Cardamom Benefits : ದೇಹ ತೂಕ ಇಳಿಕೆಗೆ ತಪ್ಪದೆ ಪ್ರತಿ ದಿನ ರಾತ್ರಿ ಈ ರೀತಿ ಸೇವಿಸಿ 4 ಏಲಕ್ಕಿ!

ಈ ಎರಡೂ ಕಾರಣಗಳಿಂದ ಬೊಜ್ಜು ಅಥವಾ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಆರಂಭವಾಗುತ್ತದೆ. ಆದರೆ ಕೆಲವು ಮಸಾಲೆಗಳನ್ನು ಸೇವಿಸುವುದರಿಂದ ಸ್ಥೂಲಕಾಯ ಹೆಚ್ಚಾಗುವುದಿಲ್ಲ ಮತ್ತು ತೂಕ ಇಳಿಕೆ ವೇಗವಾಗಿ ಪ್ರಾರಂಭವಾಗುತ್ತದ, ಹೌದು ಇದಕ್ಕಾಗಿ ಇಲ್ಲಿದೆ ಕೆಲವು ಸಲಹೆಗಳು...

Written by - Channabasava A Kashinakunti | Last Updated : Sep 18, 2021, 09:20 PM IST
  • ಪುರುಷರ ಮತ್ತು ಮಹಿಳೆರಲ್ಲಿ ಪ್ರತಿಯೊಬ್ಬರ ತೂಕವು ವೇಗವಾಗಿ ಹೆಚ್ಚುತ್ತಿದೆ
  • ತೂಕ ಇಳಿಕೆಗೆ ಸಹಾಯ ಮಾಡುವ ಮಸಾಲೆಗಳು
  • ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಫೆನ್ನೆಲ್ ಟೀ
Cardamom Benefits : ದೇಹ ತೂಕ ಇಳಿಕೆಗೆ ತಪ್ಪದೆ ಪ್ರತಿ ದಿನ ರಾತ್ರಿ ಈ ರೀತಿ ಸೇವಿಸಿ 4 ಏಲಕ್ಕಿ! title=

ಪುರುಷರ ಮತ್ತು ಮಹಿಳೆರಲ್ಲಿ ಪ್ರತಿಯೊಬ್ಬರ ತೂಕವು ವೇಗವಾಗಿ ಹೆಚ್ಚುತ್ತಿದೆ. ವಾಸ್ತವವಾಗಿ, ನಮ್ಮ ಜೀವನಶೈಲಿ ಆರಾಮದ ಕಡೆಗೆ ಹೆಚ್ಚು ಒಲವು ತೋರಲು ಆರಂಭಿಸಿದೆ. ಅದೇ ಸಮಯದಲ್ಲಿ, ನಮ್ಮ ಆಹಾರವು ತುಂಬಾ ಅನಾರೋಗ್ಯಕರವಾಗಿದೆ. ಈ ಎರಡೂ ಕಾರಣಗಳಿಂದ ಬೊಜ್ಜು ಅಥವಾ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಆರಂಭವಾಗುತ್ತದೆ. ಆದರೆ ಕೆಲವು ಮಸಾಲೆಗಳನ್ನು ಸೇವಿಸುವುದರಿಂದ ಸ್ಥೂಲಕಾಯ ಹೆಚ್ಚಾಗುವುದಿಲ್ಲ ಮತ್ತು ತೂಕ ಇಳಿಕೆ ವೇಗವಾಗಿ ಪ್ರಾರಂಭವಾಗುತ್ತದ, ಹೌದು ಇದಕ್ಕಾಗಿ ಇಲ್ಲಿದೆ ಕೆಲವು ಸಲಹೆಗಳು...

ತೂಕ ಇಳಿಕೆಗೆ ಸಹಾಯ ಮಾಡುವ ಮಸಾಲೆಗಳು

ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಪ್ರಕಾರ, ದೈಹಿಕ ನಿಷ್ಕ್ರಿಯತೆ ಮತ್ತು ಆಹಾರದಿಂದಾಗಿ ನಮ್ಮ ತೂಕ ಹೆಚ್ಚಾಗುತ್ತದೆ. ಅದೇ ರೀತಿ, ತೂಕ ಇಳಿಸಿಕೊಳ್ಳಲು(Weight Loss) ಸರಿಯಾದ ವ್ಯಾಯಾಮದ ಜೊತೆಗೆ ಕೆಲವು ವಿಶೇಷ ಆಹಾರಗಳನ್ನ ಸೇವಿಸಬೇಕು. ಆಹಾರದಲ್ಲಿ ಈ ಕೆಳಗಿನ ಮಸಾಲೆಗಳನ್ನು ಸೇರಿಸಿ ಸೇವಿಸುವದರಿಂದ, ತೂಕವು ಬಹಳ ಬೇಗನೆ ಇಳಿಕೆ ಆಗುತ್ತದೆ.

ಇದನ್ನೂ ಓದಿ : High Uric Acid: ಹೆಚ್ಚಾಗುತ್ತಿರುವ ಯುರಿಕ್ ಆಸಿಡ್ ಪ್ರಮಾಣ ಈ ರೀತಿ ನಿಯಂತ್ರಿಸಿ, ಕೀಲು ನೋವಿನಿಂದ ಈ ರೀತಿ ಪರಿಹಾರ ಪಡೆಯಿರಿ

ತೂಕ ಇಳಿಕೆಗೆ ಈ ರೀತಿ 4 ಏಲಕ್ಕಿ ಸೇವಿಸಿ

ಏಲಕ್ಕಿ(cardamom) ತ್ವರಿತ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಏಕೆಂದರೆ, ಇದರಲ್ಲಿರುವ ಮೆಲಟೋನಿನ್ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ದೇಹವು ಕೊಬ್ಬನ್ನು ಬೇಗನೆ ಸುಡಲು ಪ್ರಾರಂಭಿಸುತ್ತದೆ. ಪ್ರತಿ ರಾತ್ರಿ ಮಲಗುವ ಮುನ್ನ 4 ಏಲಕ್ಕಿಯನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸಿ. ಇದು ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ.

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಸಮಯದಲ್ಲಿ ಕರಿಮೆಣಸನ್ನು ಅಗಿಯಿರಿ

ಡಾ. ರಂಜನಾ ಸಿಂಗ್ ಅವರ ಪ್ರಕಾರ ಏಲಕ್ಕಿಯಂತೆ ಕರಿಮೆಣಸು(Block Paper) ಕೂಡ ಚಯಾಪಚಯವನ್ನು ವೇಗಗೊಳಿಸುತ್ತದೆ. ಇದರಲ್ಲಿರುವ ಫೈಟೊನ್ಯೂಟ್ರಿಯಂಟ್ಸ್ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಬೆಳಿಗ್ಗೆ 3-4 ಕಪ್ಪು ಮೆಣಸು ಕಾಳುಗಳನ್ನು ನಿಯಮಿತವಾಗಿ ಅಗಿಯಬೇಕು. ಇದಲ್ಲದೇ, ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ಹಸಿರು ಚಹಾದಲ್ಲಿ ಸೇವಿಸಬಹುದು.

ಇದನ್ನೂ ಓದಿ : ಹಾಲಿನೊಂದಿಗೆ ಎಂದಿಗೂ ಈ ವಸ್ತುಗಳನ್ನು ಸೇವಿಸಲೇ ಬಾರದು, ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಫೆನ್ನೆಲ್ ಟೀ

ದೇಹದ ಚಯಾಪಚಯ ದರವನ್ನು ವೇಗಗೊಳಿಸುವ ಮೂರನೇ ಮಸಾಲೆ ಫೆನ್ನೆಲ್(Fennel). ಫೆನ್ನೆಲ್ ಚಯಾಪಚಯವನ್ನು ವೇಗಗೊಳಿಸುವ ಮೂಲಕ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಡಿ ಅನ್ನು ಸಹ ಒದಗಿಸುತ್ತದೆ. ಪ್ರತಿದಿನ ಫೆನ್ನೆಲ್ ಟೀ ಸೇವಿಸುವುದರಿಂದ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News