TV ನೋಡುತ್ತಿರುವ ವೇಳೆ ನೀವೂ ಈ ತಪ್ಪು ಮಾಡುತ್ತಿದ್ದರೆ, ನಿಧಾನವಾಗಿ ಈ ರೋಗಕ್ಕೆ ಹತ್ತಿರವಾಗುತ್ತಿದ್ದೀರಿ ಎಂದರರ್ಥ

 4 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಟಿವಿ ನೋಡುತ್ತಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಅಧ್ಯಾಯನದಿಂದ ಸಾಬೀತಾಗಿದೆ.

Written by - Ranjitha R K | Last Updated : Jan 26, 2022, 03:08 PM IST
  • ನಾಲ್ಕು ಗಂಟೆಗೂ ಹೆಚ್ಚು ಕಾಲ ಟಿವಿ ನೋಡುತ್ತಿದ್ದರೆ ಎಚ್ಚರ
  • ರಕ್ತ ಹೆಪ್ಪುಗಟ್ಟುವ ಸಾಧ್ಯತೆ ದಟ್ಟವಾಗಿರುತ್ತದೆ
  • ನಿಮ್ಮ ಅಭ್ಯಾಸವನ್ನು ಇಂದೇ ಬದಲಾಯಿಸಿಕೊಳ್ಳಿ
TV ನೋಡುತ್ತಿರುವ ವೇಳೆ ನೀವೂ ಈ ತಪ್ಪು ಮಾಡುತ್ತಿದ್ದರೆ, ನಿಧಾನವಾಗಿ ಈ ರೋಗಕ್ಕೆ ಹತ್ತಿರವಾಗುತ್ತಿದ್ದೀರಿ  ಎಂದರರ್ಥ title=
ನಾಲ್ಕು ಗಂಟೆಗೂ ಹೆಚ್ಚು ಕಾಲ ಟಿವಿ ನೋಡುತ್ತಿದ್ದರೆ ಎಚ್ಚರ (file photo)

ನವದೆಹಲಿ : ಟಿವಿಯ ಮುಂದೆ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಒಣದರ ಮೇಲೊಂದರಂತೆ ಚಾನಲ್ ಬದಲಿಸುತ್ತಾ ಗಂಟೆ ಗಟ್ಟಲೆ ಟಿವಿ ಮುಂದೆ ಕುಳಿತುಕೊಳ್ಳುವ ಅಭ್ಯಾಸ ನಿಮಗೂ ಇದೆಯಾ (watching tv for long hours)? ಹೌದು ಎಂದಾದರೆ ನಿಮ್ಮ ಈ ಅಭ್ಯಾಸವನ್ನು ಇಂದೇ ಬದಲಾಯಿಸಿಕೊಳ್ಳಿ. ಯಾಕೆಂದರೆ ಮನರಂಜನೆ ಪಡೆಯುತ್ತಲೇ  ನೀವು ನಿಮಗೆ ಗೊತ್ತಿಲ್ಲದಂತೆ ನಿಧಾನವಾಗಿ ರೋಗಕ್ಕೆ ಹತೀರವಾಗುತ್ತಿರುತ್ತೀರಿ. ಹೌದು,  4 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಟಿವಿ ನೋಡುತ್ತಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಅಧ್ಯಾಯನದಿಂದ ಸಾಬೀತಾಗಿದೆ.  ಸತತ ನಾಲ್ಕು ಗಂಟೆಗಳ ಕಾಲ ಟಿವಿ ನೋಡುವವರಲ್ಲಿ ರಕ್ತ ಹೆಪ್ಪುಗಟ್ಟುವ (Blood Clot) ಸಾಧ್ಯತೆ 35 ಪ್ರತಿಶತಕ್ಕಿಂತ ಹೆಚ್ಚು ಎನ್ನುವುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿ ಜನವರಿ 20 2022 ರಂದು ಪ್ರಕಟಿಸಿದ ಅಧ್ಯಯನದಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ. 

'ನಮ್ಮ ಅಧ್ಯಯನದ ಪ್ರಕಾರ ದೈಹಿಕವಾಗಿ ಕ್ರಿಯಾಶೀಲರಾಗಿದ್ದರೂ ಸಹ, ನೀವು  ಅಪಾಯದ ಸನಿಹದಲ್ಲಿರುತ್ತೀರಿ ಎಂದು UKಯ ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಲೇಖಕ Dr. Setor Kunutsor ಹೇಳಿದ್ದಾರೆ.  ಏಕೆಂದರೆ ದೀರ್ಘಕಾಲದವರೆಗೆ ಟಿವಿ ವೀಕ್ಷಿಸುತ್ತಿದ್ದರೆ (watching tv for long hours), ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ (Blood clot) ಹೆಚ್ಚಿರುತ್ತದೆ. ಹಾಗಾಗಿ ಟಿವಿ ನೋಡುವಾಗ ಪ್ರತೀ 30 ನಿಮಿಷಗಳ ನಂತರ ವಿರಾಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಹೀಗೆ ಮಾಡಿದರೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು  ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : ನೀವು ರಾತ್ರಿಯಿಡೀ ಜೋರಾಗಿ ಗೊರಕೆ ಹೊಡೆಯುತ್ತೀರಾ? ನಿಲ್ಲಿಸಲು ಹೀಗೆ ಮಾಡಿ

ಅಧ್ಯಯನದಿಂದ ಕಂಡು ಬಂದ ವಿಷಯ ಏನು ? :
ಸಂಶೋಧನೆಯ ಪ್ರಕಾರ, ಯುಎಸ್ ಮತ್ತು ಜಪಾನ್‌ನಲ್ಲಿ 40 ಕ್ಕಿಂತ ಹೆಚ್ಚಿನ ವಯಸ್ಸಿನ 1,31,421 ಜನರ ಟಿವಿ ನೋಡುವ ಸಮಯ ಮತ್ತು ಮಾದರಿಯನ್ನು ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಟಿವಿ (TV) ನೋಡುವ ಜನರಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯ 35 ಪ್ರತಿಶತ ಹೆಚ್ಚು ಎಂದು ಕಂಡುಹಿಡಿಯಲಾಗಿದೆ. 

ಟಿವಿ ನೋಡುತ್ತಾ ಈ ಕೆಲಸ ಮಾಡಬೇಡಿ :
 ಟಿವಿ ನೋಡುವಾಗ ಫಾಸ್ಟ್ ಫುಡ್ (Fast food) ಅಥವಾ ಸ್ನಾಕ್ಸ್  ತಿನ್ನುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ಸ್ಥೂಲಕಾಯ ಅಥವಾ ಅಧಿಕ ರಕ್ತದೊತ್ತಡದಂತಹ (High Blood pressure) ಸಮಸ್ಯೆಗಳಿಂದ ಬಳಲಬೇಕಾದೀತು ಎಂದು  ಇಂಗ್ಲೆಂಡ್‌ನ ಬ್ರಿಸ್ಟಲ್ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಕುನುತ್ಸೋರ್ ಹೇಳಿದ್ದಾರೆ. ಈ ಕಾರಣದಿಂದಾಗಿ, ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಕೂಡಾ ಹೆಚ್ಚಾಗುತ್ತದೆ.

ಇದನ್ನೂ ಓದಿ : Clove With Honey: ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಹುರಿದ ಲವಂಗವನ್ನು ಜೇನುತುಪ್ಪದೊಂದಿಗೆ ತಿನ್ನಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News