benefits of milk dates: ಹಾಲಿನೊಂದಿಗೆ ಕೇವಲ ಎರಡು ಖರ್ಜೂರ ಸೇವಿಸಿದರೆ ಪುರುಷರ ಈ ಸಮಸ್ಯೆಗೆ ಸಿಗಲಿದೆ ಪರಿಹಾರ

ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳಿಂದ  ಸಮೃದ್ಧವಾಗಿರುವ ಹಾಲು ಮತ್ತು ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಮೃದ್ಧವಾಗಿರುವ ಖರ್ಜೂರಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. 

Written by - Ranjitha R K | Last Updated : Aug 15, 2021, 12:01 PM IST
  • ದೈಹಿಕ ದೌರ್ಬಲ್ಯದಿಂದ ಬಳಲುತ್ತಿದ್ದರೆ, ಖರ್ಜೂರ ಮತ್ತು ಹಾಲನ್ನು ಸೇವಿಸಿ.
  • ಆರೋಗ್ಯ ತಜ್ಞರು ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸುತ್ತಾರೆ.
  • ಖರ್ಜೂರವನ್ನು ಸೂಪರ್ ಫುಡ್ ವಿಭಾಗದಲ್ಲಿ ಸೇರಿಸಲಾಗಿದೆ.
benefits of milk dates:  ಹಾಲಿನೊಂದಿಗೆ ಕೇವಲ ಎರಡು ಖರ್ಜೂರ ಸೇವಿಸಿದರೆ ಪುರುಷರ ಈ ಸಮಸ್ಯೆಗೆ ಸಿಗಲಿದೆ ಪರಿಹಾರ   title=
ದೈಹಿಕ ದೌರ್ಬಲ್ಯದಿಂದ ಬಳಲುತ್ತಿದ್ದರೆ, ಖರ್ಜೂರ ಮತ್ತು ಹಾಲನ್ನು ಸೇವಿಸಿ (file photo)

ನವದೆಹಲಿ : benefits of milk dates : ದೈಹಿಕ ದೌರ್ಬಲ್ಯದಿಂದ ಬಳಲುತ್ತಿರುವವರು ಖರ್ಜೂರ ಮತ್ತು ಹಾಲನ್ನು ಸೇವಿಸಬೇಕು. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ಸಿಗುತ್ತವೆ. ಇದು ಪುರುಷರ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ (benefits of milk dates). ಆರೋಗ್ಯ ತಜ್ಞರು ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸುತ್ತಾರೆ. ಇನ್ನು ಖರ್ಜೂರವನ್ನು ಸೂಪರ್ ಫುಡ್ ವಿಭಾಗದಲ್ಲಿ ಸೇರಿಸಲಾಗಿದೆ. ಇಂತಹ ಸನ್ನಿವೇಶದಲ್ಲಿ, ಈ ಎರಡನ್ನೂ ಒಟ್ಟಿಗೆ ಸೇವಿಸಿದಾಗ, ಅವುಗಳ ಪ್ರಯೋಜನಗಳು ಹಲವು ಪಟ್ಟು ಹೆಚ್ಚಾಗುತ್ತವೆ.

ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳಿಂದ  ಸಮೃದ್ಧವಾಗಿರುವ ಹಾಲು ಮತ್ತು ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಮೃದ್ಧವಾಗಿರುವ ಖರ್ಜೂರಗಳು (Benefits of dates) ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ,  ಅನೇಕ ರೋಗಗಳಿಂದ ದೂರವಿರಬಹುದು. ಖರ್ಜೂರವನ್ನು ಹಾಲಿನಲ್ಲಿ ನೆನೆಸಿ ಮತ್ತೆ ಸ್ವಲ್ಪ ಸಮಯದವರೆಗೆ ಕುದಿಸಿದಾಗ, ಅದರ ಆರೋಗ್ಯ ಪ್ರಯೋಜನಗಳು 100 ಪಟ್ಟು ಹೆಚ್ಚಾಗುತ್ತದೆ (benefits of milk dates).  

ಇದನ್ನೂ ಓದಿ : Raw Food: ಈ ಆಹಾರ ಪದಾರ್ಥಗಳನ್ನು ಎಂದಿಗೂ ಬೇಯಿಸಿ ತಿನ್ನಬಾರದು

ಹಾಲು ಮತ್ತು ಖರ್ಜೂರದ ಪ್ರಯೋಜನಗಳು :
1. ಹಾಲು ಮತ್ತು ಖರ್ಜೂರ ಸೇವನೆಯು ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ
ಖರ್ಜೂರವು ತಾಯಿಯ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡುವುದಲ್ಲದೆ, ಭ್ರೂಣದ ಬೆಳವಣಿಗೆಗೂ ಪ್ರಯೋಜನಕಾರಿಯಾಗಿದೆ.   ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು (dates) ಸೇವಿಸಿದರೆ, ದೇಹದಲ್ಲಿ ಆಕ್ಸಿಟೋಸಿನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಹೆರಿಗೆಯ ಸಮಯದಲ್ಲಿ ಗರ್ಭಾಶಯದ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ.

2. ಚರ್ಮಕ್ಕೆ ಪ್ರಯೋಜನಕಾರಿ:
ಆ್ಯಂಟಿಆಕ್ಸಿಡೆಂಟ್‌ಗಳು ಖರ್ಜೂರದಲ್ಲಿ ಹೇರಳವಾಗಿ ಕಂಡುಬರುತ್ತವೆ. ಆ್ಯಂಟಿ ಏಜಿಂಗ್ ಗುಣಗಳಿಂದಲೂ ಇದು ಸಮೃದ್ಧವಾಗಿವೆ. ಈ ಕಾರಣದಿಂದಾಗಿ, ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಇದು ಚರ್ಮದ ಆರೋಗ್ಯವನ್ನೂ (Skin care) ಕಾಪಾಡುತ್ತದೆ. 

ಇದನ್ನೂ ಓದಿ : Ajwain Water Benefits : ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ 'ಅಜವಾನ ನೀರು' : ಇದರಿಂದ ಆರೋಗ್ಯಕ್ಕಿದೆ ಅನೇಕ ಪ್ರಯೋಜನಗಳು!

3. ರಕ್ತಹೀನತೆಯಲ್ಲಿ ಪ್ರಯೋಜನಕಾರಿ :
ಯಾವಾಗ ಯಾರ ದೇಹದಲ್ಲಿ ಕಬ್ಬಿಣದ ಕೊರತೆಯಿರುತ್ತದೆಯೋ, ಅವನಿಗೆ ರಕ್ತಹೀನತೆಯಾ ಸಮಸ್ಯೆ ಇರುತ್ತದೆ. ಹಾಲಿನೊಂದಿಗೆ ಖರ್ಜೂರವನ್ನು ಸೇವಿಸಿದರೆ, ರಕ್ತಹೀನತೆ ಕೊರತೆಯನ್ನು ನಿವಾರಿಸಬಹುದು. 

4. ವೀರ್ಯ ಹೆಚ್ಚಿಸುವಲ್ಲಿ ಸಹಾಯಕ : 
ಆಯುರ್ವೇದದಲ್ಲಿ ಖರ್ಜೂರವನ್ನು ಔಷಧಿಯಾಗಿ ಬಳಸಲಾಗುತ್ತದೆ. ಇದು ಪುರುಷರ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಖರ್ಜೂರ ಮತ್ತು ಹಾಲನ್ನು (Milk) ಒಟ್ಟಿಗೆ ಸೇವಿಸುವುದರಿಂದ ಫರ್ಟಿಲಿಟಿ  ಹೆಚ್ಚುತ್ತದೆ. ಹಾಲಿನಲ್ಲಿ ಬೇಯಿಸಿದ ಎರಡು ಅಥವಾ ಮೂರು ಖರ್ಜೂರವನ್ನು ಪ್ರತಿದಿನ ಕುಡಿಯುವುದರಿಂದ ವೀರ್ಯಗಳ ಸಂಖ್ಯೆಯು ಕೂಡಾ ಹೆಚ್ಚಾಗುತ್ತದೆ. 

ಯಾವ ಸಮಯವನ್ನು ಸೇವಿಸಬೇಕು :
ರಾತ್ರಿ ಮಲಗುವ ಮುನ್ನ ಹಾಲು ಮತ್ತು ಖರ್ಜೂರವನ್ನು ಸೇವಿಸಬಹುದು ಎಂದು ವೈದ್ಯರು ಅಬ್ರಾರ್ ಮುಲ್ತಾನಿ ಸಲಹೆ ನೀಡುತ್ತಾರೆ. 

ಇದನ್ನೂ ಓದಿ : Skin Problems: ಚರ್ಮದ ಸಮಸ್ಯೆಗೆ ನಿಮ್ಮ Sleeping Positions ಕೂಡ ಕಾರಣವಿರಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News