ಈ ಎಲೆಯ ಸೇವನೆಯಿಂದ ಸುಲಭವಾಗಿ ನಿಯಂತ್ರಣಕ್ಕೆ ಬರುವುದು ಸಕ್ಕರೆ ಕಾಯಿಲೆ

Lower Blood Sugar Naturally:ಮಧುಮೇಹವು ಕಾಯಿಲೆ ಬಂತೆಂದರೆ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತಮ್ಮ ಜೀವನದುದ್ದಕ್ಕೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.   ನೈಸರ್ಗಿಕ ರೀತಿಯಲ್ಲಿ ಮಧುಮೇಹವನ್ನು ಕಡಿಮೆ ಮಾಡಬೇಕಾದರೆ, ಅದರ ನೈಸರ್ಗಿಕ ಚಿಕಿತ್ಸೆ ಮತ್ತು ಅದರ ಸೇವನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.  

Written by - Ranjitha R K | Last Updated : Nov 7, 2022, 10:08 AM IST
  • ಕೆಟ್ಟ ಜೀವನಶೈಲಿಯಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.
  • ಕೆಲವೊಮ್ಮೆ ಮಧುಮೇಹ ಕಾಯಿಲೆಯು ಆನುವಂಶಿಕವಾಗಿರುತ್ತದೆ.
  • ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜೀವನದುದ್ದಕ್ಕೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಈ ಎಲೆಯ ಸೇವನೆಯಿಂದ ಸುಲಭವಾಗಿ ನಿಯಂತ್ರಣಕ್ಕೆ ಬರುವುದು ಸಕ್ಕರೆ ಕಾಯಿಲೆ  title=
diabetec control tips (file photo)

Lower Blood Sugar Naturally : ಮಧುಮೇಹ ಎನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆಯಾಗಿದೆ. ಕೆಟ್ಟ ಜೀವನಶೈಲಿಯಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಆದರೆ, ಕೆಲವೊಮ್ಮೆ ಮಧುಮೇಹ ಕಾಯಿಲೆಯು ಆನುವಂಶಿಕವಾಗಿರುತ್ತದೆ. ಮಧುಮೇಹವು ಕಾಯಿಲೆ ಬಂತೆಂದರೆ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತಮ್ಮ ಜೀವನದುದ್ದಕ್ಕೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.   ನೈಸರ್ಗಿಕ ರೀತಿಯಲ್ಲಿ ಮಧುಮೇಹವನ್ನು ಕಡಿಮೆ ಮಾಡಬೇಕಾದರೆ, ಅದರ ನೈಸರ್ಗಿಕ ಚಿಕಿತ್ಸೆ ಮತ್ತು ಅದರ ಸೇವನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.  

ಮಧುಮೇಹವನ್ನು ಗುರುತಿಸುವುದು ಹೇಗೆ ? :
ದೇಹದಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾದಾಗ ಅದನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ನಿಯಮಿತ ರಕ್ತ ತಪಾಸಣೆಯಿಂದ ಕಂಡುಹಿಡಿಯಲಾಗುತ್ತದೆ. ಇದಲ್ಲದೆ, ಮಧುಮೇಹದಿಂದಾಗಿ, ದೇಹದಲ್ಲಿ ಮೂತ್ರದ ವಾಸನೆ, ಆಗಾಗ ಹಸಿವಾಗುವುದು, ನಿದ್ರಾಹೀನತೆ, ಚರ್ಮದ ಬಣ್ಣದಲ್ಲಿ ಬದಲಾವಣೆ,  ಪದೇ ಪದೇ ಮೂತ್ರ ವಿಸರ್ಜನೆ,  ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : Side Effects Of Earbuds: ಇಯರ್‌ ಬಡ್‌ನಿಂದ ಕಿವಿ ಸ್ವಚ್ಛಗೊಳಿಸುವ ಮುನ್ನ ಎಚ್ಚರ!

ನೆಲ ಬೇವು ಸೇವನೆ ಮೂಲಕ ಸ್ವಾಭಾವಿಕವಾಗಿ ಮಧುಮೇಹವನ್ನು  ನಿಯಂತ್ರಿಸಬಹುದು : 
ನೆಲ ಬೇವು ಮಧುಮೇಹವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಬಹಳ  ಸಹಕಾರಿಯಾಗಿದೆ. ಇದು ಅಮರೊಜೆಂಟಿನ್ ಎಂಬ ಜೈವಿಕ ಸಕ್ರಿಯ ಸಂಯುಕ್ತವನ್ನು ಹೊಂದಿರುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಆಗಿ ಕಾರ್ಯನಿರ್ವಹಿಸುತ್ತದೆ.

ನೈಸರ್ಗಿಕವಾಗಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬೇಕಾದರೆ ಅದಕ್ಕಾಗಿ  ನೆಲ ಬೇವು ಸೇವಿಸಬಹುದು . ಆಹಾರ ಸೇವಿಸುವ ಮೊದಲು ನೆಲ ಬೇವನ್ನು  ಟಾನಿಕ್ ರೂಪದಲ್ಲಿ ಸೇವಿಸಬೇಕು. ನೆಲಬೇವಿನ ಎಲೆಗಳ ರಸವನ್ನು ತೆಗೆದು  ಅದನ್ನು ಕುಡಿಯಬೇಕು. 

ಆದರೆ  ಈ ರಸವನ್ನು  ಸೇವಿಸುವ ಮೊದಲು, ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.  

ಇದನ್ನೂ ಓದಿ : Basil Health Benefits : ಕ್ಯಾನ್ಸರ್'ನಿಂದ ಮಧುಮೇಹದಂತಹ ಅನೇಕ ರೋಗಗಳಿಗೆ ರಾಮಬಾಣ ತುಳಸಿ ಎಲೆ..!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.a

Trending News