ಲರನ್ನೂ ಪತ್ತೆ ಹಚ್ಚಿ RT-PCR ಟೆಸ್ಟ್ ಮಾಡಿಸಲು ಸೂಚನೆ

ಮೊದಲ ಸುತ್ತಿನಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ:
ಕೋವಿಡ್-19 ವ್ಯಾಕ್ಸಿನ್ (Covid 19 Vaccine) ವಿತರಣೆ‌ ಬಗ್ಗೆ ಇಂದು ಮತ್ತು ನಾಳೆ ನಡೆಯುವ ಡ್ರೈ ರನ್ ಯಶಸ್ವಿಯಾದರೆ ನಂತರ ಮೊದಲ ಹಂತದಲ್ಲಿ ಫಲಾನುಭವಿಗಳಿಗೆ ಲಸಿಕೆಯನ್ನು ನೀಡುವ ಕೆಲಸವೂ ಆರಂಭವಾಗಲಿದೆ. ಈಗಾಗಲೇ ಮೊದಲ ಹಂತದಲ್ಲಿ ಯಾರಿಗೆ ಲಸಿಕೆ ವಿತರಿಸಬೇಕು? ಎಷ್ಟು ಜನರಿಗೆ ಕೊಡಬೇಕು ಎಂಬ ಮಾಹಿತಿಯನ್ನು ಕೂಡ ಕಲೆ ಹಾಕಲಾಗಿದೆ.‌ ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಗಳಿಂದ ಕೇಂದ್ರ ಸರ್ಕಾರ ಮಾಹಿತಿ ತರಿಸಿಕೊಂಡಿದೆ.

ಮೊದಲ ಹಂತದಲ್ಲಿ 1 ಕೋಟಿಗೂ ಹೆಚ್ಚು ಜನ ಆರೋಗ್ಯ ಸೇವೆ ಸಿಬ್ಬಂದಿ, 2 ಕೋಟಿಗೂ ಹೆಚ್ಚು ಜನ ಫ್ರಂಟ್‌ಲೈನ್‌ ಸಿಬ್ಬಂದಿ (ವೈದ್ಯಕೀಯ ಸೇವೆಗೆ ಪೂರಕ ಕೆಲಸಗಾರರು), 27 ಕೋಟಿಗೂ ಹೆಚ್ಚು ಜನ ಹಿರಿಯ ನಾಗರಿಕರು ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ 50 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೋವ್ಯಾಕ್ಸಿನ್ (Covaxin) ಅನ್ನು ವಿತರಣೆ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News