ಶೀತ, ಜ್ವರ ಇದ್ದಾಗ ಋತುಮಾನದ ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು

Seasonal Fruits Juice: ಶೀತ, ನೆಗಡಿ, ಜ್ವರ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳು. ಈ ಸಮಯದಲ್ಲಿ ಕಾಲೋಚಿತ ಹಣ್ಣುಗಳ ಜ್ಯೂಸ್ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. 

Written by - Yashaswini V | Last Updated : Sep 15, 2023, 02:39 PM IST
  • ಜ್ವರ ಬಂದಾಗ ಸೀಸನಲ್ ಫ್ರೂಟ್ಸ್ ಸೇವನೆಯಿಂದ ಆರೋಗ್ಯಕ್ಕಿದೆ ಅಪಾರ ಪ್ರಯೋಜನ
  • ಸೀಸನಲ್ ಫ್ರೂಟ್ ಜ್ಯೂಸ್‌ನಿಂದ ಆರೋಗ್ಯಕ್ಕೆ ಸಿಗುವ ಐದು ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯೋಣ
ಶೀತ, ಜ್ವರ ಇದ್ದಾಗ ಋತುಮಾನದ ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು  title=

Seasonal Fruits Juice: ಸಾಮಾನ್ಯವಾಗಿ ಶೀತ, ಜ್ವರ ಇದ್ದಾಗ ಜನರು ಹಣ್ಣುಗಳನ್ನು ಸೇವಿಸಲು ಇಲ್ಲವೇ ಹಣ್ಣಿನ ರಸಗಳನ್ನು ಸೇವಿಸಲು ಹಿಂಜರಿಯುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಸಮಯದಲ್ಲಿ ಋತುಮಾನ ಹಣ್ಣುಗಳು ಎಂದರೆ ಕಾಲೋಚಿತ ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತವೆ. 

ವೈದ್ಯರ ಪ್ರಕಾರ, ಶೀತ, ನೆಗಡಿ ಅಥವಾ ಜ್ವರ ಇದ್ದಾಗ ಕಾಲೋಚಿತ ಹಣ್ಣುಗಳ ಜ್ಯೂಸ್ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಟಾಪ್ 5 ಪ್ರಯೋಜನಗಳು ಯಾವುವೆಂದರೆ... 
* ಹಸಿವನ್ನು ಹೆಚ್ಚಿಸುತ್ತದೆ:- 

ಜ್ವರ ಇದ್ದಾಗ ಏನನ್ನೂ ತಿನ್ನಬೇಕು ಎಂದೆನಿಸುವುದಿಲ್ಲ. ಹಸಿವೂ ಆಗುವುದಿಲ್ಲ. ಹಾಗಂತ, ಏನೂ ತಿನ್ನದೇ ಇದ್ದರೆ ಆರೋಗ್ಯ ಸುಧಾರಿಸುವುದು ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ನೀವು ಋತುಮಾನದ ಹಣ್ಣಿನ ರಸವನ್ನು ಸೇವಿಸಬಹುದು. ಇದರಿಂದ ಸಿಗುವ ಪ್ರಮುಖ ಪ್ರಯೋಜನವೆಂದರೆ ಇದು ಹಸಿವನ್ನು ಹೆಚ್ಚಿಸುತ್ತದೆ.  

ವಾಂತಿ, ವಾಕರಿಕೆಯಿಂದ ಪರಿಹಾರ:- 
ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯ ಸರಿಯಿಲ್ಲದಿದ್ದಾಗ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ವಾಂತಿ ಮತ್ತು ವಾಕರಿಕೆಯಂತಹ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ. ಅದರಲ್ಲೂ ಈ ಸಮಯದಲ್ಲಿ ಮೋಸಂಬಿ ಜ್ಯೂಸ್ ಕುಡಿಯುವುದರಿಂದ ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಮಾತ್ರವಲ್ಲ, ಅಜೀರ್ಣ ಮತ್ತು ಅಸಿಡಿಟಿ ಸಮಸ್ಯೆಯಿಂದಲೂ ಪರಿಹಾರವನ್ನು ನೀಡುತ್ತದೆ. 

ಇದನ್ನೂ ಓದಿ- ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಟಾಪ್ 5 ಮಾರ್ನಿಂಗ್ ಡ್ರಿಂಕ್ಸ್

ರೋಗನಿರೋಧಕ ಶಕ್ತಿ ಹೆಚ್ಚಳ:-
ತಜ್ಞರ ಪ್ರಕಾರ, ಕಾಲೋಚಿತ ಹಣ್ಣು ತರಕಾರಿಗಳಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿಡಯಾಬಿಟಿಕ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ, ಶೀತ, ನೆಗಡಿ, ಜ್ವರದಂತಹ ಸಂದರ್ಭಎದಲ್ಲಿ ಇವುಗಳನ್ನು ಸೇವಿಸುವುದರಿಂದ ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.  

ನಿರ್ಜಲೀಕರಣದಿಂದ ರಕ್ಷಣೆ: 
ಜ್ವರ ಬಂದಾಗ ನಿರ್ಜಲೀಕರಣದ ಸಮಸ್ಯೆಯೂ ನಿಮ್ಮನ್ನು ಬಾಧಿಸಬಹುದು. ಇದನ್ನು ತಪ್ಪಿಸಲು ಹೆಚ್ಚಿನ ಲಿಕ್ವಿಡ್ ಆಹಾರಗಳನ್ನು ಸೇವಿಸಿದಬೇಕು. ಅದರಲ್ಲೂ ಕಾಲೋಚಿತವಾದ ಹಣ್ಣುಗಳ ಜ್ಯೂಸ್ ಕುಡಿಯಬೇಕು. ಏಕೆಂದರೆ, ಕಾಲೋಚಿತವಾವ ಹಣ್ಣುಗಳಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಇತರ ಖನಿಜಗಳು ಹೆರಳವಾಗಿದ್ದು ಇದು ದೇಹದಲ್ಲಿ ಕಡಿಮೆಯಾಗಿರುವ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ- ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮಾತ್ರವಲ್ಲ ಈ ಆರೋಗ್ಯ ಸಮಸ್ಯೆಗಳಿಗೂ ಮುಕ್ತಿ ನೀಡುತ್ತೆ ಪರಂಗಿ ಬೀಜಗಳು

ಮೂಳೆಗಳನ್ನು ಬಲಪಡಿಸಲು:- 
ಕೆಲವೊಮ್ಮೆ ಜ್ವರ ಬಂದಾಗ ಕೈ-ಕಾಲು ಮೂಳೆಗಳಲ್ಲೂ ನೋವು ಕಂಡು ಬರುತ್ತದೆ. ಆದರೆ, ಸೀಸನಲ್ ಫ್ರೂಟ್ಸ್ ಜ್ಯೂಸ್ ಸೇವನೆಯಿಂದ ಮೂಳೆಗಳನ್ನು ಬಳಪಡಿಸಬಹುದು. ಸೀಸನಲ್ ಜ್ಯೂಸ್‌ನಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಫೋಲಿಕ್ ಆಮ್ಲವು ಮೂಳೆಗಳನ್ನು ಬಲಪಡಿಸಲು ತುಂಬಾ ಪ್ರಯೋಜನಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News