AIDS ಕಾಯಿಲೆಯ Patient Zero ಯಾರು ನಿಮಗೆ ಗೊತ್ತಾ? ನೀವೂ ನಂಬಲ್ಲ

First Patient Of AIDS: ಇಂದು ಜನರಲ್ಲಿ AIDS ಕುರಿತು ಜಾಗೃತಿ ಹೆಚ್ಚಾಗಿದೆ ಹಾಗೂ ಹಲವು ತಪ್ಪು ತಪ್ಪು ತಿಳುವಳಿಕೆಗಳು ಕೂಡ ದೂರಾಗಿವೆ. ಆದರೆ ಹಲವು ಬಡ ಮತ್ತು ಹಿಂದುಳಿದ ದೇಶಗಳಲ್ಲಿ ಇಂದಿಗೂ ಕೂಡ ಸರಿಯಾದ ಅರಿವು ಅಥವಾ ತಿಳುವಳಿಕೆ ಇಲ್ಲ, ಈ ಕಾರಣದಿಂದ ಈ ರೋಗ ಮತ್ತೆ ಹರಡುತ್ತಿದೆ. ಹಾಗಾದರೆ ಏಡ್ಸ್ ಗೆ ಸಂಬಂದಿಸಿದ ಈ ಬೆಚ್ಚಿಬೀಳಿಸುವ ಸಂಗತಿಯೊಂದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jan 4, 2021, 09:27 PM IST
  • HIV ಸೋಂಕು ತಗುಲಿದ ಮೊದಲ ರೋಗಿ ಒಂದು ಚಿಂಪಾಂಜಿ ಆಗಿತ್ತು.
  • ಏಡ್ಸ್ ನ ಮೊದಲ ನೊಂದಾಯಿತ ಪ್ರಕರಣ ಗೈಟನ್ ದುಗ್ಗಾಸ್ ನದ್ದಾಗಿತ್ತು.
  • ಏಡ್ಸ್ ರೋಗ ಪತ್ತೆಯಾದ 8 ವರ್ಷಗಳ ಬಳಿಕವೂ ಕೂಡ ಈ ಸೋಂಕಿಗೆ ಗುರಿಯಾದವರನ್ನು ಶೇ. 92 ರಷ್ಟು ಪರುಷರಿದ್ದರು.
AIDS ಕಾಯಿಲೆಯ Patient Zero ಯಾರು ನಿಮಗೆ ಗೊತ್ತಾ? ನೀವೂ ನಂಬಲ್ಲ title=
Patient Zero Aids (Representational Image)

First Patient Of AIDS: ನವದೆಹಲಿ - ಏಡ್ಸ್ ರೋಗಕ್ಕೆ ಇದುವರೆಗೂ ಕೂಡ ಯಾವುದೇ ಉಪಚಾರ ಇಲ್ಲ.ಆದರೆ ಈ ರೋಗದ ಮೊದಲ ರೋಗಿ ಯಾವುದೇ ಒಂದು ಮಹಿಳೆ ಅಥವಾ ಪುರುಷ ಆಗಿರಲಿಲ್ಲ ಎಬ ಸಂಗತಿ ನಿಮಗೆ ತಿಳಿದಿದೆಯೇ.  ಈ ರೋಗ ಅಸುರಕ್ಷಿತ ಶಾರೀರಿಕ ಸಂಬಂಧದಿಂದ ಹರಡುತ್ತದೆ ಎಂಬ ಸಂಗತಿ ಇದೀಗ ಎಲ್ಲರಿಗೂ ಗೊತ್ತಿದೆ. ಈ ರೋಗದ ಮೊಟ್ಟ ಮೊದಲ ರೋಗಿ (Patient Zero) ಯಾರಾಗಿದ್ದರು ನಿಮಗೆ ತಿಳಿದಿದೆಯೇ? ಈ ರೋಗದ ಕುರಿತಾದ ಮತ್ತು ನಿಮಗೆ ಗೊತ್ತಿಲ್ಲದ ಕೆಲ ರೋಚಕ ಸಂಗತಿಗಳು ಇಲ್ಲಿವೆ.

ಏಡ್ಸ್ ಗೆ ಸಂಬಂಧಿಸಿದ ನೀವು ಕೇಳಿರದ ಸಂಗತಿ
ಹಲವು ಬಡ ಹಾಗೂ ಹಿಂದುಳಿದ ದೇಶಗಳಲ್ಲಿ ಇಂದಿಗೂ ಕೂಡ ಏಡ್ಸ್ ಕುರಿತು ಜಾಗರೂಕತೆಯ ಕೊರತೆ ಇದೆ.  ಇದೆ ಕಾರಣದಿಂದ ಈ ರೋಗ ವೇಗವಾಗಿ ಹರಡುತ್ತಿದೆ. ಆದರೆ, ಮೊದಲಿಗೆ ಹೋಲಿಸಿದರೆ ಜನರಲ್ಲಿ ಈ ರೋಗದ ಕುರಿತು ಜಾಗರೂಕತೆಯಲ್ಲಿ ಹೆಚ್ಚಾಗಿದೆ.

ಇದನ್ನು ಓದಿ- ಕರೋನಾದಿಂದ 5 ಲಕ್ಷ ಏಡ್ಸ್ ರೋಗಿಗಳಿಗೆ ಆಪತ್ತು: ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ WHO ಅಧ್ಯಯನ!

ಈ ರೋಗಕ್ಕೆ ಚಿಕಿತ್ಸೆ ಇಲ್ಲ
ಏಡ್ಸ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದುವರೆಗೆ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದರಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು. ಇದಕ್ಕಾಗಿ ಜನರು ಹಲವು ರೀತಿಯ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಇದುವರೆಗೆ ನಡೆದ ಸಂಶೋಧನೆಗಳ ಪ್ರಕಾರ ಈ ಸೋಂಕು ಹರಡುವುದರ ಹಿಂದೆ ಅಸುರಕ್ಷಿತ ಲೈಂಗಿಕ ಸಂಬಂಧವೇ ಬಹುದೊಡ್ಡ ಕಾರಣ ಎನ್ನಲಾಗುತ್ತದೆ.  

ಇದನ್ನು ಓದಿ- ಭಾರತದ ಮಣ್ಣಿನಲ್ಲಿದೆ ಸರ್ವ ರೋಗಕ್ಕೂ ಔಷಧ; ಕರೋನಾ ಪೀಡಿತರಿಗೆ ಯಶಸ್ವಿ ಚಿಕಿತ್ಸೆ

ಮನುಷ್ಯರಿಂದ ಹರಡಿರಲಿಲ್ಲ ಏಡ್ಸ್
ಏಡ್ಸ್ ರೋಗ ಹೇಗೆ ಹರಡಿತು ಎಂಬ ಸಂಗತಿಯನ್ನು ತಿಳಿದು ನೀವೂ ಬೆಚ್ಚಿಬೀಳುವಿರಿ. ಎಲ್ಲಕ್ಕಿಂತ ಮೊದಲು ಈ ಸೋಂಕಿಗೆ ಗುರಿಯಾದ ವ್ಯಕ್ತಿಗೆ ಈ ಸೋಂಕು ಎಲ್ಲಿಂದ ತಗುಲಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. HIV ಸೋಂಕು ತಗುಲಿದ್ದ ಮೊದಲ ರೋಗಿ ಒಂದು ಚಿಂಪಾಂಜಿಯಾಗಿತ್ತು ಎಂಬ ವಿಷಯ ತಿಳಿದು ನೀವೂ ನಿಬ್ಬೆರಗಾಗಬಹುದು. ಈ ಮಾರಣಾಂತಿಕ ವೈರಸ್ ಚಿಂಪಾಂಜಿಯ ಶರೀರದಲ್ಲಿ ಮೊದಲೇ ಇತ್ತು ಎನ್ನಲಾಗಿದೆ. ಆದರೆ ಈ ರೋಗ ಮನುಷ್ಯರಲ್ಲಿ ಹೇಗೆ ಹರಡಿತು? ಎಂಬ ಪ್ರಶ್ನೆ ಇದೀಗ ನಿಮ್ಮನ್ನು ಕಾಡುತ್ತಿರಬಹುದು. 

ಇದನ್ನು ಓದಿ- 9 ವರ್ಷದಲ್ಲಿ ಎಚ್‌ಐವಿ ಪ್ರಕರಣಗಳಲ್ಲಿ 16% ಕುಸಿತ: ವಿಶ್ವಸಂಸ್ಥೆ

ಮನುಷ್ಯರಲ್ಲಿ ಹೇಗೆ ಬಂತು?
ಈ HIV ಸೋಂಕಿತ ಚಿಂಪಾಂಜಿ 1920ರಲ್ಲಿ ಕಾಂಗೋ ದೇಶದ ಕೇಮರೂನ್ ಅರಣ್ಯದಲ್ಲಿ ಬೇಟೆಗಾರನೋರ್ವನ ಮೇಲೆ ದಾಳಿ ನಡೆಸಿತ್ತು. ಬೇಟೆಗಾರ ನಡೆಸಿದ್ದ ಮರುದಾಳಿಯಲ್ಲಿ ಚಿಂಪಾಂಜಿ ಗಾಯಗೊಂಡಿತ್ತು. ಅದರ ಶರೀರದಿಂದ ರಕ್ತ ಸೋರುತ್ತಿತ್ತು. ಬಳಿಕ ಗಾಯಗೊಂಡ ಚಿಂಪಾಂಜಿ ಬೇಟೆಗಾರನ ಮೇಲೆ ಮರುದಾಳಿ ನಡೆಸಿದೆ. ಈ ದಾಳಿಯಲ್ಲಿ ಬೇಟೆಗಾರ ಕೂಡ ಗಾಯಗೊಂಡ. 

ಈ ವೇಳೆ ಚಿಂಪಾಂಜಿಯ ರಕ್ತ ಬೇಟೆಗಾರನ ಶರೀರ ಸೇರಿದೆ ಹಾಗೂ ಈ ಮಾರಣಾಂತಿಕ ವೈರಸ್ ಮಾನವರಲ್ಲಿಯೂ ಕೂಡ ಹರಡಿತು. 

ಇದನ್ನು ಓದಿ- ಏಡ್ಸ್​ ವೈರಸ್​ಗಳಿಂದ ಜೀವ ಉಳಿಸಬಹುದೆಂದು ಸಾಧಿಸಿ ತೋರಿಸಿದ ಲಂಡನ್ ವೈದ್ಯರು

ಅಮೆರಿಕಾದ ಸಂಶೋಧನಾ ವರದಿ
ಆದರೆ, US Center for Disease Control and Prevention ವರದಿ ಈ ಸಂಗತಿಯನ್ನು ಅಲ್ಲಗಳೆಯುತ್ತದೆ. ಈ ಸಂಸ್ಥೆಯ ವರದಿಯಲ್ಲಿ ವಿಶ್ವದಲ್ಲಿ ಏಡ್ಸ್ ಹರಡಿದ್ದು ಗೇ ಕಪಲ್ ಗಳ ಮೂಲಕ ಎನ್ನಲಾಗಿದೆ. ಮೊದಲ ಬಾರಿಗೆ ಲಾಸ್ ಎಂಜಲಿಸ್ ನ ಐವರು ಯುವಕರು ಈ ಸೋಂಕಿಗೆ ಗುರಿಯಾಗಿದ್ದರು ಎಂದು ವರದಿ ಹೇಳುತ್ತದೆ.

ಪೇಶಂಟ್ ಝೀರೋ ಇವನಾಗಿದ್ದ
ಆದರೆ, ಏಡ್ಸ್ ರೋಗದ ಮೊದಲ ನೊಂದಾಯಿತ ಪ್ರಕರಣ ಗೈಟನ್ ದುಗಾಸ್ (Gatton Dugas) ಎಂದು ವರದಿಯಾಗಿತ್ತು. ವೃತ್ತಿಯಲ್ಲಿ ಫ್ಲೈಟ್ ಅಟೆಂಡರ್ ಆಗಿದ್ದ ಈ ಯುವಕನಲ್ಲಿ HIV ಸೋಂಕು ಪತ್ತೆಯಾಗಿತ್ತು. ಆತನಿಗೆ ಈ ರೋಗದ ಮಾಹಿತಿ ಕೂಡ ಇತ್ತು. ಆದರೆ, ರೋಗದ ಮಾಹಿತಿ ಇದ್ದರೂ ಕೂಡ ಇತರರಿಗೆ ಈ ಸೋಂಕು ಹರಡಲು ಆತ ಹಲವರ ಜೊತೆಗೆ ಲೈಂಗಿಕ ಸಂಬಂಧ ಬೆಳೆಸಿದ. ಹೀಗಾಗಿ ಗೈಟನ್ ನನ್ನು ಏಡ್ಸ್ ದಾಖಲೆಗಳಲ್ಲಿ 'ಪೇಶಂಟ್ ಝೀರೋ' ಹೆಸರಿನಿಂದ ಗುರುತಿಸಲಾಗುತ್ತದೆ.

ಶೇ.92 ರಷ್ಟು ಪುರುಷರಲ್ಲಿ ಈ ಸೋಂಕು ಇತ್ತು
ಏಡ್ಸ್ ಕುರಿತು ಮಾಹಿತಿ ಹೊಂದಿದ ಬಳಿಕವೂ ಕೂಡ ಎಂಟು ವರ್ಷಗಳ ಕಾಲ ಈ ಸೋಂಕಿಗೆ ಗುರಿಯಾದವರಲ್ಲಿ ಶೇ.92 ರಷ್ಟು ಜನರು ಪುರುಷರಾಗಿದ್ದರು. ಬಳಿಕ ನಿಧಾನವಾಗಿ ಈ ಮಾರಕ ಕಾಯಿಲೆ ಮಹಿಳೆಯರಲ್ಲಿಯೂ ಕೂಡ ಹರಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News