ಮಧುಮೇಹ ರೋಗಿಗಳಿಗೆ ಸಂಜೀವಿನಿ ಈ ಎಲೆ.! ನಿತ್ಯ ಸೇವಿಸಿದರೆ ನಿಯಂತ್ರಣದಲ್ಲಿರುತ್ತದೆ ರಕ್ತದ ಸಕ್ಕರೆ

Aak Leaves For Diabetes: ಆಯುರ್ವೇದದ ಪ್ರಕಾರ, ಒಂದು ವಿಶೇಷ ಎಲೆಯ ಸಹಾಯದಿಂದ ರಕ್ತದ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದು ಸಾಧ್ಯ.

Written by - Ranjitha R K | Last Updated : Sep 29, 2022, 08:40 AM IST
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ.
  • ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
  • ಒಂದು ಎಲೆ ರಕ್ತದ ಗ್ಲೂಕೋಸ್ ಮಟ್ಟವನ್ನ ನಿಯಂತ್ರಿಸುತ್ತದೆ
ಮಧುಮೇಹ ರೋಗಿಗಳಿಗೆ ಸಂಜೀವಿನಿ ಈ ಎಲೆ.! ನಿತ್ಯ ಸೇವಿಸಿದರೆ ನಿಯಂತ್ರಣದಲ್ಲಿರುತ್ತದೆ ರಕ್ತದ ಸಕ್ಕರೆ  title=
Aak Leaves For Diabetes (file photo)

ಬೆಂಗಳೂರು : Aak Leaves For Diabetes: ಯಾವುದೇ ವ್ಯಕ್ತಿಗೆ ಮಧುಮೇಹ ಕಾಣಿಸಿಕೊಂಡರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಇದಕ್ಕಾಗಿ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಮಧುಮೇಹ  ನಿಯಂತ್ರಣಕ್ಕೆ ನಿತ್ಯ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಮಾತ್ರೆ ಸೇವಿಸುವುದರಲ್ಲಿ ಅಸಡ್ಡೆ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಭಾರತ ಶತಮಾನಗಳಿಂದ ಆಯುರ್ವೇದ ಚಿಕಿತ್ಸೆಯನ್ನು ಕೂಡಾ ಅವಲಂಬಿಸಿದೆ. ಆಯುರ್ವೇದದ ಪ್ರಕಾರ, ಒಂದು ವಿಶೇಷ ಎಲೆಯ ಸಹಾಯದಿಂದ ರಕ್ತದ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದು ಸಾಧ್ಯ.

ಆಯುರ್ವೇದದ  ಗಣಿ ಈ ಎಲೆ : 
ಆಯುರ್ವೇದದ ನಿಧಿ ಎಂದು ಪರಿಗಣಿಸಲಾದ ಎಕ್ಕದ ಎಲೆಗಳನ್ನು ಇಂಗ್ಲಿಷ್‌ನಲ್ಲಿ ಜೈಂಟ್ ಕ್ಯಾಲೋಟ್ರೋಪ್ ಎಂದು ಕರೆಯಲಾಗುತ್ತದೆ ಇದರ ವೈಜ್ಞಾನಿಕ ಹೆಸರು ಕ್ಯಾಲೋಟ್ರೋಪಿಸ್ ಗಿಗಾಂಟಿಯಾ. ಎಕ್ಕದ ಎಲೆಗಳು ಬಹಳ ಮೃದುವಾಗಿದ್ದು, ಹಸಿರು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತವೆ. ಒಣಗಿದ ನಂತರ ಈ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. 

ಇದನ್ನೂ ಓದಿ : Diabetes: ಅಡುಗೆಮನೆಯಲ್ಲಿರುವ ಈ ಮಸಾಲೆ ಮಧುಮೇಹಿಗಳ ಪಾಲಿನ ಸಂಜೀವಿನಿ.!

ಮಧುಮೇಹ ರೋಗಿಗಳಿಗೆ ಸಂಜೀವಿನಿ ಈ ಎಲೆ : 
ಎಕ್ಕದ ಎಲೆಗಳು ಮಧುಮೇಹ ರೋಗಿಗಳಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಇದನ್ನು ಸೇವಿಸುತ್ತಾ ಬಂದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಸಾಧ್ಯ. ರೋಗಿಯ ಆರೋಗ್ಯವನ್ನು ಇದು  ಸುರಕ್ಷಿತವಾಗಿರಿಸುತ್ತದೆ.

ಎಕ್ಕದ ಎಲೆಗಳನ್ನು ಬಳಸುವುದು ಹೇಗೆ ? : 
ಇದಕ್ಕಾಗಿ, ಎಕ್ಕದ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ನಂತರ  ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಪ್ರತಿದಿನ 10 ಮಿಲಿ ನೀರಿನಲ್ಲಿ ಬೆರೆಸಿ ಸೇವಿಸಬೇಕು. ಇನ್ನೊಂದು ವಿಧಾನವೆಂದರೆ ರಾತ್ರಿ ಹೊತ್ತು ಈ ಎಲೆಯ ಪುಡಿಯನ್ನು ಕಾಲಿನ ಅಡಿಗೆ ಹಚ್ಚಿ ಸಾಕ್ಸ್ ಹಾಕಿ ಮಲಗಬೇಕು. ಹೀಗೆ ಮಾಡುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.

ಎಕ್ಕದ ಎಲೆಗಳ ಇತರ ಪ್ರಯೋಜನಗಳು : 
ಈ ಎಲೆಗಳನ್ನು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಹೇಗೆ ಪ್ರಯೋಜನಕಾರಿಯೋ, ಹಲ್ಲಿನ ಸಮಸ್ಯೆಗಳು, ಮಲಬದ್ಧತೆ, ಅತಿಸಾರ ಅಥವಾ ಕೀಲು ನೋವು ನಿವಾರಣೆಗೂ ಅಷ್ಟೇ ಪರಿಣಾಮಕಾರಿ. 

ಇದನ್ನೂ ಓದಿ : Side Effects of Ginger: ಅತಿಯಾದ ಶುಂಠಿ ಟೀ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ

ಎಚ್ಚರಿಕೆ ಅಗತ್ಯ :
ಎಕ್ಕದ ಎಲೆಯಿಂದ  ಮೇಣ ಹೊರ ಬರುತ್ತದೆ. ಇದು ಕಣ್ಣಿಗೆ ಸ್ವಲ್ಪ ಅಪಾಯಕಾರಿ. ಆದ್ದರಿಂದ ಈ ಎಲೆಯನ್ನು ಬಳಸುವಾಗ ಜಾಗರೂಕರಾಗಿರಬೇಕು. ಮತ್ತು ಈ ಎಲೆಗಳು ಸಣ್ಣ ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News