Cooking Oil: ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಶುದ್ಧತೆಯನ್ನು ಗುರುತಿಸುವುದು ಹೇಗೆ?

ನಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಎಣ್ಣೆಯಲ್ಲಿ ಏನೇನು ಕಲಬೆರಕೆ ಮಾಡುತ್ತಾರೋ ಮತ್ತು ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎನ್ನುವ ಭಯ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿರುತ್ತದೆ.

Written by - Puttaraj K Alur | Last Updated : Sep 28, 2021, 04:24 PM IST
  • ನಾವು ಪ್ರತಿನಿತ್ಯ ಬಳಸುವ ಅಡುಗೆ ಎಣ್ಣೆ ಪರಿಶುದ್ಧವಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು
  • ಮನೆಯಲ್ಲಿಯೇ ಅಡುಗೆ ಎಣ್ಣೆಯ ಕಲಬೆರಕೆಯನ್ನು ಸರಳವಾಗಿ ಪತ್ತೆ ಹಚ್ಚಬಹುದು
  • ಎಚ್ಚರ..! ಅಡುಗೆ ಎಣ್ಣೆಯಲ್ಲಿನ ಕಲಬೆರಕೆಯು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು
Cooking Oil: ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಶುದ್ಧತೆಯನ್ನು ಗುರುತಿಸುವುದು ಹೇಗೆ? title=
ಅಡುಗೆ ಎಣ್ಣೆ ಶುದ್ಧತೆ ಗುರುತಿಸುವುದು ಹೇಗೆ? (Photo Courtesy: @Zee News)

ನವದೆಹಲಿ: ನಾವು ದಿನನಿತ್ಯ ಸೇವಿಸುವ ಅಡುಗೆ ಎಣ್ಣೆ ಶುದ್ಧವಾಗಿರುತ್ತದೆಯೇ..? ಅಡುಗೆ ಎಣ್ಣೆಯಲ್ಲಿ ಕಲಬೆರಕೆ(Cooking Oil Adulteration) ಇಂದು ಸಾಮಾನ್ಯವಾಗಿಬಿಟ್ಟಿದೆ. ಹೆಚ್ಚಿನ ಲಾಭದಾಸೆಗೆ ಆಹಾರದಲ್ಲಿ ಬಳಸುವ ಅಡುಗೆ ಎಣ್ಣೆಯಲ್ಲಿ ಕಲಬೆರಕೆ ಮಾಡಲಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಟ್ರೈ ಆರ್ಥೋ ಕ್ರೆಸಿಲ್ ಫಾಸ್ಫೇಟ್(Tri ortho cresyl phosphate)ನಂತಹ ಸಂಯುಕ್ತಗಳನ್ನು ಅಡುಗೆ ಎಣ್ಣೆಯಲ್ಲಿ ಬೆರೆಸಲಾಗುತ್ತದೆ. ಆದ್ದರಿಂದ ನೀವು ಮಾರುಕಟ್ಟೆಯಿಂದ ತೈಲವನ್ನು ಖರೀದಿಸಿದಾಗ ಬಳಕೆಗೆ ಮೊದಲು ಅದರ ಗುಣಮಟ್ಟವನ್ನು ಪರೀಕ್ಷಿಸುವುದ ಉತ್ತಮ.  

ಅಡುಗೆ ಎಣ್ಣೆಯಲ್ಲಿ ಕಲಬೆರಕೆ ಪತ್ತೆ ಮಾಡುವುದು ಹೇಗೆ?

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇತ್ತೀಚೆಗೆ ತನ್ನ ಟ್ವಿಟರ್ ಖಾತೆಯಲ್ಲಿ ಎರಡು ವಿಡಿಯೋಗಳನ್ನು ಹಂಚಿಕೊಂಡಿದೆ. ಇವುಗಳಲ್ಲಿ ಅಡುಗೆ ಎಣ್ಣೆಯಲ್ಲಿ ಕಲಬೆರಕೆಯನ್ನು ಹೇಗೆ ಗುರುತಿಸಬಹುದು ಎಂಬುದನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. FSSAI ಹೇಳಿರುವ ಮೊದಲ ಮಾರ್ಗವೆಂದರೆ ಪರೀಕ್ಷಾ ಟ್ಯೂಬ್‌ನಲ್ಲಿ ಸುಮಾರು 1 ಮಿಲಿ ಎಣ್ಣೆಯನ್ನು ಹಾಕಿ, ಅದಕ್ಕೆ 4 ಮಿಲೀ ನೀರನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡುವುದು. ಈಗ ಇನ್ನೊಂದು ಟ್ಯೂಬ್‌ನಲ್ಲಿ 2 ಮಿಲಿ ಮಿಶ್ರಣವನ್ನು ಹಾಕಿ ಮತ್ತು ಅದಕ್ಕೆ 2 ಮಿಲಿ ಹೈಡ್ರೋಕ್ಲೋರಿಕ್ ಆಸಿಡ್ ಸೇರಿಸಬೇಕು. ಶುದ್ಧ ಎಣ್ಣೆಯ ಮೇಲಿನ ಪದರದ ಬಣ್ಣ ಬದಲಾಗುವುದಿಲ್ಲ, ಆದರೆ ಕಲಬೆರಕೆ ಎಣ್ಣೆಯ ಮೇಲಿನ ಪದರದ ಬಣ್ಣವು ಬದಲಾಗುತ್ತದೆ.

ಇದನ್ನೂ ಓದಿ: Hair Care Tips: ಕೂದಲಿಗೆ ಇಷ್ಟು ಹೊತ್ತು ಮಾತ್ರ ಮೆಹಂದಿ ಹಚ್ಚಿಕೊಳ್ಳಬೇಕು, ಇಲ್ಲವಾದರೆ ಈ ಸಮಸ್ಯೆ ಎದುರಾಗುತ್ತದೆ

ಕಲಬೆರಕೆ ಎಣ್ಣೆ ಪರೀಕ್ಷಿಸುವ ಮತ್ತೊಂದು ವಿಧಾನ

ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚಲು(Adulteration in Cooking Oil) FSSAI ಹೇಳಿರುವ ಮತ್ತೊಂದು ವಿಧಾನವೆಂದರೆ, ಮೊದಲು ವಿವಿಧ ಗ್ಲಾಸ್‌ಗಳಲ್ಲಿ ಸುಮಾರು 2 ಮಿಲೀ ಎಣ್ಣೆಯನ್ನು ತೆಗೆದುಕೊಂಡು ಈಗ ಅದರಲ್ಲಿ ಒಂದು ಸಣ್ಣ ತುಂಡು ಬೆಣ್ಣೆಯನ್ನು ಸೇರಿಸಬೇಕು. ಬೆಣ್ಣೆಯನ್ನು ಸೇರಿಸಿದ ಸ್ವಲ್ಪ ಸಮಯದ ನಂತರ ನೀವು ಶುದ್ಧ ಎಣ್ಣೆಯ ಬಣ್ಣದಲ್ಲಿ ಯಾವುದೇ ಬದಲಾವಣೆಯನ್ನು ಕಾಣುವುದಿಲ್ಲ. ಆದರೆ ಕಲಬೆರಕೆ ಎಣ್ಣೆಯ ಮೇಲಿನ ಪದರದ ಬಣ್ಣವು ಕೆಂಪು ಬಣ್ಣಕ್ಕೆ ಬದಲಾಗುತ್ತದೆ.

ಇದನ್ನೂ ಓದಿ: ಈ ಐದು ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ Type 2 Diabetes ಕಂಟ್ರೋಲ್ ಮಾಡಬಹುದು

ನಮ್ಮ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಎಣ್ಣೆ(Cooking oil)ಯಲ್ಲಿ ಏನೇನು ಕಲಬೆರಕೆ ಮಾಡುತ್ತಾರೋ ಮತ್ತು ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎನ್ನುವ ಭಯ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿರುತ್ತದೆ. ನಾವು ಯಾವುದೇ ಆಹಾರ ಪದಾರ್ಥ ಮಾಡಬೇಕಾದರೂ ಎಣ್ಣೆಯನ್ನು ಬಳಸುತ್ತೇವೆ. ನಾವು ಬಳಸುತ್ತಿರುವ ಎಣ್ಣೆ ಶುದ್ಧ(Cooking Oil) ಮತ್ತು ಸೇವನೆಗೆ ಯೋಗ್ಯವಾಗಿದೆಯೇ ಎಂಬುದು ನಮಗೆ ತಿಳಿದಿರುವುದಿಲ್ಲ. ಇದು ನಮ್ಮ ಆರೋಗ್ಯ(Health)ದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ಪ್ರತಿಯೊಬ್ಬರು ಮನೆಯಲ್ಲಿ ಸರಳವಾಗಿ ಎಣ್ಣೆ ಪರಿಶುದ್ಧವಾಗಿದೆಯೇ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News